ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ತಾಲಿಬಾನ್ ನೆರವು ಪಡೆಯಲಿದೆ ಪಾಕಿಸ್ತಾನ: ನೀಲಂ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 24: ಪಾಕಿಸ್ತಾನವು ಕಾಶ್ಮೀರದಲ್ಲಿ ತಾಲಿಬಾನ್ ನೆರವು ಪಡೆಯಲಿರುವ ಬಗ್ಗೆ ಖುದ್ದಾಗಿ ಪಾಕ್‌ನ ಆಡಳಿತಾರೂಢ ಪಕ್ಷದ ಮುಖಂಡೆಯೊಬ್ಬರು ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರ ಕಾಶ್ಮೀರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಮಾತನಾಡಿರುವುದಾಗಿ ಆ ದೇಶದ ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್ ನೊಂದಿಗೆ ನಿಕಟ ಒಪ್ಪಂದ ಮತ್ತು ಅದರ ಭಾರತ ವಿರೋಧಿ ಅಜೆಂಡಾವನ್ನು ಒಪ್ಪಿಕೊಂಡಿದ್ದಾರೆ.

 ಅಂದರಾಬ್ ಕಣಿವೆಯಲ್ಲಿ ಆಹಾರ ಸರಬರಾಜಿಗೆ ತಾಲಿಬಾನಿಗಳ ತಡೆ: ಸಾಲೇಹ್ ಅಂದರಾಬ್ ಕಣಿವೆಯಲ್ಲಿ ಆಹಾರ ಸರಬರಾಜಿಗೆ ತಾಲಿಬಾನಿಗಳ ತಡೆ: ಸಾಲೇಹ್

ಕೂಡಲೇ ಪಿಟಿಐ ನಾಯಕಿಯನ್ನು ಎಚ್ಚರಿಸಿದ ಆ್ಯಂಕರ್, ನೀವು ಏನು ಹೇಳುತ್ತಿದ್ದೀರಾ ಎಂಬುದರ ಬಗ್ಗೆ ಅರಿವಿದೆಯೇ? ಈ ಶೋ ವಿಶ್ವದಾದ್ಯಂತ ಪ್ರಸಾರವಾಗಲಿದ್ದು, ಭಾರತೀಯರು ವೀಕ್ಷಿಸಲಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ತನ್ನ ಹೇಳಿಕೆಯನ್ನು ಮುಂದುವರೆಸಿದ ಇರ್ಶಾದ್ ಶೇಕ್, ತಾಲಿಬಾನ್ ಗಳನ್ನು ಸರಿಯಾಗಿ ಕಾಣದ ಕಾರಣ ಪಾಕಿಸ್ತಾನಕ್ಕೆ ನೆರವು ನೀಡಲಿದ್ದಾರೆ ಎಂದರು.

Neelam Says Pakistan Will Take Help Of Taliban In Kashmir

ಇದಕ್ಕೂ ಮುನ್ನ ತಾಲಿಬಾನ್ ಪೋಷಣೆಯಲ್ಲಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರವಿರುವುದಾಗಿ ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿತ್ತು.
ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗೆ ಕೈ ಜೋಡಿಸುವುದಾಗಿ ತಾಲಿಬಾನ್ ಘೋಷಿಸಿದೆ. ನಿಮ್ಮೊಂದಿಗೆ ಇದ್ದೇವೆ. ಕಾಶ್ಮೀರದಲ್ಲಿ ನೆರವು ನೀಡುವುದಾಗಿ ತಾಲಿಬಾನ್ ಹೇಳಿರುವುದಾಗಿ ಪಿಟಿಐ ಮುಖಂಡೆ ನೀಲಂ ಇರ್ಶಾದ್ ಶೇಕ್ ಟಿವಿ ಚಾನೆಲ್ ವೊಂದರ ಚರ್ಚೆ ವೇಳೆಯಲ್ಲಿ ಹೇಳಿಕೆ ನೀಡಿದ್ದಾರೆ.

