ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನದಿನಕ್ಕೂ ಹದಗೆಡುತ್ತಿದೆ ಜೈಲಲ್ಲಿರುವ ನವಾಜ್ ಷರೀಫ್ ಆರೋಗ್ಯ

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 24: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿದೆ. ಜೈಲಿನಲ್ಲಿರುವ ಅವರಿಗೆ ಮೂತ್ರಪಿಂಡದ ಸಮಸ್ಯೆ ಉಲ್ಬಣಿಸುತ್ತಲೇ ಇದ್ದು, ಅವರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ವರಿಷ್ಠರ ಮಗಳು ಮರ್ಯಂ ನವಾಜ್ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಶನಿವಾರ ಟ್ವೀಟ್ ಮಾಡಿದ್ದಾರೆ. ಕೋಟ್ ಲಖ್ ಪತ್ ಜೈಲಿಗೆ ಆಕೆಯು ವೈದ್ಯ ಅದ್ನಾನ್ ಖಾನ್ ಜತೆಗೆ ತೆರಳಿದ್ದರು. ಇದಕ್ಕಾಗಿ ದೇಶದ ಆಂತರಿಕ ಸಚಿವಾಲಯದಿಂದ ಒಪ್ಪಿಗೆ ಪಡೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಭ್ರಷ್ಟಾಚಾರದ ಅರೋಪ, ಪಾಕ್ ಮಾಜಿ ಪ್ರಧಾನಿ ನವಾಜ್ ಗೆ ಶಿಕ್ಷೆಭ್ರಷ್ಟಾಚಾರದ ಅರೋಪ, ಪಾಕ್ ಮಾಜಿ ಪ್ರಧಾನಿ ನವಾಜ್ ಗೆ ಶಿಕ್ಷೆ

ಅರವತ್ತೊಂಬತ್ತು ವರ್ಷದ ನವಾಜ್ ಷರೀಫ್ ಕಳೆದ ವರ್ಷದ ಡಿಸೆಂಬರ್ ನಿಂದ ಜೈಲಿನಲ್ಲಿ ಇದ್ದಾರೆ. ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಲಂಚ ಪ್ರಕರಣದಲ್ಲಿ ಅವರಿಗೆ ಏಳು ವರ್ಷದ ಜೈಲು ಶಿಕ್ಷೆಯಾಗಿದೆ. ತನ್ನ ತಂದೆಯನ್ನು ಜೈಲಿನಲ್ಲಿ ಭೇಟಿಯಾದ ಮರ್ಯಂ, ಆ ನಂತರ ಟ್ವೀಟ್ ಮಾಡಿ, ನವಾಜ್ ಷರೀಫ್ ಮೂತ್ರಪಿಂಡ ಸಮಸ್ಯೆ ಮೂರನೇ ಹಂತ ತಲುಪಿದೆ. ಅವರ ತೋಳಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

Nawaz Sharif’s health condition deteriorates in prison

ನಿನ್ನೆ ಮಾಡಿದ ರಕ್ತ ಪರೀಕ್ಷೆಯಲ್ಲಿ ಅವರಿಗೆ ಕ್ರೆಟಿನೈನ್ ಮಟ್ಟದಲ್ಲಿ ಏರಿಕೆಯಾಗಿದೆ. ಅದರರ್ಥ ಮೂತ್ರಪಿಂಡ ಕೆಲಸ ಮಾಡುವುದು ಕಡಿಮೆ ಆಗುತ್ತದೆ. ಅವರಿಗೆ ಕಿಡ್ನಿ ಸಮಸ್ಯೆ ಮೂರನೇ ಹಂತದಲ್ಲಿದೆ. ತಜ್ಞರೊಬ್ಬರನ್ನು ಜೈಲಿನೊಳಗೆ ಕಳುಹಿಸಿ, ವೈಯಕ್ತಿಕ ವೈದ್ಯರ ಸಮ್ಮುಖದಲ್ಲೇ ಚಿಕಿತ್ಸೆ ದೊರಕಿಸಲು ಅವಕಾಶ ನೀಡಬೇಕು ಎಂದು ಮರ್ಯಂ ಮನವಿ ಮಾಡಿದ್ದಾರೆ.

English summary
Former Pakistan Prime Minister Nawaz Sharif’s condition had deteriorated in jail due to a kidney disease, a day after his family met him and expressed concern over his health, Pakistan media reported on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X