ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್: ಅಕಾಲಿಕ ತೆರವು ಮಾಡದಿರಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

|
Google Oneindia Kannada News

ಜಿನೀವಾ, ಏಪ್ರಿಲ್ 11: ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿದ್ದು ಈ ನಡುವೆ ವಿಧಿಸಲಾಗಿದ್ದ ಲಾಕ್‌ಡೌನ್‌ ಅಕಾಲಿಕ ತೆರವು ಮಾಡದಂತೆ ಎಲ್ಲಾ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅಕಾಲಿಕವಾಗಿ ತೆರವು ಮಾಡಬೇಡಿ ಎಂದು ಹೇಳಿದೆ. ಲಾಕ್‌ಡೌನ್ ಅಕಾಲಿಕ ತೆರವು ಕೊರೊನಾ ವೈರಸ್ ಹರಡುವಿಕೆಗೆ ಪುನರುತ್ಥಾನಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.

ಕೊರೊನಾ ವಿರುದ್ಧ ಹೋರಾಟ: ಕಾಂಗ್ರೆಸ್ ತನ್ನ ಪಾತ್ರ ನಿರ್ವಹಿಸಲು ಸಿದ್ಧ: ಸೋನಿಯಾ ಗಾಂಧಿ ಕೊರೊನಾ ವಿರುದ್ಧ ಹೋರಾಟ: ಕಾಂಗ್ರೆಸ್ ತನ್ನ ಪಾತ್ರ ನಿರ್ವಹಿಸಲು ಸಿದ್ಧ: ಸೋನಿಯಾ ಗಾಂಧಿ

ಕೆಲವು ದೇಶಗಳು ನಿರ್ಬಂಧಗಳನ್ನು ತೆರವುಗೊಳಿಸುವ ಮಾರ್ಗಗಳ ಬಗ್ಗೆ ಆಲೋಚಿಸುತ್ತವೆ. ತುಂಬಾ ಬೇಗನೇ ಲಾಕ್‌ಡೌನ್ ತೆರವುಗೊಳಿಸುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

Nations Against Premature Lifting of lockdown WHO Warns

ದೇಶಗಳು ಲಾಕ್‌ಡೌನ್ ತೆರವುಗೊಳಿಸುವ ಮುನ್ನ ಗಮನಿಸಬೇಕಾದ ಅಂಶಗಳಿವು
-ಕ್ವಾರಂಟೈನ್ ಕೇಂದ್ರಗಳಲ್ಲಿ ಔಟ್‌ಬ್ರೇಕ್ ಅಪಾಯ ಕಡಿಮೆ ಇರುವಂತೆ ನೋಡಿಕೊಳ್ಳುವುದು.
-ಸೋಂಕು ಹರಡುವಿಕೆ ನಿಯಂತ್ರಣ
-ಸಾರ್ವಜನಿಕ ಆರೋಗ್ಯ ಸೇವೆಗಳ ಲಭ್ಯತೆ
-ಕೆಲಸದ ಸ್ಥಳಗಳು ಮತ್ತು ಶಾಲೆಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳು
-ಸಮುದಾಯಗಳಲ್ಲಿ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ
-ಬೇರೆಡೆಗಳಿಂದ ವೈರಸ್ ತಡೆಯಲು ಕ್ರಮ

English summary
Any premature lifting of restrictions imposed to control the COVID-19 pandemic could lead to a fatal resurgence of the new coronavirus, the World Health Organization warned Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X