ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರನ್ನು ನರಿಗೆ ಹೋಲಿಸಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್,ನವೆಂಬರ್ 07: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ರನ್ನು ಇಮ್ರಾನ್ ಖಾನ್ ನರಿಗೆ ಹೋಲಿಸಿದ್ದಾರೆ.

ಷರೀಫ್ ಮಿಲಿಟರಿ ಮತ್ತು ಐಎಸ್ಐ ನಾಯಕತ್ವದಲ್ಲಿ ದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ನಡೆಸಲು ಮುಂದಾಗಿದ್ದಾರೆ. ಅವರು ಸೇನೆಯಲ್ಲಿ ದಂಗೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ನರಿ ಎಂದು ಹೇಳಿದ್ದಾರೆ.

ಭಾರತದ ಆಣತಿಯಂತೆ ಷರೀಫ್ ಸೇನೆ ವಿರುದ್ಧ ಕೆಲಸ ಮಾಡುತ್ತಿದ್ದಾರೆ: ಇಮ್ರಾನ್ ಖಾನ್ಭಾರತದ ಆಣತಿಯಂತೆ ಷರೀಫ್ ಸೇನೆ ವಿರುದ್ಧ ಕೆಲಸ ಮಾಡುತ್ತಿದ್ದಾರೆ: ಇಮ್ರಾನ್ ಖಾನ್

ಷರೀಫ್ ಲಂಡನ್‌ನಲ್ಲಿ ನರಿಯಂತೆ ಕುಳಿತು ಸೈನ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರಧಾನಿ ಖಾನ್ ಹೇಳಿದ್ದಾರೆ. ಪಾಕಿಸ್ತಾನ ಸೇನೆರಾಜಕೀಯದಲ್ಲಿ ಭಾಗಿಯಾಗಿದೆ ಮತ್ತು ಸೈನ್ಯ ಮತ್ತು ಐಎಸ್‌ಐ ಮುಖ್ಯಸ್ಥರನ್ನು ಬದಲಾಯಿಸುವಂತೆ ಕರೆ ನೀಡುವ ಮೂಲಕ ಮಾಜಿ ಪ್ರಧಾನಿ ಪಾಕಿಸ್ತಾನ ಸೇನೆಯಲ್ಲಿ ದಂಗೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಖಾನ್ ಹೇಳಿದರು. ಖಾನ್ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ. ನಡೆದ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

Nawaz Sharif A Jackal Trying To Create Rebellion In Pakistan Army

ಭ್ರಷ್ಟಾಚಾರದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ನಿಂದ 2017 ರಲ್ಲಿ ಅಧಿಕಾರದಿಂದ ಉಚ್ಚಾಟಿಸಲ್ಪಟ್ತ ಪಾಕಿಸ್ತಾನ ಮುಸ್ಲಿಂ ಲೀಗ್ ನ ಸರ್ವೋಚ್ಚ ನಾಯಕ ನವಾಜ್ ಷರೀಫ್ ಕಳೆದ ತಿಂಗಳು ಮೊದಲ ಬಾರಿಗೆ ಪಾಕಿಸ್ತಾನ್ ಡೆಮಾಕ್ರೆಟಿಕ್ ಮೂಮೆಂಟ್ ನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿಡಿಯೋ ಕಾನ್ಫರೆನ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು,

ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಸರ್ಕಾರವನ್ನು ಉಚ್ಚಾಟಿಸಲು ರಚಿಸಲಾದ ಪಾಕಿಸ್ತಾನ್ ಡೆಮಾಕ್ರೆಟಿಕ್ ಮೂಮೆಂಟ್ ಅಡಿಯಲ್ಲಿ ಪ್ರತಿಪಕ್ಷಗಳು ಜಂಟಿ ರ್ಯಾಲಿಯಲ್ಲಿ ಅಕ್ಟೋಬರ್ 16 ರಂದು ಷರೀಫ್ ಈ ಅಭಿಪ್ರಾಯ ನೀಡುದ್ದರು.

2018 ರ ಚುನಾವಣೆಯಲ್ಲಿ ಗೆಲ್ಲಲು ಸೇನೆ ತನಗೆ ಸಹಾಯ ಮಾಡಿತ್ತು ಎನ್ನುವ ಆರೋಪವನ್ನು ಖಾನ್ ತಳ್ಳಿಹಾಕಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿರುವ ಪಿಎಂಎಲ್-ಎನ್ ಮುಖ್ಯಸ್ಥರಾದ ನವಾಜ್ ಷರೀಫ್ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಇಸ್ಲಾಮಾಬಾದ್ ಹೈಕೋರ್ಟ್ ಕಳೆದ ನವೆಂಬರ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಲು ನವಾಜ್ ಅವರಿಗೆ ಎಂಟು ವಾರಗಳ ಕಾಲ ಅನುಮತಿ ನೀಡಿತ್ತು. ಆದರೆ ಅವರು ಹಿಂತಿರುಗಲಿಲ್ಲ, ಆದರೆ ಅವರ ವಕೀಲರು ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸೇನೆಯ ವಿರುದ್ಧದ ಆರೋಪಗಳನ್ನು ಮಾಡಲು ಪಾಕಿಸ್ತಾನಿಗಳು ಎಂದಿಗೂ ಭ್ರಷ್ಟ ರಾಜಕಾರಣಿಗಳನ್ನು ಅನುಮತಿಸುವುದಿಲ್ಲ ಎಂದು ಖಾನ್ ಹೇಳಿದರು.

ನವಾಜ್ ಷರೀಫ್ ಮತ್ತು ಅವರ ಪುತ್ರಿ ದೇಶದಲ್ಲಿ ಪಾಕಿಸ್ತಾನ ಸೇನೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡಲಾರರು ಮತ್ತು ಅದಕ್ಕಾಗಿಯೇ ಅವರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ.

English summary
Pakistan Prime Minister Imran Khan on Saturday lashed out at three-time former premier Nawaz Sharif, describing him as a "jackal" who is trying to create "rebellion" in the Army by accusing it of involvement in the country's politics and calling for a change in the military as well as the ISI leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X