ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹತ್ಯೆಗೆ ನಡೀತಿತ್ತಾ ಸಂಚು?

|
Google Oneindia Kannada News

ಲಾಹೋರ್, ನವೆಂಬರ್ 7: ಪಾಕ್ ಮಾಜಿ ಪ್ರಧಾನಿ ಹತ್ಯೆಗೆ ಸಂಚು ನಡೆಯುತ್ತಿತ್ತು ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್​ ಷರೀಫ್​ ಅವರಿಗೆ ರಕ್ತದಲ್ಲಿ ಪ್ಲೇಟ್​ಲೆಟ್​ ಸಂಖ್ಯೆ ತೀವ್ರ ಕುಸಿತ ಕಂಡಿತ್ತು, ಅವರಿಗೆ ಪದೇಪದೆ ಈ ಸಮಸ್ಯೆ ಕಾಡುತ್ತಿದ್ದು ಚಿಕಿತ್ಸೆ ನೀಡಿದರೂ ಫಲಕೊಡುತ್ತಿಲ್ಲ. ಒಂದು ಸಲ ಹೆಚ್ಚಾದರೂ ಮರುದಿನವೇ ಮತ್ತೆ ಪ್ಲೇಟ್​ಲೆಟ್​ ಕಡಿಮೆಯಾಗುತ್ತಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ ಗಂಭೀರ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ ಗಂಭೀರ

ಹಾಗಾಗಿ ಈಗ ಏಕಾಏಕಿಯಾಗಿ ಪ್ಲೇಟ್‌ಲೆಟ್ ಕೌಂಟ್ಸ್ ಹೇಗೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡಿದ ವೈದ್ಯರ ತಂಡಕ್ಕೆ ಶಾಕ್ ಕಾದಿತ್ತು. ನಿಧಾನವಾಗಿ ವಿಷವನ್ನು ದೇಹದೊಳಗೆ ಸೇರಿಸಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

Nawaz Sharif Being Given Polonium To Die Slow Death

ಮುತಾಹಿದಾ ಕ್ವಾಮಿ ಮೂವ್​ಮೆಂಟ್​ (ಎಂಕ್ಯೂಎಂ) ಸಂಸ್ಥಾಪಕ ಅಲ್ತಾಫ್​ ಹುಸ್ಸೇನ್​ ಈ ಕುರಿತು ಟ್ವೀಟ್ ಮಾಡಿದ್ದು, ನವಾಜ್​ ಷರೀಫ್​ ದೇಹದಲ್ಲಿ ಪ್ಲೇಟ್​ಲೆಟ್​ ಸಂಖ್ಯೆ ಕುಸಿತವಾಗಿದೆ. ಸಾಮಾನ್ಯವಾಗಿ ಶತ್ರುಗಳನ್ನು ಕೊಲ್ಲಲು ಪೊಲೊನಿಯಂ (ಅತ್ಯಂತ ವಿಷಕಾರಿ ವಸ್ತು) ಎಂಬ ವಿಷಪ್ರಾಶನ ಮಾಡಿಸಲಾಗುತ್ತದೆ. ಒಮ್ಮೆಲೇ ಕೊಡದೆ ಹಂತಹಂತವಾಗಿ ಸ್ವಲ್ಪವೇ ನೀಡುತ್ತ ಆ ಶತ್ರು ನಿಧಾನವಾಗಿ ಸಾಯುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ನವಾಜ್​ ಷರೀಫ್​ ಅವರು ಲಾಹೋರ್​ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದು ಮನೆಗೆ ತೆರಳಿದ್ದಾರೆ. ಅಕ್ಟೋಬರ್​ 22ರಿಂದಲೂ ಅವರು ಆಸ್ಪತ್ರೆಯಲ್ಲೇ ಇದ್ದರು. ಈಗ ಅವರ ಮನೆಯಲ್ಲೇ ಐಸಿಯುವನ್ನು ರಚಿಸಿ, ವೈದ್ಯರೂ ಅಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ.

English summary
Muttahida Qaumi Movement (MQM) founder Altaf Hussain has claimed that former Pakistan Prime Minister Nawaz Sharif has been given polonium, the drug which slowly poisoned Yasser Arafat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X