ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಮೀರುತ್ತಿರುವ ಕೊರೊನಾ, ವಿಶ್ವವ್ಯಾಪಿ ಲಾಕ್‌ಡೌನ್ ಸದ್ದು

|
Google Oneindia Kannada News

ನವದೆಹಲಿ, ಜುಲೈ 16: ವಿಶ್ವದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕೈ ಮೀರಿ ಹೋಗುತ್ತಿದೆ. ಮುಂದೆ ಯಾವ ಹಂತಕ್ಕೆತಲುಪಬಹುದು ಎನ್ನುವ ಯಾವುದೇ ನಿರ್ದಿಷ್ಟ ಮಾಹಿತಿ ಯಾವುದೇ ಸರ್ಕಾರದ ಮುಂದಿಲ್ಲ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಕೊರೊನಾ ವೈರಸ್ ಪ್ರಸರಣದ ಗುಪ್ತ ಸರಪಳಿಯನ್ನು ಹೊಂದಿದ್ದು, ಮಾಸ್ಕ್ ಧರಿಸಿವುದು, ಸ್ಯಾನಿಟೈಸರ್ ಬಳಕೆ ಸೇರಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತಿಳಿಸಲಾಗಿದೆಯೇ ಹೊರತು ಹೀಗೆಯೇ ಸೋಂಕು ಹರಡು ಬಹುದು ಎನ್ನುವುದಕ್ಕೆ ನಿರ್ದಿಷ್ಟ ಮಾಹಿತಿ ಇಲ್ಲ.

ಕೊವಿಡ್19 ನಡುವೆ ಆರ್ಥಿಕವಾಗಿ ಮತ್ತೆ ಬಲಿಷ್ಠವಾಗುತ್ತಿದೆ ಚೀನಾಕೊವಿಡ್19 ನಡುವೆ ಆರ್ಥಿಕವಾಗಿ ಮತ್ತೆ ಬಲಿಷ್ಠವಾಗುತ್ತಿದೆ ಚೀನಾ

ಏಷ್ಯಾ ಫೆಸಿಫಿಕ್ ದೇಶಗಳಲ್ಲಿ ಕೊರೊನಾ ಪ್ರಕರಣ ಕೈಮೀರುತ್ತಿದ್ದು, ಸೋಂಕಿತರ ಮೂಲವೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಭಾಗದ ಬಹುತೇಕ ರಾಷ್ಟ್ರಗಳು ಮತ್ತೆ ಅನಿವಾರ್ಯವಾಗಿ ಲಾಕ್‌ಡೌನ್‌ನತ್ತ ಮುಖಮಾಡುತ್ತಿವೆ.

ಕೊರೊನಾ ವೈರಸ್ ಮೂಲ ತಿಳಿದಿಲ್ಲ

ಕೊರೊನಾ ವೈರಸ್ ಮೂಲ ತಿಳಿದಿಲ್ಲ

ಕೊರೊನಾ ವೈರಸ್ ಹೇಗೆ ಹರಡುತ್ತದೆ ಅಥವಾ ಅದರ ಮೂಲ ತಿಳಿದಿಲ್ಲದ ಕಾರಣ ವೇಗವಾಗಿ ಹಬ್ಬುತ್ತದೆ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಮಾಜಿ ಉಪ ನಿರ್ದೇಶಕ ಯಾಂಗ್ ತಿಳಿಸಿದ್ದಾರೆ.

