ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಪುತ್ರಿ ನಿಧನ

|
Google Oneindia Kannada News

ಜೋಹಾನ್ಸ್‌ಬರ್ಗ್, ಜುಲೈ 13: ಶತಮಾನದ ಕಪ್ಪು ಜನರ ನಾಯಕ, ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಪುತ್ರಿ ಜಿಂದಜೀ(59) ನಿಧನರಾಗಿದ್ದಾರೆ.

ಆಕೆಯ ಮರಣ ಸಂದರ್ಭದಲ್ಲಿ ಡೆನ್‌ಮಾರ್ಕ್‌ನ ರಾಯಭಾರಿಯಾಗಿದ್ದಳು.ಜೋಹಾನ್ಸ್‌ ಬರ್ಗ್‌ನ ಆಸ್ಪತ್ರೆಯೊಂದರಲ್ಲಿ ಜಿಂದಜೀ ಸಾವನ್ನಪ್ಪಿದ್ದಾರೆ.ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜಿಂದಜೀ ಅವರು ನೆಲ್ಸನ್ ಮಂಡೇಲಾ ಆವರ ಆರನೇ ಪುತ್ರಿಯಾಗಿದ್ದಾರೆ.

ವರ್ಣಭೇದದ ವಿರುದ್ಧದ ಹೋರಾಟಗಾರ್ತಿ ವಿನ್ನಿ ಮಂಡೇಲಾ ನಿಧನ

ನೆಲ್ಸನ್ ಮಂಡೇಲಾ ಅವರ ಆರು ಮಕ್ಕಳಲ್ಲಿ ಕೇವಲ ಇಬ್ಬರು ಮಾತ್ರ ಬದುಕುಳಿದಿದ್ದಾರೆ.ಆಕೆಯ ತಂದೆ ನೆಲ್ಸನ್ ಮಂಡೇಲಾ ಅವರು ಜೈಲುವಾಸದ 27 ವರ್ಷಗಳ ಶಿಕ್ಷೆಯಲ್ಲಿ 18 ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು.

Nelson Mandelas Daughter Dies In South Africa

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ನೆಲ್ಸನ್ ಮಂಡೇಲಾ ಅವರು 2013ರ ಜೂನ್‌ನಿಂದ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದಿದ್ದರು. ಬಳಿಕ ಸೆಪ್ಟೆಂಬರ್‌ನಿಂದ ಜೋಹನ್ಸ್‌ಬರ್ಗ್‌ನ ಉಪನಗರ ಹೂಂಗ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲಿ ವೈದ್ಯಕೀಯ ತಂಡದ ನಿಗಾದಲ್ಲಿದ್ದರು.

ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ಅಧ್ಯಕ್ಷರಾಗಿದ್ದ ಮಂಡೇಲಾ ಅವರಿಗೆ ಭಾರತ 1990ರಲ್ಲಿ ತನ್ನ ಅತ್ಯುನ್ನತ ನಾಗರಿಕ ಮನ್ನಣೆ 'ಭಾರತ ರತ್ನ' ನೀಡಿ ಗೌರವಿಸಿತ್ತು. ನೊಬೆಲ್ ಪ್ರಶಸ್ತಿಯೂ ಅವರಿಗೆ ಒಲಿದು ಬಂದಿತ್ತು.

ಮಂಡೇಲಾ ಮೊದಲಿಗೆ ವಕೀಲಿಕೆ ಮಾಡುತ್ತಿದ್ದರು. ಕೆಲ ಕಾಲ ಬಾಕ್ಸರ್ ಆಗಿಯೂ ಹೆಸರು ಗಳಿಸಿದ್ದರು. ಸರಿಯಾಗಿ 50 ವರ್ಷಗಳ ಹಿಂದೆ ವರ್ಣಭೇದ ನೀತಿಯ ಸಂಕೋಲೆಗೆ ಸಿಲುಕಿ ನರಳುತ್ತಿದ್ದ ದಕ್ಷಿಣ ಆಫ್ರಿಕಾದ ಕಪ್ಪು ಜನರಿಗೆ ಘನತೆಯ ಬಾಳು ಕಲ್ಪಿಸುವ ಪಣ ತೊಟ್ಟು ಬಿಳಿಯರ ವಿರುದ್ಧ ಸಿಡಿದೆದ್ದರು.

ದೇಶಾದ್ಯಂತ ಚಳವಳಿ ಹುಟ್ಟು ಹಾಕಿದರು. ವರ್ಣಭೇದ ನೀತಿಯ ಕರಾಳ ಮುಖವನ್ನು ಇಡೀ ಪ್ರಪಂಚದ ಮುಂದೆ ಅನಾವರಣಗೊಳಿಸಿ ಎಲ್ಲರ ಮನೆ, ಮನ ಗೆದ್ದರು. ನೆಲ್ಸನ್ ಮಂಡೇಲಾ(95) ಭಾರತೀಯ ಕಾಲಮಾನ 2013 ರ ಡಿಸೆಂಬರ್ 7 ರಂದು ನಿಧನರಾಗಿದ್ದರು.

English summary
Zindzi Mandela, the youngest daughter of South Africa's first black president Nelson Mandela has died aged 59, local media reported Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X