• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವಿರ ಕುಳಿಗಳ ಸರದಾರ ಚಂದ್ರ, ನೀರು ಕಂಡ ಬೆನ್ನಲ್ಲೇ ಮತ್ತೊಂದು ವಿಸ್ಮಯ

|

ಹಾಗೇ ಸುಮ್ಮನೆ ರಾತ್ರಿ ಹೊತ್ತಲ್ಲಿ ಚಂದ್ರನನ್ನ ದಿಟ್ಟಿಸಿ ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಕಣ್ಣಿಗೆ ಚಂದ್ರನ ಮೇಲೆ ಏನೆಲ್ಲಾ ಗೋಚರಿಸಬಹುದು..? ಏನು ಕಾಣಿಸದೇ ಇದ್ದರೂ ಚಂದ್ರನ ಮೇಲಿನ ಕುಳಿಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಆದರೆ ಹೀಗೆ ಕಾಣುವ ಕುಳಿಗಳು ಒಂದು, ಎರಡರ ಲೆಕ್ಕದಲ್ಲಿ ಇಲ್ಲ. ಬದಲಾಗಿ ಹತ್ತಾರು ಸಾವಿರ ಕುಳಿಗಳು ಚಂದ್ರನ ಮೇಲೆ ಇವೆ ಎಂದು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

ಚೀನಾ ಈಗಾಗಲೇ 2 ಬಾರಿ ಚಂದ್ರನ ಅಧ್ಯಯನಕ್ಕೆ ಉಪಗ್ರಹ ಕಳುಹಿಸಿದೆ, ಇದೇ ರೀತಿ ಕಳೆದ ಬಾರಿ ಚಂದ್ರನ ಅಧ್ಯಯನಕ್ಕೆ ತೆರಳಿದ್ದಾಗ ಕುಳಿಗಳನ್ನ ಲೆಕ್ಕ ಹಾಕಲು ನಿರ್ಧರಿಸಿದ್ದರಂತೆ. ಆರ್ಟಿಫಿಷಿಯಲ್ ಮೆಮೊರಿ ತಂತ್ರಜ್ಞಾನ ಆಧಾರಿತ ನೆಟ್ವರ್ಕ್ ಬಳಸಿ ಚಂದ್ರನ ಮೇಲೆ ಎಷ್ಟು ಗುಂಡಿಗಳು ಬಿದ್ದಿವೆ ಎಂದು ಲೆಕ್ಕ ಹಾಕಿ ಹೇಳಿದೆ ಚೀನಾ.

ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ

ಚಂದ್ರನ ಎಲ್ಲಾ ಗುಂಡಿಗಳನ್ನು ಲೆಕ್ಕಹಾಕಿ ಹೇಳುವುದಾದರೆ ಸುಮಾರು 1 ಲಕ್ಷದ ಸಮೀಪ ಇವುಗಳ ಸಂಖ್ಯೆ ಹರಡಿದೆ ಎಂದಿದ್ದಾರೆ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಸಂಶೋಧಕರು.

ಚೀನಾಗೆ ಚಂದ್ರನ ಮೇಲೆ ವ್ಯಾಮೋಹ

ಚೀನಾಗೆ ಚಂದ್ರನ ಮೇಲೆ ವ್ಯಾಮೋಹ

ಚಂದ್ರ ಬಹುಪಾಲು ಧರ್ಮಗಳಿಗೆ ದೇವರ ಸಮಾನ. ಹಾಗೇ ಚೀನಿಯರು ಕೂಡ ಚಂದ್ರನಿಗೆ ವಿಶೇಷ ಸ್ಥಾನ ನೀಡುತ್ತಾರೆ. ಚೀನಿಯರ ಧರ್ಮದಲ್ಲಿ ಚಂದ್ರನಿಗೆ ಮಹತ್ವದ ಸ್ಥಾನಮಾನ ಇದೆ. ಹೀಗೆ ಚಂದ್ರನ ಕುರಿತಾಗಿ ನೂರಾರು ವರ್ಷಗಳಿಂದ ಕುತೂಹಲ ಬೆಳೆಸಿಕೊಂಡು ಬಂದಿದ್ದಾರೆ ಚೀನಿಯರು. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಶಕ್ತಿಶಾಲಿಯಾದ ಬಳಿಕ ಚಂದ್ರನ ಮೇಲೆ ಭಾರಿ ಗಮನ ಇಟ್ಟಿದೆ. ಏಕೆಂದರೆ ಅಲ್ಲಿರುವ ಸಂಪತ್ತು ಮಂದೆ ತನಗೆ ಲಾಭ ತರಲಿದೆ ಎಂಬುದು ಚೀನಿ ಗ್ಯಾಂಗ್ ಲೆಕ್ಕಾಚಾರ.

ಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾ

ಚಂದ್ರನ ವಶಕ್ಕೆ ಬಲಿಷ್ಠರ ಸ್ಪರ್ಧೆ..!

ಚಂದ್ರನ ವಶಕ್ಕೆ ಬಲಿಷ್ಠರ ಸ್ಪರ್ಧೆ..!

