ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಓಲೈಕೆಗೆ ಹೋಲಿ ಆಚರಿಸಿದ್ರಂತೆ ನವಾಜ್ ಷರೀಫ್

ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಹಿಂದೂಗಳ ಪ್ರಖ್ಯಾತ ಹಬ್ಬ ಹೋಲಿ ಆಚರಣೆಯಲ್ಲಿ ಪಾಲಗೊಂಡಿದ್ದರು. ಇದೀಗ ಭಾರತ ಸರಕಾರವನ್ನು ಓಲೈಕೆ ಮಾಡಲು ನವಾಜ್ ಷರೀಫ್ ಹೋಲಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಅಂತ ಉಗ್ರ ಸಂಘಟನೆಗಳು ತಗಾದೆ ತೆಗೆದಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 24: ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಹಿಂದೂಗಳ ಪ್ರಖ್ಯಾತ ಹಬ್ಬ ಹೋಲಿ ಆಚರಣೆಯಲ್ಲಿ ಪಾಲ್ಗೊಂಡಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ನವಾಜ್ ಷರೀಪ್ ಹಿಂದೂಗಳ ಹಬ್ಬದಲ್ಲಿ ಪಾಲ್ಗೊಂಡಿದ್ದು ಯಾಕೆ ಅಂತಿರಾ?

ಭಾರತ ಸರಕಾರವನ್ನು ಓಲೈಕೆ ಮಾಡಲು ನವಾಜ್ ಷರೀಫ್ ಹೋಲಿ ಹಬ್ಬದಲ್ಲಿ ಪಾಲ್ಗೊಂಡರು ಅಂತ ಉಗ್ರ ಸಂಘಟನೆ ಲಷ್ಕರ್ ಇ ತಯ್ಯಬಾದ ಆರ್ಥಿಕ ವಿಭಾಗ ಜಮಾತ್ ಉದ್ ದಾವಾ (ಜೆಯುಡಿ) ಹೇಳಿದೆ.[ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ]

Nawaz Sharif's Holi celebrations has Lashkar boss fuming

ಈ ಕುರಿತು ಹೇಳಿಕೆ ನೀಡಿರುವ ಜಮಾತ್ ಉದ್ ದಾವಾ ಸಂಘಟನೆ ಮುಖ್ಯಸ್ಥ ಹಫೀಸ್ ಅಬ್ದುಲ್ ರೆಹ್ಮಾನ್ ಮಕ್ಕಿ "ಪಾಕಿಸ್ತಾನದ ಸಿದ್ಧಂತವನ್ನು ನವಾಜ್ ಷರೀಫ್ ಅಲುಗಾಡಿಸಿದ್ದಾರೆ. ಮುಸ್ಲಿಮರು ಮತ್ತು ಹಿಂದೂಗಳು ಪ್ರತ್ಯೇಕ ದೇಶಗಳಿದ್ದ ಹಾಗೆ. ಎರಡೂ ಧರ್ಮಗಳ ಸಂಸ್ಕೃತಿ ಮತ್ತು ನಾಗರೀಕತೆ ಬೇರೆ ಬೇರೆ. ಹಾಗಾಗಿ ಅವರಿಬ್ಬರೂ ಒಟ್ಟಾಗಿ ಬದುಕಲು ಸಾಧ್ಯವಿಲ್ಲ," ಎಂದು ಉದ್ದುದ್ದ ಭಾಷಣ ಬಿಗಿದಿದ್ದಾನೆ.

Nawaz Sharif's Holi celebrations has Lashkar boss fuming

ಈ ಮಕ್ಕಿ ಸದ್ಯ ಗೃಹ ಬಂಧನದಲ್ಲಿರುವ ಜಮಾತ್ ಉದ್ ದಾವಾ ಸಂಸ್ಥಾಪಕ ಹಫೀಸ್ ಸಯೀದ್ ಅಳಿಯನಾಗಿದ್ದಾನೆ.[ಕಾಮನಬಿಲ್ಲಿಗೆ ಏಳು ಬಣ್ಣವಾದರೆ ಕಾಮನಹಬ್ಬಕ್ಕೆ ಎಷ್ಟು ಬಣ್ಣ?]

ಇತ್ತೀಚೆಗೆ ಕರಾಚಿಯಲ್ಲಿ ನಡೆದಿದ್ದ ಹೋಲಿ ಸಮಾರಂಭವೊಂದರಲ್ಲಿ ನವಾಜ್ ಶರೀಫ್ ಪಾಲ್ಗೊಂಡಿದ್ದರು. ಇದು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Nawaz Sharif's Holi celebrations has Lashkar boss fuming

ಹಿಂದೂಗಳ ಹಬ್ಬದಲ್ಲಿ ನವಾಜ್ ಷರೀಫ್ ಪಾಲ್ಗೊಂಡಿದ್ದು ಅಲ್ಲಿನ ಮತಾಂಧ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತವನ್ನು ಓಲೈಕೆ ಮಾಡಲು ಷರೀಫ್ ಹೀಗೆ ಮಾಡಿದ್ದಾರೆ ಎಂದು ಅವು ಅಲ್ಲಿನ ಪ್ರಧಾನಿ ವಿರುದ್ಧ ಹರಿಹಾಯ್ದಿವೆ.

English summary
Why did Prime Minister of Pakistan, Nawaz Sharif celebrate Holi. The Jamaat-ud-Dawa, financial wing of the Lashkar-e-Tayiba said that the PM celebrated Holi to please the Indian government. In a statement, Hafiz Abdul Rehman Makki, the head of the JuD said that Sharif was weakening Pakistan's ideology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X