ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದಿ ಪಾಲಾದ ಅಲೆಕ್ಸಿ ನವಲ್ನಿ, ರಷ್ಯಾದಲ್ಲಿನ ಮನೆ ಸೀಜ್

|
Google Oneindia Kannada News

ಬ್ಲಾಕ್ ಆಗಿರುವ ಅಕೌಂಟ್, ಸೀಜ್ ಆಗಿರುವ ಫ್ಲ್ಯಾಟ್, ದಂಡ ಕಟ್ಟಿಸಿಕೊಳ್ಳಲು ಕಾಯುತ್ತಿರುವ ಕೋರ್ಟ್, ಇಷ್ಟೆಲ್ಲದರ ನಡುವೆ ಮತ್ತೊಂದು ದಾಳಿಗೆ ಗುಟ್ಟಾಗಿ ಸಜ್ಜಾಗುತ್ತಿರುವ ಎದುರಾಳಿಗಳು. ಅಂದಹಾಗೆ ಇದು ವಿಷ ಕುಡಿದರೂ ಬದಕುಳಿದಿರುವ ರಷ್ಯಾದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ವ್ಲಾದಿಮಿರ್ ಪುಟಿನ್ ಪಾಲಿನ ಪರಮ ಶತ್ರು ಅಲೆಕ್ಸಿ ನವಲ್ನಿಯ ಸ್ಥಿತಿ. ವಿಷ ಪ್ರಾಶನದ ಪರಿಣಾಮ ಕೋಮಾ ಸ್ಟೇಜ್‌ಗೆ ಹೋಗಿದ್ದರೂ ಬದುಕುಳಿದಿರುವ ನವಲ್ನಿಗೆ ಶತ್ರುಗಳ ಕಾಟ ಕಡಿಮೆಯಾಗಿಲ್ಲ. ಬದಲಾಗಿ ಶತ್ರುಗಳ ಪ್ರಮಾಣ ಹೆಚ್ಚಾಗಿದೆ.

ಸದ್ಯ ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ನವಲ್ನಿ, ಇನ್ನೇನು ಕೆಲ ದಿನಗಳಲ್ಲಿ ತನ್ನ ತವರು ರಷ್ಯಾಗೆ ಮರಳಲಿದ್ದಾರೆ. ಆದರೆ ನವಲ್ನಿಗೆ ರಷ್ಯಾದಲ್ಲಿ ಸ್ವಾಗತ ಕೋರುವ ಜನರಿಗಿಂತ ಮತ್ತೆ ಅಪಾಯ ಉಂಟು ಮಾಡಲು ಹೊಂಚು ಹಾಕಿ ಕಾಯುತ್ತಿರುವ ಕಿರಾತಕರೇ ಹೆಚ್ಚಾಗಿದ್ದಾರೆ. ಈಗಾಗಲೇ ನವಲ್ನಿಯನ್ನು ದಂಡದ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ.

ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ! ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ!

ಅಷ್ಟಕ್ಕೂ ಶಾಲಾ ಮಕ್ಕಳಿಗೆ ಊಟ ಸರಬರಾಜು ಮಾಡುವ ಸಂಸ್ಥೆಯ ಬಣ್ಣ ಬಯಲು ಮಾಡಿದ್ದಕ್ಕೆ ರಷ್ಯಾದ ಕೋರ್ಟ್ ಈ ದಂಡ ವಿಧಿಸಿತ್ತು. 1.2 ಮಿಲಿಯನ್ ಡಾಲರ್ ಅಂದರೆ ಸುಮಾರು 8.8 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ದಂಡದ ಮೊತ್ತವನ್ನು ಪಾವತಿಸಿಲ್ಲ ಎಂಬ ನೆಪ ಹೇಳಿ ನವಲ್ನಿಗೆ ಸೇರಿದ ಆಸ್ತಿಗಳನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಳಪೆ ಊಟ ಪ್ರಶ್ನಿಸಿದ್ದಕ್ಕೆ $8.8 ಕೋಟಿ ದಂಡ..!

ಕಳಪೆ ಊಟ ಪ್ರಶ್ನಿಸಿದ್ದಕ್ಕೆ $8.8 ಕೋಟಿ ದಂಡ..!

