ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಾಜ್ ಷರೀಫ್ ಗೆ ಪತ್ನಿ ವಿಯೋಗ, ಬೇಗಂ ಕುಲ್ಸೂಮ್ ಲಂಡನ್ ನಲ್ಲಿ ನಿಧನ

|
Google Oneindia Kannada News

ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ರ ಪತ್ನಿ ಬೇಗಂ ಕುಲ್ಸೂಮ್ ಮಂಗಳವಾರದಂದು ಲಂಡನ್ ನಲ್ಲಿ ನಿಧನರಾಗಿದ್ದಾರೆ. ನವಾಜ್ ಷರೀಪ್ ಹಾಗೂ ಅವರ ಮಗಳು ಮರ್ಯಾಮ್ ಭ್ರಷ್ಟಾಚಾರದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಬೇಗಂ ಕುಲ್ಸೂಮ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. 2014ರ ಜೂನ್ ನಿಂದ ಲಂಡನ್ ನಲ್ಲಿರುವ ಹಾರ್ಲೆ ಸ್ಟ್ರೀಟ್ ಕ್ಲಿನಿಕ್ ನಲ್ಲಿ ಕುಲ್ಸೂಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಮಗಳು ಮರ್ಯಾಮ್ ಬಂಧನಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಮಗಳು ಮರ್ಯಾಮ್ ಬಂಧನ

ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಸಾಗಿದ್ದರಿಂದ ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿತ್ತು ಎಂದು ಜಿಯೋ ಟಿವಿ ವರದಿ ಮಾಡಿದೆ. 68 ವರ್ಷದ ಕುಲ್ಸೂಮ್ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು 2017ರ ಆಗಸ್ಟ್ ನಲ್ಲಿ ಪತ್ತೆಯಾಗಿತ್ತು. ನವಾಜ್ ಷರೀಫ್ ಹಾಗೂ ಕುಲ್ಸೂಮ್ ಅವರ ವಿವಾಹ 1971ರಲ್ಲಿ ಆಗಿತ್ತು.

Nawaz Sharif’s wife Kulsoom Nawaz dies in London

ಅಜ್ಜನ ಬಂಧನಕ್ಕೂ ಮೊದಲೇ ಗೂಂಡಾಗಿರಿ ಮಾಡಿದ ಮೊಮ್ಮಕ್ಕಳ ಬಂಧನಅಜ್ಜನ ಬಂಧನಕ್ಕೂ ಮೊದಲೇ ಗೂಂಡಾಗಿರಿ ಮಾಡಿದ ಮೊಮ್ಮಕ್ಕಳ ಬಂಧನ

ಮೃತರಿಗೆ ಪತಿ ನವಾಜ್ ಷರೀಫ್, ಮಗಳು ಮರ್ಯಾಮ್ ಹಾಗೂ ಹುಸೇನ್ ಮತ್ತು ಹಸನ್ ಎಂಬಿಬ್ಬರು ಮಕ್ಕಳಿದ್ದಾರೆ. ಬೇಗಂ ಕುಲ್ಸೂಮ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನವಾಜ್ ಷರೀಫ್ ಹಾಗೂ ಮರ್ಯಾಮ್ ಗೆ ಪರೋಲ್ ಸಿಗುವ ಸಾಧ್ಯತೆ ಇದೆ.

English summary
Begum Kulsoom, the wife of Pakistan’s jailed former prime minister Nawaz Sharif, died Tuesday in London after a prolonged illness, Pakistan Muslim League-Nawaz president Shehbaz Sharif said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X