ಪಾಕ್​ ಸುದ್ದಿ ವಾಹಿನಿಯ ಡಿಬೇಟ್​ನಲ್ಲಿ ಭಾಗವಹಿಸಿದ್ದ ನೀಲಂ ಶೇಖ್​ ನೀಡಿರುವ ಇನ್ನೊಂದು ಹೇಳಿಕೆ ಇದೀಗ ಬಹುದೊಡ್ಡ ವಿವಾದ ಸೃಷ್ಟಿಸಿದೆ. ತಾಲಿಬಾನಿಗಳು ಖಂಡಿತ ಇಲ್ಲಿಗೆ ವಾಪಸ್​ ಬರುತ್ತಾರೆ. ಕಾಶ್ಮೀರವನ್ನು ಗೆದ್ದು, ನಮಗೆ ಅಂದರೆ ಪಾಕಿಸ್ತಾನಕ್ಕೆ ಕೊಡುತ್ತಾರೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಇಮ್ರಾನ್​ ಖಾನ್​ ಪ್ರಧಾನಿಯಾದ ಮೇಲೆ ಪಾಕಿಸ್ತಾನ ಅಭಿವೃದ್ಧಿಗೊಂಡಿದೆ. ಈ ದೇಶದ ಮೌಲ್ಯ ಹೆಚ್ಚಿದೆ. ಪಾಕಿಸ್ತಾನದ ಜತೆ ನಾವು ಸದಾ ಇದ್ದೇವೆ ಎಂದು ತಾಲಿಬಾನಿಗಳು ನಮಗೆ ಹೇಳಿದ್ದಾರೆ. ಖಂಡಿತ ಕಾಶ್ಮೀರವನ್ನು ವಶಕ್ಕೆ ಪಡೆದು ನಂತರ ನಮಗೆ ಹಸ್ತಾಂತರ ಮಾಡುತ್ತಾರೆ ಎಂದು ನೀಲಂ ಹೇಳಿದ್ದಾರೆ.

ಪಾಕಿಸ್ತಾನ ಯಾವಾಗಲೂ ತಾಲಿಬಾನಿಗಳಿಗೆ ಬೆಂಬಲ, ನೆರವು ನೀಡುತ್ತಿದೆ. ಅದು ಈಗ ಮತ್ತೆ ಆಡಳಿತ ಹಿಡಿದಿದ್ದೇ ಪಾಕಿಸ್ತಾನ ಮತ್ತು ಅದರ ಗುಪ್ತಚರ ಇಲಾಖೆ ಐಎಸ್​ಐ ಸಲುವಾಗಿ ಎಂದು ಅಮೆರಿಕ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ.

ಅದಕ್ಕೆ ತಕ್ಕಂತೆ ತಾಲಿಬಾನ್ ಆಡಳಿತ ಬರುತ್ತಿದ್ದಂತೆ ಪಾಕಿಸ್ತಾನದಲ್ಲಿ ಸಂಭ್ರಮವೂ ಹೆಚ್ಚಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್​ ಕೂಡ ತಾಲಿಬಾನ್​ನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಮಾನಸಿಕ ಗುಲಾಮತನದ ಸರಪಳಿಯನ್ನು ತಾಲಿಬಾನಿಗಳು ಕತ್ತರಿಸಿದ್ದಾರೆ ಎಂದು ಹೇಳಿದ್ದರು.

ಟಿವಿ ನಿರೂಪಕ, ಕಾಶ್ಮೀರ ಗೆದ್ದು ಪಾಕಿಸ್ತಾನಕ್ಕೆ ಕೊಡುತ್ತೇವೆ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ನೀಲಂ ಬಳಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನೀಲಂ, ಭಾರತ ನಮ್ಮನ್ನು ವಿಭಜಿಸಿದೆ..ನಾವು ಮತ್ತೊಮ್ಮೆ ತಾಲಿಬಾನಿಗಳೊಟ್ಟಿಗೆ ಒಂದಾಗುತ್ತೇವೆ. ಪಾಕ್​ ಸೇನೆ ಬಲಿಷ್ಠವಾಗಿದೆ.

ನಮ್ಮ ಸರ್ಕಾರಕ್ಕೂ ಸಾಕಷ್ಟು ಅಧಿಕಾರವಿದೆ. ಎಲ್ಲಕ್ಕೂ ಮಿಗಿಲಾಗಿ ತಾಲಿಬಾನ್​ ನಮ್ಮೊಂದಿಗೆ ಇದೆ. ಅವರಿಗೂ ನಮ್ಮ ಸರ್ಕಾರ ಬೆಂಬಲ ನೀಡುತ್ತದೆ. ಹಾಗಾಗಿ ಅವರು ಖಂಡಿತ ಕಾಶ್ಮೀರವನ್ನು ಗೆದ್ದು ನಮಗೆ ಕೊಡುತ್ತಾರೆ ಎಂದು ನೀಲಂ ಉತ್ತರಿಸಿದ್ದಾರೆ.

English summary
Pakistan will take help of Taliban in Kashmir, says Pak PM Imran Khan's party leader of the ruling Pakistan Tehree-e-insaf government talked about taking help of the Taliban in Kashmir During An On Air Television Show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X