ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಿಟ್ಜರ್‌ನ 15ನೇ ವಾರ್ಷಿಕೋತ್ಸವಕ್ಕೆ ನಾಸಾ ನೀಡಿದ 15 ಚೆಂದದ ಉಡುಗೊರೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 30: ನಾಸಾದ ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿ 15 ವರ್ಷಗಳನ್ನು ಕಳೆದಿದೆ. ಈ 15ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಪಿಟ್ಜರ್‌ನ ಅತ್ಯದ್ಭುತ ಸಂಶೋಧನೆಗಳನ್ನು ನಾಸಾ ಒಂದು ಗ್ಯಾಲರಿಯೊಳಗೆ ತಂದಿರಿಸಿದೆ.

2003ರ ಆಗಸ್ಟ್ 25ರಂದು ನಾಸಾ, ಸ್ಪಿಟ್ಜರ್ ಅನ್ನು ಸೋಲಾರ್ ಆರ್ಬಿಟ್‌ಗೆ ಉಡಾವಣೆ ಮಾಡಿತ್ತು. ಇದು ಬಾಹ್ಯಾಕಾಶವನ್ನು ತಲುಪಿದ ನಾಸಾದ ನಾಲ್ಕು ಮಹಾ ಅಬ್ಸರ್ವೇಟರಿಗಳಲ್ಲಿ ಕೊನೆಯದ್ದಾಗಿದೆ.

ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾಸಾದಲ್ಲಿ ಇಂಥ ಘಟನೆ...ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾಸಾದಲ್ಲಿ ಇಂಥ ಘಟನೆ...

ಪ್ರಾರಂಭಿಕ ಯೋಜನೆ ಪ್ರಕಾರ ಇದು ಕನಿಷ್ಠ 2.5 ವರ್ಷ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸ್ಪಿಟ್ಜರ್ ಟೆಲಿಸ್ಕೋಪ್ ಅದರ ನಿರೀಕ್ಷಿತ ಕಾಲಾವಧಿಯನ್ನೂ ಮೀರಿ ಕಾರ್ಯನಿರ್ವಹಿಸುತ್ತಿದೆ.

ಬಾಹ್ಯಗ್ರಹ ಹವಾಮಾನ ನಕಾಶೆ

ಬಾಹ್ಯಗ್ರಹ ಹವಾಮಾನ ನಕಾಶೆ

ಸ್ಪಿಟ್ಜರ್ ದೂರದರ್ಶಕವು ಇನ್‌ಫ್ರಾರೆಡ್ ಬೆಳಕನ್ನು ಪತ್ತೆಮಾಡುತ್ತದೆ. ಶಾಖದ ಕಿರಣಗಳಂತಹ ಬೆಚ್ಚಗಿನ ವಸ್ತುಗಳಿಂದ ಬರುವ ಬೆಳಕನ್ನು ಅದು ಕಂಡುಹಿಡಿಯಬಲ್ಲದು. ನಮ್ಮ ಸೌರ ವ್ಯವಸ್ಥೆಯಾಚೆಗಿನ ಗ್ರಹಗಳ ಅಧ್ಯಯನಕ್ಕೆ ಈ ದೂರದರ್ಶಕವನ್ನು ಬಳಸಲು ವಿಜ್ಞಾನಿಗಳು ಉದ್ದೇಶಿಸಿರಲಿಲ್ಲ. ಆದರೆ, ಅದರ ಬೆಳಕಿನ ಶಾಖ ಗ್ರಹಿಸುವ ಶಕ್ತಿಯು ಅದು ಈ ಕ್ಷೇತ್ರದಲ್ಲಿ ಮಹತ್ವದ ಸಾಧನ ಎನಿಸಿತು.

2009ರಲ್ಲಿ ಸ್ಪಿಟ್ಜರ್ ನಮ್ಮ ಸೌರ ವ್ಯವಸ್ಥೆಯಾಚೆಗಿನ ಗ್ರಹದ ಕುರಿತು ರವಾನಿಸಿದ ಮೊದಲ ಹವಾಮಾನ ನಕ್ಷೆಯ ಮಾಹಿತಿಗಳನ್ನು ವಿಜ್ಞಾನಿಗಳು ಬಳಸಿಕೊಂಡರು. ಈ ಬಾಹ್ಯಗ್ರಹಗಳ ಹವಾಮಾನ ನಕಾಶೆಯು ಅಲ್ಲಿನ ಬೃಹತ್ ಅನಿಲದ ಹರಿವು, ಗಾಳಿಯ ವೇಗ ಮುಂತಾದವುಗಳನ್ನು ಬಹಿರಂಗಪಡಿಸಿತು. ಈ ಮೇಲಿನ ಚಿತ್ರವು ಆ ಗ್ರಹದ ಕುರಿತಾದ ಕಲಾವಿದನ ಕಲ್ಪನೆಯಲ್ಲಿ ಮೂಡಿದೆ.

