• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking; ನೇಪಾಳದಲ್ಲಿ 19 ಜನರಿದ್ದ ವಿಮಾನ ನಾಪತ್ತೆ

|
Google Oneindia Kannada News

ಕಡ್ಮಂಡು, ಮೇ 29; ನೇಪಾಳದಲ್ಲಿ ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿದೆ. ನಾಲ್ವರು ಭಾರತೀಯರು, ಮೂವರು ಜಪಾನಿ ಪ್ರಜೆಗಳು ಸೇರಿದಂತೆ 19 ಜನರು ವಿಮಾನದಲ್ಲಿದ್ದರು.

ಭಾನುವಾರ ಬೆಳಗ್ಗೆ 9.55ಕ್ಕೆ ಪೋಕ್ರಾದಿಂದ ಹೊರಟಿದ್ದ ವಿಮಾನ ನಾಪತ್ತೆಯಾಗಿದೆ. ವಿಮಾನವು ಜಾಮ್‌ಸೋನ್ ಎಂಬ ಪ್ರದೇಶಕ್ಕೆ ತಲುಪಬೇಕಿತ್ತು.

ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ವಿಮಾನದಲ್ಲಿ ಸಿಬ್ಬಂದಿ ಸೇರಿ 22 ಜನರಿದ್ದರು ಎಂದು ವರದಿ ಮಾಡಿವೆ.

ತಾರಾ ಏರ್ 9 ಎರಡು ಇಂಜಿನ್‌ಗಳ ಚಿಕ್ಕ ಪ್ರಯಾಣಿಕ ವಿಮಾನವಾಗಿದೆ. ನೇಪಾಳ ರಾಜಧಾನಿ ಕಟ್ಮಂಡುವಿನಿಂದ 200 ಕಿ. ಮೀ. ದೂರದಲ್ಲಿ ವಿಮಾನ ನಾಪತ್ತೆಯಾಗಿದೆ. ಭಾನುವಾರ ಬೆಳಗ್ಗೆ 9.55ರ ಬಳಿಕ ವಿಮಾನ ಸಂಪರ್ಕಕ್ಕೆ ಸಿಕ್ಕಿಲ್ಲ.

ನೇಪಾಳದ ಗೃಹ ಇಲಾಖೆ ವಿಮಾನ ಹುಡುಕಾಟಕ್ಕೆ ಹೆಲಿಕಾಪ್ಟರ್ ನಿಯೋಜನೆ ಮಾಡಿದೆ. ನೇಪಾಳ ಸೇನೆಯ ವಿಮಾನಗಳು ಸಹ ನಾಪತತೆಯಾದ ಪ್ರಯಾಣಿಕ ವಿಮಾನದ ಹುಡುಕಾಟದಲ್ಲಿ ತೊಡಗಿವೆ.

English summary
Nepal's Tara Air's 9 NAET twin-engine aircraft carrying 19 passengers has lost contact. 4 Indian and 3 Japanese nationals also in the flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X