ಟೋಕಿಯಾದಲ್ಲೂ ಮುಂದುವರೆದ ಆತಂಕ

ಟೋಕಿಯಾದಲ್ಲೂ ಮುಂದುವರೆದ ಆತಂಕ

ಜಪಾನ್‌ನ ಟೋಕಿಯಾದಲ್ಲೂ ಕೊರೊನಾ ಸೋಂಕಿತರ ಮೂಲಗಳನ್ನು ಗುರುತಿಸಲಾಗದ ಪ್ರಕರಣಗಳು ಹೆಚ್ಚಾಗಿವೆ. ಶೇ.45ಕ್ಕೂ ಅಧಿಕ ಪ್ರಕರಣದ ಮೂಲಗಳು ತಿಳಿದಿಲ್ಲ.ಜಪಾನ್‌ನ ನಿಯಮಗಳ ಪ್ರಕಾರ ಉದ್ದಿಮೆಗಳನ್ನು ಬಂದ್ ಮಾಡಲು ಕಾನೂನಿನ ಸಹಕಾರವಿಲ್ಲ.ಹೀಗಾಗಿ ಜನರ ಓಡಾಟದ ಮೇಲೆ ನಿರ್ಬಂಧ ಹೇರಲು ಸರ್ಕಾರ ನಿರ್ಧರಿಸಿದೆ. ಒಂದೊಮ್ಮೆ ಜನರು ಸಹಕಾರ ನೀಡದಿದ್ದರೆ ತರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ ಎಂದು ಹೇಳಿದೆ.

ಕಠಿಣ ಲಾಕ್‌ಡೌನ್ ನಿಯಮ

ಕಠಿಣ ಲಾಕ್‌ಡೌನ್ ನಿಯಮ

ಹಾಂಕ್‌ಕಾಂಗ್‌ನಲ್ಲಿ ಆರಂಭಿಕ ಕೊರೊನಾ ಪ್ರಕರಣಗಳ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ತವ್ರವಾಗಿ ಹೆಚ್ಚುತ್ತಿದೆ. ವಿಪರ್ಯಾಸವೆಂದರೆ, ಪ್ರಕರಣಗಳ ಮೂಲವೇ ಗೊತ್ತಾಗುತ್ತಿಲ್ಲ. ಹೀಗಾಗಿ ಕಠಿಣ ಲಾಕ್‌ಡೌನ್‌ ನಿಯಮಗಳ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಸುಮಾರು 75 ಲಕ್ಷ ಜನರಿರುವ ನಗರವನ್ನು ಮತ್ತೆ ಲಾಕ್‌ಡೌನ್ ಮಾಡಲಾಗಿದೆ. ಶಾಲೆ, ಕಾಲೇಜು, ಬಾರ್, ಜಿಮ್ಮನ್ನು ಮುಚ್ಚಲಾಗಿದೆ. ನಾಲ್ಕಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ಹೇಳಲಾಗಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವಾಗ ಮಾಸ್ಕ್‌ ಅನ್ನು ಧರಿಸದಿದ್ದರೆ 645 ಡಾಲರ್ ದಂಡ ವಿಧಿಸಲಾಗುತ್ತಿದೆ.

ಮೆಲ್ಬೋರ್ನ್‌ನಲ್ಲಿ ಮತ್ತೆ ಲಾಕ್‌ಡೌನ್

ಮೆಲ್ಬೋರ್ನ್‌ನಲ್ಲಿ ಮತ್ತೆ ಲಾಕ್‌ಡೌನ್

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮೆಲ್ಬೋರ್ನ್‌ನಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಲಾಗಿದೆ. ಮೆಲ್ಬೋರ್ನ್‌ನಲ್ಲಿಯೂ ಇತ್ತೀಚಿನ ಪ್ರಕರಣಗಳ ಮೂಲ ತಿಳಿದುಬರುತ್ತಿಲ್ಲ. ಮೆಲ್ಬೋರ್ನ ಜೊತೆಗೆ ಸಿಡ್ನಿಯತ್ತಲೂ ಕೊರೊನಾ ಕರಿಛಾಯೆ ವ್ಯಾಪಿಸುತ್ತಿವೆ. ಹೀಗಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಮೆಲ್ಬೋರ್ನ್‌ನ ಅಪಾರ್ಟ್‌ಮೆಂಟ್‌ಗಳಿಂದ ಜನರು ಹೊರಬರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

English summary
As countries across Asia Pacific struggle with resurgences of the coronavirus, one data point is steering government responses: the share of cases with no clear indication of how infection occurred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X