ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಕೆಟ್ ಇಂಜಿನ್‌ನಲ್ಲಿ ತಾಂತ್ರಿಕ ದೋಷ: ಎರಡನೇ ಬಾರಿ ರಾಕೆಟ್ ಉಡಾವಣೆ ರದ್ದುಗೊಳಿಸಿದ ನಾಸಾ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 4: ಮತ್ತೊಂದು ಇಂಧನ ಸೋರಿಕೆಯಿಂದಾಗಿ ನಾಸಾ ತನ್ನ ದೈತ್ಯ ಚಂದ್ರನ ರಾಕೆಟ್‌ನ ಎರಡನೇ ಉಡಾವಣಾ ಪ್ರಯತ್ನವನ್ನು ಸ್ಥಗಿತಗೊಳಿಸಿದೆ. ಸಮಸ್ಯೆ ತುಂಬಾ ಕ್ಲಿಷ್ಟವಾಗಿದ್ದು ಸಮಸ್ಯೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಿ ಬಾಹ್ಯಾಕಾಶ ಕೇಂದ್ರದ ತಂತ್ರಜ್ಞರು ರಾಕೆಟ್‌ನ ಕೋರ್-ಹಂತದ ಇಂಧನ ಟ್ಯಾಂಕ್‌ಗಳಿಗೆ ಪಂಪ್ ಮಾಡಲಾಗುತ್ತಿರುವ ಸೂಪರ್ ಕೂಲ್ಡ್ ಲಿಕ್ವಿಡ್ ಹೈಡ್ರೋಜನ್ ಪ್ರೊಪೆಲ್ಲಂಟ್‌ನ ದೊಡ್ಡ ಸೋರಿಕೆಯನ್ನು ಸರಿಪಡಿಸಲು ಮೂರು ವಿಫಲ ಪ್ರಯತ್ನಗಳನ್ನು ಮಾಡಿದ ನಂತರ ಉಡವಾಣೆಯನ್ನು ಸ್ಥಗಿತಗೊಳಿಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಈಗ ಅದರ ಅಸೆಂಬ್ಲಿ ಕಟ್ಟಡಕ್ಕೆ ಹಿಂತಿರುಗಿಸಲಾಗುತ್ತದೆ.

ಆರ್ಟೆಮಿಸ್-I ಮಿಷನ್‌; ಚಂದ್ರನ ಬಳಿ ಹೋಗುತ್ತಿರುವುದು ಏಕೆ?ಆರ್ಟೆಮಿಸ್-I ಮಿಷನ್‌; ಚಂದ್ರನ ಬಳಿ ಹೋಗುತ್ತಿರುವುದು ಏಕೆ?

ಸೆಪ್ಟೆಂಬರ್ 19 ರಿಂದ 30 ರವರೆಗೆ ನಡೆಯುವ ಮುಂದಿನ ಉಡಾವಣಾ ಅವಧಿಯಲ್ಲಿ ಅಥವಾ ನಂತರದ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಪ್ರಯತ್ನಿಸಲು ಆರಂಭಿಕ ಅವಕಾಶವು ಬರುತ್ತದೆ ಎಂದು ಸಹಾಯಕ ನಾಸಾ ನಿರ್ವಾಹಕರಾದ ಜಿಮ್ ಫ್ರೀ, ಸುದ್ದಿಗಾರರಿಗೆ ತಿಳಿಸಿದರು.

ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು, ವಿಶೇಷವಾಗಿ ಈ ರೀತಿಯ ಪರೀಕ್ಷಾ ಹಾರಾಟದಲ್ಲಿ ಪ್ರತಿಯೊಬ್ಬರೂ ರಾಕೆಟ್‌ನ ವ್ಯವಸ್ಥೆಗಳನ್ನು ಪರಿಶೀಲಿಸಲು ಬಯಸುತ್ತಾರೆ ಎಂದರು.

 ಮೊದಲ ಬಾರಿ ಉಡಾವನೆಯೂ ವಿಫಲ

ಮೊದಲ ಬಾರಿ ಉಡಾವನೆಯೂ ವಿಫಲ

ನಾಲ್ಕು RS-25 ಎಂಜಿನ್‌ಗಳಲ್ಲಿ ಒಂದರಲ್ಲಿ ತಾಪಮಾನದ ಸಮಸ್ಯೆ ಇದ್ದ ಕಾರಣ, ನಾಸಾ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಟೆಮಿಸ್ 1 ಮೂನ್ ರಾಕೆಟ್‌ ಉಡಾವಣೆಯನ್ನು ಆಗಸ್ಟ್ 29ರಂದು ರದ್ದುಗೊಳಿಸಿತ್ತು. ಇಂಧನ ಸೋರಿಕೆಯಿಂದಾಗಿ ಉಡಾವಣೆಯನ್ನು ಅನಿವಾರ್ಯವಾಗಿ ನಾಸಾ ರದ್ದುಗೊಳಿಸಿತ್ತು ಎಂದು ನಾಸಾ ಹೇಳಿತ್ತು.

ಚಂದ್ರನ ಕಕ್ಷೆಗೆ ಕ್ಯಾಪ್ಸೂಲ್ ಅನ್ನು ಉಡಾವಣೆ ಮಾಡುವ ಕಾರ್ಯಾಚರಣೆಯನ್ನು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್‌ನ ಹಾರಾಟವು ನಡೆಸಬೇಕಿತ್ತು. ಈಗ ಎರಡನೇ ಬಾರಿಯೂ ಉಡಾವಣಾ ಯತ್ನ ವಿಫಲವಾಗಿದೆ.

