ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 19: ಭ್ರಷ್ಟಾಚಾರ ಆರೋಪ ಹೊತ್ತು ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನಾಜ್ ಷರೀಫ್ ಮತ್ತು ಅವರ ಮಗಳು ಮರ್ಯಾಮ್ ನವಾಜ್ ಅವರಿಗೆ ಬಂಧನದಿಂದ ಬಿಡುಗಡೆ ದೊರೆತಿದೆ.

ದೇಶ ನಡೆಸಲು ಹಣವಿಲ್ಲ: ಅಲ್ಲಾ ಮೇಲೆ ಭಾರ ಹಾಕಿದ ಇಮ್ರಾನ್ ಖಾನ್ ದೇಶ ನಡೆಸಲು ಹಣವಿಲ್ಲ: ಅಲ್ಲಾ ಮೇಲೆ ಭಾರ ಹಾಕಿದ ಇಮ್ರಾನ್ ಖಾನ್

ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವಾಜ್ ಷರೀಫ್‌ಗೆ 10 ವರ್ಷ ಹಾಗೂ ಮರ್ಯಮ್ ನವಾಜ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಸ್ಲಾಮಾದ್ ಹೈಕೋರ್ಟ್‌ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪದಿಂದ ನವಾಜ್ ಷರೀಫ್ರನ್ನು ಮುಕ್ತಗೊಳಿಸಿದೆ.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ

ಜುಲೈ 6 ರಂದು ಕೆಳಹಂತದ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಿ ನವಾಜ್ ಷರೀಫ್ ಅವರಿಗೆ 10 ವರ್ಷ, ನವಾಜ್ ಅವರ ಪುತ್ರಿ ಮರ್ಯಾಮ್ ಷರೀಫ್ ಅವರಿಗೆ 7 ವರ್ಷ ಹಾಗೂ ತನಿಖೆಗೆ ಸಹಕರಿಸದ್ದಕ್ಕೆ ನವಾಜ್ ಷರೀಫ್ ಅವರ ಅಳಿಯನಿಗೆ ಒಂದುವ ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಪತ್ನಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನವಾಜ್ ಷರೀಫ್‌ಗೆ ಪೆರೋಲ್ ಪತ್ನಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನವಾಜ್ ಷರೀಫ್‌ಗೆ ಪೆರೋಲ್

Nawaz Sharif and his duagter released from Jail

ಪಾಕಿಸ್ತಾನ ಚುನಾವಣೆ ಕೆಲವೇ ದಿನಗಳ ಮುಂಚೆ ನವಾಜ್ ಷರೀಫ್ ಅವರ ಆರೋಪ ಸಾಬೀತಾಗಿ ಅವರನ್ನು ಜೈಲಿಗಟ್ಟಲಾಗಿತ್ತು. ಇದರಿಂದ ಅವರ ಪಕ್ಷಕ್ಕೆ ಭಾರಿ ಹಿನ್ನಡೆ ಆಗಿತ್ತು. ಆದರೆ ಈಗ ಅವರ ಮೇಲಿನ ಆರೋಪಗಳನ್ನು ಇಸ್ಲಾಮಾಬಾದ್ ಉಚ್ಛನ್ಯಾಯಾಲಯ ರದ್ದು ಮಾಡಿದೆ.

English summary
Islamabad high court suspended the sentences of Pakistan former prime minister Nawaz Sharif and his daughter Maryam Sharif. Both were realeased from Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X