• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾ ನೌಕಾಪಡೆ ಮೇಲೆ ಕೊರೊನಾ ಅಟ್ಯಾಕ್: 4 ಸಾವಿರ ಸಿಬ್ಬಂದಿಗೆ ಕ್ವಾರಂಟೈನ್

|

ಕಟ್ಮಂಡು, ಏಪ್ರಿಲ್ 25: ಶ್ರೀಲಂಕಾ ನೌಕಾಪಡೆಯ 60 ಮಂದಿಗೆ ಕೊರೊನಾ ಸೋಂಕು ತಗುಲಿದ್ದ ಪರಿಣಾಮ ನೌಕಾಪಡೆಯ 4 ಸಾವಿರ ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.

ಎರಡು ದಿನಗಳಲ್ಲಿ ನೌಕಾಪಡೆಗೆ ಸಂಬಂಧಿಸಿದ 60 ಪ್ರಕರಣಗಳು ದೃಢಪಟ್ಟಿವೆ ಎಂದು ಶ್ರೀಲಂಕಾ ಸೇನೆಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಮಾಹಿತಿ ನೀಡಿದ್ದು, 60 ಮಂದಿಯ ಸಂಪರ್ಕದಲ್ಲಿದ್ದ 4,000 ಮಂದಿಯನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 30 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು, ನಂತರದಲ್ಲಿ ಮತ್ತೆ 30 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರನ್ನು ಕ್ವಾರಂಟೈನ್‌ನಲ್ಲಿರಿಸುವಂತೆ ಶ್ರೀಲಂಕಾ ನೌಕಾಪಡೆ ಆದೇಶಿಸಿದೆ.

ಮಾರ್ಚ್ 20ರಿಂದ ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಇದುವರೆಗೆ 420 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ಕರ್ಫ್ಯೂವನ್ನು ಏಪ್ರಿಲ್ 27ರವರೆಗೆ ಮುಂದೂಡಲಾಗಿದೆ.

English summary
Nearly 4,000 Sri Lankan Navy personnel and their families have been quarantined at a major naval facility after 60 COVID-19 cases were confirmed in two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X