ಇಸ್ರೋ ಎಸ್‌ಎಸ್‌ಎಲ್‌ವಿ ಮಿಷನ್ ವಿಫಲವಾಗಿದ್ದೇಕೆ: ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?ಇಸ್ರೋ ಎಸ್‌ಎಸ್‌ಎಲ್‌ವಿ ಮಿಷನ್ ವಿಫಲವಾಗಿದ್ದೇಕೆ: ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?

 ಗಗನಯಾತ್ರಿಗಳನ್ನು ಕಳುಹಿಸುವ ಉದ್ದೇಶ

ಗಗನಯಾತ್ರಿಗಳನ್ನು ಕಳುಹಿಸುವ ಉದ್ದೇಶ

2025 ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇರಿಸುವುದು, 2024ರಲ್ಲಿ ನಾಲ್ವರು ಗಗನಯಾತ್ರಿಗಳನ್ನು ಚಂದ್ರನಿಗೆ ಕಳಿಸುವ ದೃಷ್ಟಿಯಿಂದ ನಾಸಾಗೆ ಈ ಬಾಹ್ಯಾಕಾಶ ಕಾರ್ಯಾಚಣೆ ಸಾಕಷ್ಟು ಪ್ರಮುಖವಾಗಿದೆ.

ಗಗನಯಾತ್ರಿಗಳನ್ನು ಕಳಿಸುವ ಮೊದಲು ಅದಕ್ಕೆ ಪೂರಕವಾಗಿ ಆರ್ಟೆಮಿಸ್ I ಬಾಹ್ಯಾಕಾಶದ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಆರ್ಟೆಮಿಸ್ ಮಿಷನ್‌ನ್ನು ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮೊದಲ ಮೆಟ್ಟಿಲು ಎಂದೇ ಹೇಳಲಾಗುತ್ತದೆ.

 ಚಂದ್ರನಲ್ಲಿ ಮಿನಿ ಸ್ಪೇಸ್ ಸ್ಟೇಷನ್ ನಿರ್ಮಾಣಕ್ಕೆ ಯೋಜನೆ

ಚಂದ್ರನಲ್ಲಿ ಮಿನಿ ಸ್ಪೇಸ್ ಸ್ಟೇಷನ್ ನಿರ್ಮಾಣಕ್ಕೆ ಯೋಜನೆ

2024ರಲ್ಲಿ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಇಳಿಯುವ ಮೊದಲು ಅದರ ಸುತ್ತ ಸುತ್ತುವ ಮಿನಿ-ಸ್ಪೇಸ್ ಸ್ಟೇಷನ್‌ನ್ನು ಸ್ಥಾಪಿಸಲು ನಾಸಾದ ಆರ್ಟೆಮಿಸ್ ಪ್ರೋಗ್ರಾಂನಲ್ಲಿ ಗ್ರಾಫಿಕ್ ಮಾಡಲಾಗಿದೆ. ಕ್ಯಾಪ್ಸುಲ್ ಚಂದ್ರನ ಆಚೆಗೆ 40,000 ಮೈಲುಗಳಷ್ಟು ದೂರದ ರೆಟ್ರೋಗ್ರೇಡ್ ಆರ್ಬಿಟ್ (DRO)ಗೆ ಹೋಗಲು ಅದರ ಎಂಜಿನ್‌ಗಳನ್ನು ಉಪಯೋಗಿಸಿಕೊಳ್ಳುತ್ತದೆ.

ಭವಿಷ್ಯದ ಯೋಜನೆಯನ್ನು ಸಕಾರಗೊಳಿಸಲು ನಾಸಾ ಆರ್ಟೆಮಿಸ್-I ಮಿಷನ್ ಸಾಕಷ್ಟು ಚಂದ್ರಯಾನಕ್ಕೆ ಹಾಗೂ ತಂತ್ರಜ್ಞಾನವನ್ನು ಸುಧಾರಿಸಲು ಸಹಾಯವಾಗಲಿದೆ. ಮಾನವರಹಿತವಾಗಿ ಚಂದ್ರಯಾನ ಕೈಗೊಳ್ಳಲಿರುವ ಆರ್ಟೆಮಿಸ್-I ಚಂದ್ರನ ಸುತ್ತಲು ಹೊಸ ಸಂಶೋಧನೆಗಳನ್ನು ನಡೆಸಲಿದೆ.

 ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ!

ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ!

2024ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಓರ್ವ ಮಹಿಳೆ ಕೂಡ ಸೇರಿರುತ್ತಾರೆ. ಒಂದು ವೇಳೆ ನಾಸಾ ಯಶಸ್ವಿಯಾಗಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಿದ್ದೇ ಆದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆರ್ಟೆಮಿಸ್-I ಉಡಾವಣೆಯಾದ ನಂತರ ಒಟ್ಟು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಲಿದೆ. 42 ದಿನಗಳ ಬಳಿಕ ಭೂಮಿಗೆ ವಾಪಸ್ ಬರಲಿದೆ.

English summary
NASA has aborted a second launch attempt for its giant Moon rocket because of yet another fuel leak. The countdown was scrubbed after Kennedy Space Center technicians made three failed attempts to fix a large leak of supercooled liquid hydrogen propellant being pumped into the rocket’s core-stage fuel tanks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X