ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ದೊಡ್ಡ ಮೌಲ್ಯದ ಕರೆನ್ಸಿಗಳನ್ನು ನಿಷೇಧಿಸಿದ ನೇಪಾಳ

|
Google Oneindia Kannada News

ಕಠ್ಮಂಡು, ಡಿಸೆಂಬರ್ 14: ಭಾರತದ ನೆರೆ ರಾಷ್ಟ್ರ ನೇಪಾಳದ ಸರ್ಕಾರವು, ಭಾರತದ 2000, 500 ಹಾಗೂ 200 ರೂ. ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರಿದೆ. ನೇಪಾಳಕ್ಕೆ ಬರುವ ಪ್ರವಾಸಿಗರ ಪೈಕಿ ಭಾರತೀಯರೇ ಅತಿ ಹೆಚ್ಚು ಎಂಬ ಅಂಕಿ ಅಂಶ ಹೊರ ಬಂದರೂ ಇಂಥ ಆದೇಶ ಬಂದಿದೆ.

ನೋಟು ರದ್ದತಿ ಸಮರ್ಥಿಸಿಕೊಂಡಿದ್ದ ಶಕ್ತಿಕಾಂತ್ ದಾಸ್ ಆಯ್ಕೆ ಏಕೆ?ನೋಟು ರದ್ದತಿ ಸಮರ್ಥಿಸಿಕೊಂಡಿದ್ದ ಶಕ್ತಿಕಾಂತ್ ದಾಸ್ ಆಯ್ಕೆ ಏಕೆ?

ಈ ನಿರ್ಧಾರದಿಂದ ಭಾರತೀಯ ಪ್ರವಾಸಿಗರಿಗೆ ಆಘಾತವನ್ನುಂಟು ಮಾಡಿದೆ. ನೇಪಾಳದಲ್ಲಿ ಭಾರತೀಯ ನೋಟುಗಳ ಚಲಾವಣೆಗೆ ಮಾನ್ಯತೆಯಿದೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ 1000 ಹಾಗೂ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಷೇಧಿಸಿ, ಮೋದಿ ಸರ್ಕಾರವು ನೋಟ್ ಬ್ಯಾನ್ ಜಾರಿಗೊಳಿಸಿತ್ತು.

ಅಪನಗದೀಕರಣ ಬಳಿಕ 22 ದಿನದಲ್ಲಿ ಮುದ್ರಿಸಿದ ನೋಟುಗಳೆಷ್ಟು? ಮಾಹಿತಿ ನೀಡಿ ಅಪನಗದೀಕರಣ ಬಳಿಕ 22 ದಿನದಲ್ಲಿ ಮುದ್ರಿಸಿದ ನೋಟುಗಳೆಷ್ಟು? ಮಾಹಿತಿ ನೀಡಿ

ಇದಾದ ಬಳಿಕ 2000, 500 ಹಾಗೂ 200 ರೂ. ಮುಖ ಬೆಲೆಯ ನೋಟುಗಳು ಚಲಾವಣೆಗೆ ತರಲಾಗಿತ್ತು. ಈ ನೋಟುಗಳನ್ನು ನೇಪಾಳದಲ್ಲೂ ಬಳಸಬಹುದಾಗಿತ್ತು.

Nepal bans higher denomination Indian Currency notes

ನೇಪಾಳ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ನೇಪಾಳದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಲಿದೆ. ಆದರೆ, ಇದು ಅನಿವಾರ್ಯ, ನಕಲಿ ನೋಟು ಜಾಲವನ್ನು ಹತ್ತಿಕ್ಕಲು ಇದೇ ಸೂಕ್ತ ಕ್ರಮ ಎಂದು ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವ ಗೋಕುಲ್ ಪ್ರಸಾದ್ ಬಸ್ಕೊಟ ಹೇಳಿದ್ದಾರೆ.(ಪಿಟಿಐ)

English summary
The government has asked the people to refrain from keeping or carrying Indian bank notes higher than Rs 100 denomination as it has not legalised them, The Kathmandu Post quoted Minister for Information and Communications Gokul Prasad Baskota as saying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X