ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೂರ್ಯ ನೌಕೆ' ನಭಕ್ಕೆ ಚಿಮ್ಮಲು ಕೆಲವೇ ಕ್ಷಣಗಳು ಬಾಕಿ

|
Google Oneindia Kannada News

ಫ್ಲೋರಿಡಾ, ಆಗಸ್ಟ್ 11: ನಾಸಾದ ಮಹತ್ವಾಕಾಂಕ್ಷೆಯ 'ಪಾರ್ಕರ್ ಸೋಲಾರ್ ಪ್ರೋಬ್' ನೌಕೆ ಸೂರ್ಯನ ಅಂಗಳದತ್ತ ಧಾವಿಸಲು ಕ್ಷಣಗಣನೆ ಆರಂಭವಾಗಿದೆ.

ಫ್ಲೋರಿಡಾದ ಕೇಪ್ ಕ್ಯಾನವೆರಲ್ ಏರ್ ಫೋರ್ಸಸ್ ಸ್ಟೇಷನ್‌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1.25ರ ಸುಮಾರಿಗೆ (ಫ್ಲೋರಿಡಾದಲ್ಲಿ ರಾತ್ರಿ 3.55) ಪಾರ್ಕರ್ ನೌಕೆಯನ್ನು ಸೂರ್ಯನತ್ತ ಉಡ್ಡಯನ ಮಾಡಲಿದೆ.

ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್

ಸುಡು ಸೂರ್ಯನ ಬಿಸಿಲಿನ ತೋಟದಲ್ಲಿ ಅಡ್ಡಾಡಲಿರುವ ಈ ನೌಕೆ ಅಲ್ಲಿಂದ ಹೊರಹೊಮ್ಮುವ ಕಿರಣಗಳು, ಅದರಲ್ಲಿನ ಶಕ್ತಿಗಳು, ಸೌರ ವಾಯುವಿನ ಹುಟ್ಟು ಮತ್ತು ಪರಿಣಾಮಗಳು, ಶಾಖದ ಚಲನೆ ಹೀಗೆ ಅನೇಕ ವಿಷಯಗಳ ಅಧ್ಯಯನಕ್ಕೆ ನೆರವಾಗಲಿದೆ.

Nasas parker solar probe launching from florida

ಸಣ್ಣ ಕಾರ್ ಗಾತ್ರದ ಈ ನೌಕೆ ಸೂರ್ಯನಿಂದ ಸುಮಾರು 4 ಮಿಲಿಯನ್ ಮೈಲು ದೂರದ ಅದರ ಪ್ರಭಾವಲಯದಲ್ಲಿ ನೇರವಾಗಿ ಹಾರಾಟ ನಡೆಸಲಿದೆ.

ಆಗಸ್ಟ್ 11ಕ್ಕೆ ಭಾಗಶಃ ಸೂರ್ಯ ಗ್ರಹಣ: ಎಲ್ಲಿ ಗೋಚರ, ಯಾರಿಗೆ ಗ್ರಹಚಾರ?ಆಗಸ್ಟ್ 11ಕ್ಕೆ ಭಾಗಶಃ ಸೂರ್ಯ ಗ್ರಹಣ: ಎಲ್ಲಿ ಗೋಚರ, ಯಾರಿಗೆ ಗ್ರಹಚಾರ?

'ಅಸಂಖ್ಯಾತ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸತತ ಎಂಟು ವರ್ಷದ ಶ್ರಮದ ಫಲ ಕೊನೆಗೂ ಈಡೇರುತ್ತಿದೆ' ಎಂದು ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯ ವಿಜ್ಞಾನಿ ಆಡಂ ಜಬೊ ಹೇಳಿದ್ದಾರೆ.

English summary
NASA's Parker Solar Probe launching from Florida's Cape Canaveral Air Force Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X