ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಭಾವಿ ಪ್ರಧಾನಿ ಇಮ್ರಾನ್ ಖಾನ್ ಆಮಂತ್ರಣವನ್ನು ಒಪ್ಪಿಕೊಂಡ ಸಿದ್ದು

By Manjunatha
|
Google Oneindia Kannada News

ನವದೆಹಲಿ, ಆಗಸ್ಟ್‌ 02: ಪಾಕಿಸ್ತಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಆಮಂತ್ರಣವನ್ನು ಪಂಜಾಬ್‌ ಕಾಂಗ್ರೆಸ್ ಸಚಿವ ನವಜೋತ್ ಸಿಂಗ್ ಸಿದ್ದು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಇಮ್ರಾನ್ ಖಾನ್ ಆಗಸ್ಟ್ 11 ರಂದು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಅಮೀರ್ ಖಾನ್ ಸೇರಿದಂತೆ ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿದು, ಕಪಿಲ್ ದೇವ್, ಸುನಿಲ್ ಗವಾಸ್ಕರ್ ಅವರನ್ನು ಕರೆದಿದ್ದರು.

ಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನಭಾರತದ ಕ್ರಿಕೆಟರ್‌ಗಳು, ಅಮೀರ್ ಖಾನ್‌ಗೆ ಇಮ್ರಾನ್ ಖಾನ್ ಆಹ್ವಾನ

ಈ ಪೈಕಿ ನವಜೋತ್ ಸಿಂಗ್ ಸಿದ್ದು ಅವರು ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿದ್ದು, ಉಳಿದ ಕ್ರಿಕೆಟಿಗರು ಮತ್ತು ನಟ ಅಮೀರ್ ಖಾನ್ ತಮ್ಮ ಭಾಗವಹಿಸುವಿಕೆಯ ಬಗ್ಗೆ ತಿಳಿಸಿಲ್ಲ.

Navjot SIngh Sidhu attending Imran Khans voth taking ceremony

ಇಮ್ರಾನ್ ಖಾನ್ ಹಾಗೂ ನವಜೋತ್ ಸಿಂಗ್ ಒಂದೇ ಸಮಯದಲ್ಲಿ ತಮ್ಮ ತಮ್ಮ ರಾಷ್ಟ್ರಗಳನ್ನು ಪ್ರತಿನಿಧಿಸಿ ಕ್ರಿಕೆಟ್ ಆಡಿದ್ದರು. ಇಬ್ಬರೂ ಉತ್ತಮ ಗೆಳೆಯರಾಗಿದ್ದವರು. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ನಡುವೆ ಉತ್ತಮ ಸ್ನೇಹ ಸಂಬಂಧ ಮುಂಚಿನಿಂದಲೂ ಇದೆ.

'ಯುದ್ಧಕ್ಕೆ ಸಿದ್ಧರಾಗಿ, ಪಾಕಿಸ್ತಾನವ ತುಂಡು-ತುಂಡು ಮಾಡಲು ಇದು ಸಕಾಲ''ಯುದ್ಧಕ್ಕೆ ಸಿದ್ಧರಾಗಿ, ಪಾಕಿಸ್ತಾನವ ತುಂಡು-ತುಂಡು ಮಾಡಲು ಇದು ಸಕಾಲ'

ತಾವು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುತ್ತಿರುವ ಬಗ್ಗೆ ಮಾತನಾಡಿರುವ ನವಜೋತ್ ಸಿಂಗ್ ಸಿದ್ದು, ಕ್ರೀಡಾಪಟುಗಳು ಸ್ನೇಹ ಸೇತುವೆಗಳನ್ನು ನಿರ್ಮಿಸುತ್ತಾರೆ, ತಡೆಗೋಡೆಗಳನ್ನು ಕೆಡವುತ್ತಾರೆ ನಾನೂ ಸಹ ಅದನ್ನೇ ಮಾಡುತ್ತಿದ್ದೇನೆ ಎಂದಿದ್ದಾರೆ.

ಪಾಕಿಸ್ತಾನ್ ಸೈನ್ಯಕ್ಕೆ ಇಮ್ರಾನ್ ಖಾನ್ ಮೇಲೆ ಯಾಕಿಷ್ಟು ಲವ್?ಪಾಕಿಸ್ತಾನ್ ಸೈನ್ಯಕ್ಕೆ ಇಮ್ರಾನ್ ಖಾನ್ ಮೇಲೆ ಯಾಕಿಷ್ಟು ಲವ್?

ಇಮ್ರಾನ್ ಅತ್ಯುತ್ತ ವ್ಯಕ್ತಿ ಎಂದು ಹೊಗಳಿರುವ ಸಿದ್ದು, ಇಮ್ರಾನ್ ಖಾನ್ ವಿಶ್ವಾಸಾರ್ಹ ವ್ಯಕ್ತಿ, ನಂಬುಗೆಗೆ ಅರ್ಹರಾಗಿರುವವರು ಹಾಗಾಗಿ ನಾನು ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

English summary
Punjab Congress government minister Navjot Singh Sidhu attending Pakistan future prime minister Imran Khan's voth taking ceremony as prime minister o August 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X