ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾವಲಿಯಲ್ಲಿ ಕೋವಿಡ್‌ ಹೊಸ ರೂಪಾಂತರ: WHO ಹೇಳುವುದೇನು?

|
Google Oneindia Kannada News

ಜಿನೀವಾ, ಜನವರಿ 28: ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಕಂಡುಬರುವ ನಿಯೋಕೋವ್ ಕೊರೊನಾ ವೈರಸ್‌ ರೂಪಾಂತರವು ಮನುಷ್ಯರಿಗೆ ಅಪಾಯವನ್ನುಂಟುಮಾಡುತ್ತದೆಯೇ ಎಂಬುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಈ ನಿಯೋಕೋವ್ ಕೊರೊನಾ ವೈರಸ್‌ ರೂಪಾಂತರದ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

"ಅಧ್ಯಯನದಲ್ಲಿ ಪತ್ತೆಯಾದ ವೈರಸ್ ಮನುಷ್ಯರಿಗೆ ಅಪಾಯವನ್ನುಂಟುಮಾಡುತ್ತದೆಯೇ ಎಂಬುವುದರ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯು ರಷ್ಯಾದ ಸುದ್ದಿ ಸಂಸ್ಥೆ ಟಾಸ್‌ಗೆ ತಿಳಿಸಿದೆ. "ವಿಶ್ವ ಆರೋಗ್ಯ ಸಂಸ್ಥೆ ವುಹಾನ್ ವಿಜ್ಞಾನಿಗಳ ಹೊಸ ಸಂಶೋಧನೆಯ ಬಗ್ಗೆ ಮಾಹಿತಿ ತಿಳಿದಿದೆ. ಇದಕ್ಕೆ ಪ್ರತಿಕ್ರಿಯಿಸಲು ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ಕೃಷಿ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದೆ," ಎಂದು ಕೂಡಾ ಮಾಹಿತಿ ನೀಡಿದೆ.

NeoCov: ಕೊರೊನಾವೈರಸ್ ಹೊಸ ರೂಪಾಂತರ: ನಿಯೋಕೋವ್ ಅಂಟಿದ ಮೂವರಲ್ಲಿ ಒಬ್ಬರ ಸಾವು ಪಕ್ಕಾ!NeoCov: ಕೊರೊನಾವೈರಸ್ ಹೊಸ ರೂಪಾಂತರ: ನಿಯೋಕೋವ್ ಅಂಟಿದ ಮೂವರಲ್ಲಿ ಒಬ್ಬರ ಸಾವು ಪಕ್ಕಾ!

"ಪ್ರಾಣಿಗಳು, ವಿಶೇಷವಾಗಿ ಕಾಡು ಪ್ರಾಣಿಗಳು ಮಾನವರಲ್ಲಿ ಕಂಡು ಬರುವ ಎಲ್ಲಾ ಸಾಂಕ್ರಾಮಿಕ ರೋಗಗಳ ಶೇಕಡ 75ಕ್ಕಿಂತ ಅಧಿಕ ಮೂಲವಾಗಿದೆ. ಅವುಗಳಲ್ಲಿ ಹೆಚ್ಚಿನವು ಸಾಂಕ್ರಾಮಿಕ ವೈರಸ್‌ಗಳು ಆಗಿರುತ್ತದೆ. ಕೊರೊನಾವೈರಸ್‌ಗಳು ಹೆಚ್ಚಾಗಿ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಬಾವಲಿಗಳು ಸೇರಿದಂತೆ ಹಲವಾರು ಪ್ರಾಣಿಗಳಲ್ಲಿ ಕಂಡುಬರುತ್ತದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯು ಉಲ್ಲೇಖ ಮಾಡಿದೆ.

Neocov: What Who Says on This New Coronavirus Variant Found Among Bats in Wuhan

ಚೀನಾದ ಸಂಶೋಧಕರು ಈ ಹೊಸ ರೂಪಾಂತರವನ್ನು ತಮ್ಮ ಸಂಶೋಧನಾ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಈ ವೈರಸ್ ಹೆಚ್ಚಿನ ಸಾವಿಗೆ ಕಾರಣವಾಗಬಹುದು ಹಾಗೂ ಹೆಚ್ಚು ಸಾಂಕ್ರಾಮಿಕವಾಗಿ ಹರಡಬಹುದು ಎಂದು ತಿಳಿಸಿದ್ದಾರೆ. ಇದು SARS-CoV-2 ಅಲ್ಲ ಆದರೆ MERS ಕೊರೊನಾವೈರಸ್‌ಗೆ ಸಂಬಂಧಿಸಿದ ವೈರಸ್‌ ಆಗಿದೆ. ಈ ವೈರಸ್‌ ಸೋಂಕಿತ 3 ಜನರಲ್ಲಿ 1 ಜನರು ಸಾವನ್ನಪ್ಪುತ್ತಾರೆ ಎಂದು ಈ ಅಧ್ಯಯನ ವರದಿ ಹೇಳಿದೆ.