ರಷ್ಯಾದ ಕೆಟರಿಂಗ್ ಸಂಸ್ಥಯೊಂದು ಮಕ್ಕಳಿಗೆ ಸರಬರಾಜು ಮಾಡುತ್ತಿದ್ದ ಊಟ ತೀರಾ ಕಳಪೆಯಾಗಿತ್ತು ಎಂಬುದನ್ನು ಇದೇ ನವಲ್ನಿ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿತ್ತು. ಹೀಗೆ ಕೆಟರಿಂಗ್ ಕರ್ಮಕಾಂಡ ರಿವೀಲ್ ಆದ ಬಳಿಕ ಆ ಸಂಸ್ಥೆಗೆ ಬರುತ್ತಿದ್ದ ಆರ್ಡರ್‌ಗಳು ನಿಂತು ಹೋಗಿದ್ದವು. ಆದರೆ ಈ ವಿಚಾರ ರಷ್ಯಾದ ಕೋರ್ಟ್ ಮೆಟ್ಟಿಲೇರಿದಾಗ ತೀರ್ಪು ನವಲ್ನಿ ವಿರುದ್ಧವೇ ಬಂದಿತ್ತು. ರಷ್ಯಾದ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ನವಲ್ನಿ ಕೆಟರಿಂಗ್ ಸಂಸ್ಥೆಗೆ 1.2 ಮಿಲಿಯನ್ ಡಾಲರ್ ದಂಡ ಕಟ್ಟಬೇಕಿದೆ. ವಿಷ ಆಹಾರ ಸೇವನೆ ನಂತರ ನವಲ್ನಿ ಜರ್ಮನಿಯ ಆಸ್ಪತ್ರೆಗೆ ಸೇರಿದ್ದರು. ಹೀಗಾಗಿ ನವಲ್ನಿ ದಂಡ ಕಟ್ಟಲು ಆಗಿಲ್ಲ. ಇದನ್ನೇ ನೆಪ ಮಾಡಿಕೊಂಡು ಅಲೆಕ್ಸಿ ನವಲ್ನಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಎಲ್ಲವನ್ನೂ ಕಳೆದುಕೊಂಡ ನವಲ್ನಿ

ಎಲ್ಲವನ್ನೂ ಕಳೆದುಕೊಂಡ ನವಲ್ನಿ

ರಷ್ಯಾದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ, ರಷ್ಯಾದ ಭ್ರಷ್ಟ ರಾಜಕಾರಣಿಗಳ ದ್ವೇಷ ಕಟ್ಟಿಕೊಂಡು ಬಾಳುತ್ತಿರುವ ನವಲ್ನಿ ಪಾಲಿಗೆ ಈಗ ಏನೂ ಉಳಿದಿಲ್ಲ. ಇದ್ದ ಒಂದು ಫ್ಲ್ಯಾಟ್ ಕೂಡ ಸೀಜ್ ಆಗಿದೆ. ಈಗಷ್ಟೇ ದೇಹದಿಂದ ವಿಷ ಹೊರತೆಗೆಯಲಾಗಿದ್ದು ನವಲ್ನಿ ಸುಧಾರಿಸಿಕೊಳ್ಳುತ್ತಿದ್ದಾರೆ. ವೆಂಟಿಲೇಟರ್ ಮೂಲಕ ಉಸಿರು ಎಳೆದುಕೊಳ್ಳುತ್ತಿದ್ದ ನವಲ್ನಿ ಕೆಲ ದಿನಗಳಿಂದ ಸ್ವತಂತ್ರವಾಗಿ ಮತ್ತೆ ಉಸಿರಾಡುವಷ್ಟು ಶಕ್ತಿ ಗಳಿಸಿದ್ದಾರೆ. ಆದರೆ ಇಂತಹ ಹೊತ್ತಲ್ಲೇ ಮತ್ತೆ ಅಲೆಕ್ಸಿ ನವಲ್ನಿಗೆ ಉಸಿರುಗಟ್ಟಿಸುವ ಕೆಲಸ ನಡೆದಿದೆ. ಇದೀಗ ನವಲ್ನಿ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ. ಆದರೆ ಕ್ಲಿಷ್ಟಕರ ಸಂದರ್ಭದಲ್ಲಿ ಅಲೆಕ್ಸಿ ಕೈಬಿಡದ ಯುರೋಪ್ ಹಾಗೂ ಪಾಶ್ಚಿಮಾತ್ಯ ದೇಶಗಳು ನವಲ್ನಿ ಬೆನ್ನಿಗೆ ನಿಂತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಗೆ ಆಗ್ರಹಿಸಿವೆ.

