ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದ ಅರೋಪ, ಪಾಕ್ ಮಾಜಿ ಪ್ರಧಾನಿ ನವಾಜ್ ಗೆ ಶಿಕ್ಷೆ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 24: ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವಾಜ್ ಷರೀಫ್‌ ಅವರಿಗೆ 7 ವರ್ಷ ಶಿಕ್ಷೆ ಪ್ರಕಟಿಸಲಾಗಿದೆ. ಪಾಕಿಸ್ತಾನ ಸುಪ್ರೀಂಕೋರ್ಟ್ ಸೋಮವಾರದಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಈ ಮುಂಚೆ ನವಾಜ್ ಷರೀಫ್ ಗೆ 10 ವರ್ಷ ಹಾಗೂ ಪುತ್ರಿ ಮರ್ಯಮ್ ನವಾಜ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಸ್ಲಾಮಾಬಾದ್ ಹೈಕೋರ್ಟ್‌ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪದಿಂದ ನವಾಜ್ ಷರೀಫ್ ರನ್ನು ಮುಕ್ತಗೊಳಿಸಿತ್ತು. ಆದರೆ, ಈಗ ಫ್ಲಾಗ್ ಚಿಪ್ ಕೇಸಿನಲ್ಲಿ ಖುಲಾಸೆಗೊಂಡರೂ ಅಲ್ ಅಜಿಜಿಯಾ ಉಕ್ಕು ಕಾರ್ಖಾನೆ ಕೇಸಿನಲ್ಲಿ ಅಪರಾಧಿ ಎನಿಸಿ,ಜೈಲು ಶಿಕ್ಷೆ ಪಡೆದುಕೊಂಡಿದ್ದಾರೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

ಉತ್ತರಾದಾಯಿತ್ವ (ಅಕೌಂಟಬಿಲಿಟಿ) ಕೋರ್ಟ್ ನಲ್ಲಿ ನವಾಜ್ ಹಾಗೂ ಮರ್ಯಾಮ್ ಗೆ ಅವೆನ್ ಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಕ್ರಮವಾಗಿ ಹತ್ತು ಹಾಗೂ ಏಳು ವರ್ಷ ಜೈಲು ಶಿಕ್ಷೆಯಾಗಿದೆ. ಗಳಿಕೆ ಮೀರಿ ಆಸ್ತಿ ಸಂಪಾದಿಸಿದ ಅಪರಾಧ ಪ್ರಕರಣ ನವಾಜ್ ಷರೀಫ್ ಮೇಲಿದೆ. ತಂದೆ ತಪ್ಪಿಗೆ ಪ್ರೋತ್ಸಾಹ ನೀಡಿದ ಹಾಗೂ ಸಹಕರಿಸಿದ, ತಪ್ಪನ್ನು ಮುಚ್ಚಿಹಾಕಲು ಪಿತೂರಿ ಮಾಡಿದ ಅಪರಾಧ ಮರ್ಯಾಮ್ ಮೇಲೆ ಹೊರಿಸಲಾಗಿದೆ

Nawaz Sharif sentenced to 7 years jail in Al-Azizia case, acquitted in flagship reference case

ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲುನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲು

ನನಗೇನೂ ಹೆದರಿಕೆ ಇಲ್ಲ. ಹಾಗಿದ್ದರೆ ನಾನೇಕೆ ವಾಪಸ್ ಬರ್ತಿದ್ದೆ? ಈ ದೇಶ ಕ್ಲಿಷ್ಟ ಪರಿಸ್ಥಿತಿಯಲ್ಲಿದೆ. ನನ್ನಿಂದ ಏನು ಮಾಡಲು ಸಾಧ್ಯವೋ ಅದು ಮಾಡಿದೆ. ಪಾಕಿಸ್ತಾನದ ಜನರಿಗೆ ಗೊತ್ತಾಗಬೇಕು, ನಾನು ಇದೆಲ್ಲ ಅವರಿಗಾಗಿ ಮಾಡಿದೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.

English summary
An anti-corruption court in Pakistan on Monday convicted Nawaz Sharif in Al-Azizia corruption case and awarded him seven years jail term, while former prime minister was acquitted in Flagship Investment reference, said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X