ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಏನಾಗುತ್ತಿದೆ? ಪುಟಿನ್ ಶತ್ರು ನವಲ್ನಿ ಪರಿಸ್ಥಿತಿ ಮತ್ತಷ್ಟು ಗಂಭೀರ

|
Google Oneindia Kannada News

ಪುಟಿನ್ ಪಾಲಿನ ಶತ್ರು ಹಾಗೂ ರಷ್ಯಾ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸಿ ನವಲ್ನಿ ಪರಿಸ್ಥಿತಿ ಈಗ ತೀರಾ ಗಂಭೀರವಾಗಿದೆ. ಪೆರೋಲ್ ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದಡಿ ಅಲೆಕ್ಸಿ ನವಲ್ನಿಗೆ ಮಾಸ್ಕೋ ನ್ಯಾಯಾಲಯ 2.5 ವರ್ಷಗಳ ಕಠಿಣ ಶಿಕ್ಷೆವಿಧಿಸಿತ್ತು. ಇದೀಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವಲ್ನಿ ಪರಿಸ್ಥಿತಿ ಗಂಭೀರವಾಗಿದೆ.

ಪುಟಿನ್ ಹಾಗೂ ಕೋರ್ಟ್ ತೀರ್ಪನ್ನು ವಿರೋಧಿಸಿ ನವಲ್ನಿ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆದರೆ ಹೀಗೆ ನವಲ್ನಿ ಸತ್ಯಾಗ್ರಹ ಆರಂಭಿಸಿ ಒಂದು ವಾರದಲ್ಲೇ ಕ್ಷಯ ರೋಗ ಕನ್ಫರ್ಮ್ ಆಗಿದೆ. ಈ ನಡುವೆ ನವಲ್ನಿ ಕಾಲುಗಳು ಕೂಡ ಸ್ವಾಧೀನ ಕಳೆದುಕೊಳ್ಳುತ್ತಿವೆ ಎಂದು ಆತನ ಪರ ವಕೀಲರು ಆರೋಪಿಸಿದ್ದಾರೆ.

ಅಲೆಕ್ಸಿ ನವಲ್ನಿ ತೂಕ ಕೂಡ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ, ನವಲ್ನಿ ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತಿವೆ. ಕೂಡಲೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನವಲ್ನಿ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸುದ್ದಿ ನವಲ್ನಿ ಬೆಂಬಲಿಗರಲ್ಲಿ ತೀವ್ರ ಆತಂಕ ಮೂಡಿಸಿದೆ.

ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

2020ರ ಆಗಸ್ಟ್ 20ರಂದು ಅಲೆಕ್ಸಿ ನವಲ್ನಿಗೆ ವಿಷಪ್ರಾಶನ ಮಾಡಿ ಹತ್ಯೆಗೈಯಲು ಯತ್ನಿಸಲಾಗಿತ್ತು. ಸುಮಾರು 4-5 ತಿಂಗಳ ಕಾಲ ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ನವಲ್ನಿ ರಷ್ಯಾಗೆ ವಾಪಸ್ ಆಗಿದ್ದರು. ಆದ್ರೆ ಇದೇ ನವಲ್ನಿಗೆ ಮುಳುವಾಗಿ ಪರಿಣಮಿಸಿತ್ತು. 5 ತಿಂಗಳ ಬಳಿಕ ಜನವರಿಯಲ್ಲಿ ಸ್ವದೇಶ ರಷ್ಯಾಗೆ ಮರಳಿದ್ದ ನವಲ್ನಿಗೆ ಆಘಾತ ಕಾದಿತ್ತು. ರಷ್ಯಾಗೆ ಮರಳಿದ ತಕ್ಷಣವೇ ನವಲ್ನಿ ಬಂಧನವಾಗಿತ್ತು. ಚಿಕಿತ್ಸೆಗೆ ಜರ್ಮನಿ ತಲುಪಿದ್ದು ತಪ್ಪು, ಇದು ಪೆರೋಲ್ ನಿಯಮದ ಉಲ್ಲಂಘನೆ ಎಂದು ಮಾಸ್ಕೋ ಕೋರ್ಟ್ ನವಲ್ನಿಗೆ 2.5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಆದರೆ ಶಿಕ್ಷೆ ಅನುಭವಿಸುತ್ತಿರುವ ನವಲ್ನಿ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗುತ್ತಿದೆ.

ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವುದಕ್ಕೆ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ನೋವಿಚೋಕ್ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು.

ಆದರೆ 4 ತಿಂಗಳ ಬಳಿಕ ವಿಷ ಹಾಕಿದ್ದು ಟೀ ಒಳಗೆ ಅಲ್ಲ ನವಲ್ನಿಯ ಒಳ ಉಡುಪಿನಲ್ಲಿ ಎನ್ನಲಾಗಿತ್ತು. ಇವತ್ತಿಗೂ ನವಲ್ನಿ ದೇಹಕ್ಕೆ ವಿಷ ಸೇರಿದ್ದು ಹೇಗೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಇನ್ನು ನವಲ್ನಿ ಆರೋಗ್ಯ ಹದಗೆಟ್ಟ ತಕ್ಷಣ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ಜರ್ಮನಿಗೆ ನವಲ್ನಿ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ಡ್ರಾಮಾ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಆರಂಭದಲ್ಲಿ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಜರ್ಮನಿಯ ಸ್ವಯಂಸೇವಾ ಸಂಸ್ಥೆ ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನ ಕೂಡ ಕಳುಹಿಸಿತ್ತು. ಆದರೆ ಮೊದಲಿಗೆ ಇದಕ್ಕೆ ಒಪ್ಪದ ರಷ್ಯಾ, ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತ್ತು. ಕೊನೆಗೂ ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರ ಬಗ್ಗೆ ಸಿನಿಮಾ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಹಿಂದೆ ಕೂಡ ನವಲ್ನಿ ಮೇಲೆ ಡೆಡ್ಲಿ ಕೆಮಿಕಲ್ ಅಟ್ಯಾಕ್ ಆಗಿ ಬದುಕುಳಿದಿದ್ದರು, ಈಗ 'ನೋವಿಚೋಕ್' ಎಂಬ ಕಾರ್ಕೋಟಕ ವಿಷ ದೇಹ ಸೇರಿದ್ದರೂ ಬದುಕುಳಿದು ರಷ್ಯಾಗೆ ಮರಳಿರುವ ನವಲ್ನಿ ಮತ್ತೆ ಪುಟಿನ್ ಪಡೆ ವಿರುದ್ಧ ತೊಡೆ ತಟ್ಟಿದ್ದಾರೆ. ನವಲ್ನಿ ಜೈಲು ಸೇರಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದು ನವಲ್ನಿ ಬೆಂಬಲಿಗರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

English summary
Navalny’s advocate said Navalny is losing sensation in legs and hands in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X