ಭೂಮಿಯನ್ನು ಬಿಟ್ಟರೆ ಭವಿಷ್ಯದಲ್ಲಿ ಮಾನವನಿಗೆ ನೆರವಾಗುವ ಸಮೀಪದ ಆಕಾಶ ಕಾಯ ಎಂದರೆ ಚಂದ್ರ. ಈ ಹಿನ್ನೆಲೆಯಲ್ಲಿ ಚಂದ್ರನ ಮೇಲೆ ಹಿಡಿತ ಸಾಧಿಸಲು ಜಗತ್ತಿನ ಬಲಿಷ್ಠ ದೇಶಗಳ ನಡುವೆ ಪೈಪೋಟಿ ಇದೆ. ಭಾರತದ ಹೆಮ್ಮೆಯ ಇಸ್ರೋ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಏಕೆಂದರೆ ಚಂದ್ರನ ಮೇಲೆ ಸಂಶೋಧನೆ ನಡೆಸಲು ಈಗಾಗಲೇ ಇಸ್ರೋ 2 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾಯಿಸಿದೆ. ಅಲ್ಲದೆ 2008ರಲ್ಲಿ ಮೊದಲ ಬಾರಿ ಹಾರಿದ್ದ ‘ಚಂದ್ರಯಾನ-1' ಚಂದ್ರನ ಮೇಲೆ ನೀರು ಇದೆ ಎಂಬುದನ್ನ ಕನ್ಫರ್ಮ್ ಮಾಡಿತ್ತು. ಹೀಗೆ ಜಗತ್ತಿನಲ್ಲಿ ಮೊಟ್ಟಮೊದಲು ಚಂದ್ರನ ಮೇಲೆ ನೀರು ಇದೆ ಎಂಬುದನ್ನ ತಿಳಿಸಿದ್ದು ಭಾರತವೇ ಆಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ಪ್ರಮಾಣದ ನೀರು ಹುದುಗಿದೆ ಎಂಬ ವಿಚಾರವನ್ನು ಇದೇ ಮೊದಲಬಾರಿಗೆ ನಾಸಾ ವಿಜ್ಞಾನಿಗಳು ಬಾಯಿಬಿಟ್ಟಿದ್ದರು. 2020ರ ಅಕ್ಟೋಬರ್‌ನಲ್ಲಿ ಈ ಕುರಿತು ನಾಸಾ ಮಾಹಿತಿ ನೀಡಿತ್ತು. ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿದ್ದ 2 ಹೊಸ ಅಧ್ಯಯನ ವರದಿಗಳು ಸಂತಸದ ಸಂಗತಿಯನ್ನು ಮನುಕುಲಕ್ಕೆ ನೀಡಿದ್ದವು. ನಾಸಾ ನಿರ್ಮಿತ ಟೆಲಿಸ್ಕೋಪ್ ‘ಸೋಫಿಯಾ' ಸಹಾಯದಿಂದ ಅವರೋಹಿತ ದೂರದರ್ಶಕ (telescope)ವನ್ನು ಬಳಸಿ ಚಂದ್ರನ ಮೇಲೆ ನೀರು ಇರುವುದನ್ನು ಕನ್ಫರ್ಮ್ ಮಾಡಲಾಗಿತ್ತು. ಹಾರುವ ದೂರದರ್ಶಕ ಎಂದು ಕರೆಯಲಾಗುವ ಇದರ ಸಹಾಯದಿಂದ ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸುಲಭವಾಗುತ್ತದೆ. ಹೀಗಾಗಿ ಇದೇ ದೂರದರ್ಶಕ ಬಳಸಿ ಸಂಶೋಧಕರು, ಚಂದ್ರನ ಮೇಲೆ ಊಹೆಗೂ ಮೀರಿ ನೀರು ಹುದುಗಿದೆ ಎಂಬುದನ್ನ ತಿಳಿಸಿದ್ದರು.

ಚಂದ್ರನ ಮೇಲೆ ಧ್ವಜ ನೆಟ್ಟ ವಿಶ್ವದ ಎರಡನೇ ರಾಷ್ಟ್ರ ಚೀನಾ!

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಚಂದ್ರನ ಮೇಲೆ ಈಗ ಎಷ್ಟು ಪ್ರಮಾಣದ ನೀರು ಸಿಕ್ಕಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆ ಕುತೂಹಲಕ್ಕೂ ನಾಸಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಈಗ ಪತ್ತೆಯಾಗಿರುವ ನೀರಿನ ಪ್ರಮಾಣ ಸುಮಾರು 40,000 ಸ್ಕ್ವೇರ್ ಕಿಲೋಮೀಟರ್. ಇದನ್ನ ಸಾಮಾನ್ಯ ಅಂದಾಜಿನಲ್ಲಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಯ ಒಟ್ಟು ಜಾಗದ 5 ಪಟ್ಟು. ಅಂದರೆ ಚಂದ್ರನ ಮೇಲಿರುವ ನೀರನ್ನು ಭೂಮಿಗೆ ತಂದರೆ, ಆ ನೀರನ್ನು ಶಿವಮೊಗ್ಗ ಜಿಲ್ಲೆಗೆ 5 ಬಾರಿ ತುಂಬಿಸಬಹುದು. ಅಂದರೆ ಲೆಕ್ಕ ಹಾಕಿ ಭವಿಷ್ಯದಲ್ಲಿ ಚಂದಿರನ ಮೇಲೂ ಮನೆ ಕಟ್ಟಲು ಈ ನೀರು ಬಳಸಲು ಲಭ್ಯವಾದೀತು. ಬರೀ ಮನೆ ಕಟ್ಟಲು ಸಾಕೆ ಕುಡಿಯಲು, ಕೃಷಿ ಮಾಡಲು ಕೂಡ ಬಳಸಬಹುದಾಗಿದೆ. ಮುಂದೆ ಭೂಮಿ ಬೇಜಾರಾದರೆ ಚಂದ್ರನ ಮೇಲೆ ಹೋಗಿ ವಾಸ ಮಾಡಬಹುದು.

ಚಂದ್ರನಲ್ಲಿದೆ ಭಾರಿ ಪ್ರಮಾಣ ನೀರು, ‘ಸೋಫಿಯಾ' ಹೇಳಿದ್ದೇನು?

English summary
Nearly 1 lakh craters has been found on Moon by Chinese scientists. China scientists where used artificial intelligence technology-based network for this invention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X