ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ

|
Google Oneindia Kannada News

ಸಾಮಾನ್ಯ ಲಸಿಕೆಗಿಂತ ಮೂಗಿಗೆ ಸಿಂಪಡಿಸುವ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ಹೇಳಿದೆ.

ಅಂತಿಮ ಹಂತಕ್ಕೆ ತಲುಪಿರುವ ಕೊವಿಡ್ 19 ಲಸಿಕೆಗಳೆಲ್ಲಾ ತೋಳಿಗೆ ಚುಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಇದೀಗ ಅಭಿವೃದ್ಧಿಪಡಿಸಲಾಗಿರುವ ನಾಸಲ್ ಸ್ಪ್ರೇ ಮತ್ತಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ಗೆ ಚೀನಾದಿಂದ ಬಂತು ಮೂಗಿನ ಸಿಂಪಡಣೆ ಲಸಿಕೆಕೊರೊನಾ ವೈರಸ್‌ಗೆ ಚೀನಾದಿಂದ ಬಂತು ಮೂಗಿನ ಸಿಂಪಡಣೆ ಲಸಿಕೆ

ಸಾಮಾನ್ಯವಾಗಿ ಮನುಷ್ಯರಿಗೆ ಕೊರೊನಾ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಸೋಂಕನ್ನು ತಡೆಯುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಇನ್ಹೇಲ್ ಲಸಿಕೆಗಳೊಂದಿಗೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡಲು ಪ್ರಯತ್ನ ನಡೆಯುತ್ತಿದೆ.

Nasal Spray Covid Vaccines May Be More Effective

Recommended Video

ಹಿಂದು ದೇವಸ್ಥಾನ ಹೊಡಿಯೋ ಅಂತ ಕೆಟ್ಟ ಮನಸ್ಸು ಯಾಕೆ?? | Oneindia Kannada

ಮೂಗಿಗೆ ಸಿಂಪಡಿಸುವ ಲಸಿಕೆಯ ಮೊದಲ ಹಂತದ ಪ್ರಯೋಗವು ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಧಿಕಾರಿಗಳು 100 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳುತ್ತಿದೆ. ಹಾಂಕಾಂಗ್ ಹಾಗೂ ಚೀನಾ ಮುಖ್ಯ ಭೂಮಿ ನಡುವಿನ ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಹಾಂಕಾಂಗ್ ವಿಶ್ವವಿದ್ಯಾಲಯ, ಕ್ಸಿಯಾಮೆನ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಾಂಟೈ ಬಯಾಲಾಜಿಕಲ್ ಫಾರ್ಮಸಿಯ ಸಂಶೋಧಕರು ಜತೆಗೂಡಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ.

ಇದರ ಜತೆಗೆ ಎಚ್‌1ಎನ್1, ಎಚ್3ಎನ್2 ಮತ್ತು ಬಿ ಇನ್‌ಫ್ಲೂಯೆಂಜಾ ವೈರಸ್‌ಗಳನ್ನೂ ನಾಸಿಕ ಸಿಂಪಡೆಣೆಯ ಲಸಿಕೆ ನಿಯಂತ್ರಿಸಬಲ್ಲದು.

ಇದರು ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿಸ್ಟ್ ಯುಯೆನ್ ಕ್ವೊಕ್ ಯುಂಗ್ ತಿಳಿಸಿದ್ದಾರೆ.

English summary
The Covid-19 vaccines closest to the finish line are designed to be injected into the arm. Researchers are looking at whether they can get better protection from inoculations that fight the virus at its point of attack - the nose and mouth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X