ಏನಿದು MERS ಕೊರೊನಾ ವೈರಸ್‌?

MERS ಕೊರೊನಾವೈರಸ್ ಉಸಿರಾಟದ ತೊಂದರೆಯನ್ನು ಉಂಟು ಮಾಡುವ ಕೊರೊನಾವೈರಸ್ ಆಗಿದೆ. ಇದು ಝೂನೋಟಿಕ್ ವೈರಸ್, ಅಂದರೆ ಇದು ಪ್ರಾಣಿಗಳು ಮತ್ತು ಜನರ ನಡುವೆ ಹರಡುತ್ತದೆ. ಇದನ್ನು ಮೊದಲು ಸೌದಿ ಅರೇಬಿಯಾದಲ್ಲಿ 2012 ರಲ್ಲಿ ಗುರುತಿಸಲಾಯಿತು. ವಿಶ್ವ ಸಂಸ್ಥೆ ಮಾಹಿತಿಯ ಪ್ರಕಾರ MERS-CoV ಕಾಣಿಸಿಕೊಂಡ ಸುಮಾರು 35 ಪ್ರತಿಶತ ರೋಗಿಗಳು ಸಾವನ್ನಪ್ಪಿದ್ದಾರೆ. MERS ಬಂದವರಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳಂತಹ ಲಕ್ಷಣಗಳು ಕಂಡು ಬರುತ್ತದೆ. ನ್ಯುಮೋನಿಯಾ, ಅತಿಸಾರ ಸೇರಿದಂತೆ ಜಠರಗರುಳಿನ ಲಕ್ಷಣಗಳು ಸಹ ಕಂಡು ಬರುತ್ತದೆ. ಆದರೆ ಇದು ತುಂಬಾ ಸಾಮಾನ್ಯವಾಗಿ ಕಂಡು ಬರುವ ಲಕ್ಷಣವಲ್ಲ. MERS-CoV ಸೋಂಕು ಮಾನವನಲ್ಲಿ ಕಂಡು ಬಂದರೆ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಾ ಹೋಗುತ್ತದೆ.

ಇತ್ತೀಚಿನ ಕೆಲವು ದಿನಗಳಲ್ಲಿ, ಫ್ಲೊರೊನಾ, ಡೆಲ್ಟಾಕ್ರೋನ್‌ ನಂತಹ ಪದಗಳು ಕೋವಿಡ್ ಪರಿಭಾಷೆಯ ಒಂದು ಭಾಗವಾಗಿದೆ. ಕೊರೊನಾ ವೈರಸ್‌ನ ಹೊಸ ರೂಪಾಂತರಗಳು ಪತ್ತೆಯಾಗುತ್ತಿದ್ದಂತೆ ಹೊಸ ಹೊಸ ಹೆಸರುಗಳು ಕೂಡಾ ಹುಟ್ಟುತ್ತಿದೆ. ಆದಾಗ್ಯೂ, ಫ್ಲೋರೋನಾ ಮತ್ತು ಡೆಲ್ಟಾಕ್ರಾನ್ ನಿಜವಾದ ಕೋವಿಡ್‌ ರೂಪಾಂತರಗಳಲ್ಲ. ಫ್ಲೂ ಮತ್ತು ಕೊರೊನಾ ವೈರಸ್‌ ಜೊತೆಯಾಗಿದ್ದರೆ ಅದನ್ನು ಫ್ಲೋರೋನಾ ಎಂದು ಹಾಗೂ ಡೆಲ್ಟಾ ಮತ್ತು ಓಮಿಕ್ರಾ‌ನ್‌ ಜೊತೆಯಾಗಿದ್ದರೆ ಅದನ್ನು ಡೆಲ್ಟಾಕ್ರಾನ್ ಎಂದು ಕರೆಯಲಾಗುತ್ತದೆ. ಓಮಿಕ್ರಾನ್‌ BA.2 ಓಮಿಕ್ರಾನ್‌ನ ಮತ್ತೊಂದು ಸ್ಟ್ರೈನ್ ಆಗಿದೆ. ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಓಮಿಕ್ರಾನ್‌ಗಳು ವಿಶ್ವ ಆರೋಗ್ಯ ಸಂಸ್ಥೆಯು ವರ್ಗೀಕರಿಸಲ್ಪಟ್ಟ ಕಾಳಜಿಯ ರೂಪಾಂತರಗಳಾಗಿವೆ. ಆದರೆ ನಿಯೋಕೋವ್ ವಿಶ್ವ ಸಂಸ್ಥೆ ವರ್ಗೀಕೃತ SARS-CoV-2 ಅಲ್ಲ; ಇದು ಪ್ರತ್ಯೇಕ ವೈರಸ್ ಆಗಿದೆ. (ಒನ್‌ಇಂಡಿಯಾ ಸುದ್ದಿ)

English summary
NeoCov: What WHO says on this new coronavirus variant found among bats in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X