ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನಲ್ಲಿ ಪಿರಮಿಡ್ ಕಂಡ ಕ್ಯೂರಿಯಾಸಿಟಿ

|
Google Oneindia Kannada News

ನ್ಯೂಯಾರ್ಕ್, ಜೂ. 23: ಮಂಗಳನ ಅಂಗಳದಲ್ಲಿ ಪಿರಮಿಡ್ ಆಕಾರದ ರಚನೆಗಳು ಪತ್ತೆಯಾಗಿವೆ. ಅಮೆರಿಕದ ಬಾಹ್ಯಾಕಾಶ ಕೇಂದ್ರ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ನೌಕೆಯು ಕೆಂಪು ಗ್ರಹದದಲ್ಲಿ ಪಿರಮಿಡ್‌ನಂತಹ ರಚನೆ ಪತ್ತೆಮಾಡಿದ್ದು ಫೋಟೋ ರವಾನಿಸಿದೆ.

ಮಂಗಳನಲ್ಲಿ ಹಿಂದೆ ಜೀವಿಗಳು ಇದ್ದರಿಬಹದು ಎಂಬ ವಾದಕ್ಕೆ ಮತ್ತಷ್ಟು ಇದು ಮತ್ತಷ್ಟು ಪುಷ್ಟಿ ನೀಡಿದೆ. ಮೇ 7ರಂದೇ ತೆಗೆದಿರುವ ಚಿತ್ರವನ್ನು ಇದೀಗ ಬಹಿರಂಗ ಮಾಡಲಾಗಿದೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ನೋಡಿದ್ದೀರಾ?]

mars

ಕ್ಯೂರಿಯಾಸಿಟಿ ರೋವರ್‌ನಲ್ಲಿರುವ ಮಾಸ್ಟರ್ ಕ್ಯಾಮೆರಾ ಪಿರಮಿಡ್‌ನ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಪಿರಮಿಡ್ ಮನುಷ್ಯ ನಿರ್ಮಿತ ಹೌದೋ ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು ವಿಜ್ಞಾನಿಗಳ ಮುಂದಿನ ಸವಾಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಇದುವರೆಗೂ ಮಂಗಳನ ಅಂಗಳದಲ್ಲಿ ಸೆರೆಹಿಡಿದುರುವ ರಚನೆಗಳಲ್ಲಿ ಪಿರಮಿಡ್ ಮಹತ್ವದ್ದು ಎಂದು ನಾಸಾ ತಿಳಿಸಿದೆ. ಇದಲ್ಲೂ ಮೊದಲು ಮಂಗಳನ ಮಣ್ಣಿನಲ್ಲಿ ಮಂಜುಗಡ್ಡೆ ಮತ್ತು ನೀರಿನ ಅಂಶ ಇದೆ ಎಂದು ಹೇಳಲಾಗಿತ್ತು.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ಮಂಗಳ ಗ್ರಹದ ವಾತಾವರಣ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಅಮೆರಿಕದ ಕ್ಯೂರಿಯಾಸಿಟಿ ರೋವರ್ ಮತ್ತು ಭಾರತದ ಮಂಗಳಯಾನ ನಿರಂತರ ಸಂಶೋಧನೆಯಲ್ಲಿ ತೊಡಗಿವೆ. ಮಂಗಳ ಗ್ರಹದ ಮೇಲೆ ಆಗುತ್ತಿರುವ ಬದಲಾವಣೆಗಳ ಚಿತ್ರವನ್ನು ಆಗಾಗ ರವಾನಿಸುತ್ತಿವೆ.

2015ರ ಗ್ರಹಣ ಪಟ್ಟಿ

ಮಂಗಳನ ಅಂಗಳದಲ್ಲಿ ಪಿರಮಿಡ್ ಹೇಗಿದೆ ವಿಡಿಯೋ ನೋಡಿ

English summary
Fuelling speculation that advanced civilisation once thrived on Mars, NASA's Curiosity rover has found a pyramid-like structure on the Red Planet, media reports said. This image that bears an uncanny resemblance to the Great Pyramid in Egypt was captured by Mastcam: Right on-board NASA's Mars rover Curiosity on May 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X