ನವಲ್ನಿಗೆ ಹೆಂಡತಿಯೇ ಎಲ್ಲಾ

ನವಲ್ನಿಗೆ ಹೆಂಡತಿಯೇ ಎಲ್ಲಾ

ಅಲೆಕ್ಸಿ ನವಲ್ನಿಗೆ ದೇವರು ಸಾವಿರಾರು ಶತ್ರುಗಳನ್ನು ಕೊಟ್ಟಂತೆ ಧೈರ್ಯವಂತ ಹೆಂಡತಿಯನ್ನೂ ಕೊಟ್ಟಿದ್ದಾನೆ. ಇದೇ ನವಲ್ನಿಯನ್ನು ಇಲ್ಲಿಯವರೆಗೂ ಜೀವಂತವಾಗಿ ಇಟ್ಟಿರುವ ಔಷಧ. ನವಲ್ನಿಗೆ ವಿಷಪ್ರಾಶನವಾದ ಸುದ್ದಿ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಆತನ ಪತ್ನಿ ಯುಲಿಯಾ, ಎಲ್ಲವನ್ನೂ ದಿಟ್ಟವಾಗಿ ಎದುರಿಸಿದ್ದಳು. ಹಾಗೇ ನವಲ್ನಿಯನ್ನ ಸುರಕ್ಷಿತವಾಗಿ ರಷ್ಯಾದಿಂದ ಹೊರಗೆ ಕರೆದುಕೊಂಡು ಹೋಗುವಲ್ಲಿ ಯುಲಿಯಾ ಹಾಗೂ ನವಲ್ನಿ ಬೆಂಬಲಿಗರು ಯಶಸ್ವಿಯಾಗಿದ್ದರು. ಮಗುವಿನಂತೆ ನವಲ್ನಿ ಆರೈಕೆ ಮಾಡಿದ್ದ ಯುಲಿಯಾ ಕಡೆಗೂ ಪತಿಯನ್ನು ಉಳಿಸಿಕೊಂಡಿದ್ದಾಳೆ. ಹಾಗೇ ಮತ್ತೊಮ್ಮೆ ಇವರಿಬ್ಬರೂ ಜೊತೆಗೂಡಿ ರಷ್ಯಾದ ಭ್ರಷ್ಟ್ರರ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನವಲ್ನಿ ರಷ್ಯಾಗೆ ಮರಳುವ ಸಾಧ್ಯತೆ ಇದೆ.

ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂದು ಅನುಮಾನಿಸಲಾಗಿತ್ತು. ಆದರೆ ತನಿಖೆಯಲ್ಲಿ ಬೇರೆಯದ್ದೇ ವಿಚಾರ ಬಯಲಾಗಿತ್ತು. ನವಲ್ನಿ ಕುಡಿದಿದ್ದ ನೀರಿನ ಬಾಟಲ್‌ನಲ್ಲಿ 'ನೋವಿಚೋಕ್' ಎಂಬ ರಷ್ಯಾ ಸಂಶೋಧಿತ ವಿಷ ಪತ್ತೆಯಾಗಿತ್ತು.

ಜರ್ಮನಿಗೆ ಕರೆದೊಯ್ಯಲು ಯುದ್ಧ..!

ಜರ್ಮನಿಗೆ ಕರೆದೊಯ್ಯಲು ಯುದ್ಧ..!

ಹೀಗೆ ನವಲ್ನಿ ಕೋಮಾಗೆ ಜಾರಿದ ಬಳಿಕ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ನವಲ್ನಿಯನ್ನ ಜರ್ಮನಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ನಾಟಕ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಕೆಲ ದಿನಗಳ ಹಿಂದೆ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಆದರೆ ಜರ್ಮನಿಯ ಸ್ವಯಂಸೇವಾ ಸಂಸ್ಥೆಯೊಂದು ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನವನ್ನು ಕೂಡ ರಷ್ಯಾಗೆ ಕಳುಹಿಸಿತ್ತು. ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕೋಮಾ ಸ್ಟೇಜ್‌ನಿಂದ ನವಲ್ನಿ ಹೊರಬಂದು ಈಗ ಡಿಸ್ಚಾರ್ಜ್ ಕೂಡ ಆಗಿದ್ದಾರೆ.

Recommended Video

ಬಿಹಾರ್ election ಜಟಾಪಟಿ !! | Oneindia Kannada
ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ನವಲ್ನಿಯ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

English summary
Russian opposition politician Alexei Navalny's bank accounts were frozen and his Moscow apartment seized as part of a lawsuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X