ಹೊಸ ತಾರೆಗಳ ತೊಟ್ಟಿಲು

ಹೊಸ ತಾರೆಗಳ ತೊಟ್ಟಿಲು

2011ರಲ್ಲಿ ಕಾಸ್ಮೋಸ್-ಎಜೆಡ್ ಟೆಕ್3 ಎಂಬ ಬಹುದೂರದಲ್ಲಿರುವ ಗ್ಯಾಲಕ್ಸಿಗಳ ಗುಚ್ಛವನ್ನು ಪತ್ತೆಹಚ್ಚಲು ಬಾಹ್ಯಾಕಾಶ ತಜ್ಞರು ಸ್ಪಿಟ್ಜರ್‌ಅನ್ನು ಬಳಸಿಕೊಂಡಿದ್ದರು. ಈ ಗ್ಯಾಲಕ್ಸಿಗಳ ಗುಂಪಿನಿಂದ ಹೊರ ಬರುತ್ತಿದ್ದ ಬೆಳಕು ಭೂಮಿಯನ್ನು ತಲುಪಲು 12 ಬಿಲಿಯನ್ ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.

ಈವರೆಗೂ ಪತ್ತೆಹಚ್ಚಲಾದ ಅತ್ಯಂತ ದೂರದ ಗ್ಯಾಲಕ್ಸಿ ಇದು. ಇದು ಗ್ಯಾಲಕ್ಸಿಗಳು ಹೇಗೆ ಸೃಷ್ಟಿಯಾದವು ಮತ್ತು ಜಗತ್ತಿನ ಇತಿಹಾಸದುದ್ದಕ್ಕೂ ಹೇಗೆ ಬೆಳೆಯಿತು ಎಂಬುದನ್ನು ಕಂಡುಕೊಳ್ಳಲು ವಿಜ್ಞಾನಿಗಳಿಗೆ ಹೊಸ ಆಲೋಚನಾ ಸಂಗತಿಗಳನ್ನು ನೀಡಿತು.

ಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆ

ಹೊಸ ತಾರೆಗಳ ತೊಟ್ಟಿಲು

ಹೊಸ ತಾರೆಗಳ ತೊಟ್ಟಿಲು

2011ರಲ್ಲಿ ಕಾಸ್ಮೋಸ್-ಎಜೆಡ್ ಟೆಕ್3 ಎಂಬ ಬಹುದೂರದಲ್ಲಿರುವ ಗ್ಯಾಲಕ್ಸಿಗಳ ಗುಚ್ಛವನ್ನು ಪತ್ತೆಹಚ್ಚಲು ಬಾಹ್ಯಾಕಾಶ ತಜ್ಞರು ಸ್ಪಿಟ್ಜರ್‌ಅನ್ನು ಬಳಸಿಕೊಂಡಿದ್ದರು. ಈ ಗ್ಯಾಲಕ್ಸಿಗಳ ಗುಂಪಿನಿಂದ ಹೊರ ಬರುತ್ತಿದ್ದ ಬೆಳಕು ಭೂಮಿಯನ್ನು ತಲುಪಲು 12 ಬಿಲಿಯನ್ ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.

ಈವರೆಗೂ ಪತ್ತೆಹಚ್ಚಲಾದ ಅತ್ಯಂತ ದೂರದ ಗ್ಯಾಲಕ್ಸಿ ಇದು. ಇದು ಗ್ಯಾಲಕ್ಸಿಗಳು ಹೇಗೆ ಸೃಷ್ಟಿಯಾದವು ಮತ್ತು ಜಗತ್ತಿನ ಇತಿಹಾಸದುದ್ದಕ್ಕೂ ಹೇಗೆ ಬೆಳೆಯಿತು ಎಂಬುದನ್ನು ಕಂಡುಕೊಳ್ಳಲು ವಿಜ್ಞಾನಿಗಳಿಗೆ ಹೊಸ ಆಲೋಚನಾ ಸಂಗತಿಗಳನ್ನು ನೀಡಿತು.

ಧೂಮಕೇತು ಸೂಪ್ ರೆಸಿಪಿ

ಧೂಮಕೇತು ಸೂಪ್ ರೆಸಿಪಿ

2005ರ ಜೂನ್ 4ರಂದು ನಾಸಾದ ಡೀಪ್ ಇಂಪ್ಯಾಕ್ಟ್ ಬಾಹ್ಯಾಕಾಶ ನೌಕೆಯು ಟೆಂಪಲ್ 1 ಎಂಬ ಧೂಮಕೇತುವಿಗೆ ಡಿಕ್ಕಿಯಾಗಿ ಪುಡಿಯಾಯಿತು. ಈ ಅಪಘಾತದಿಂದ ಹೊರಬಂದ ಮೋಡದಂತಹ ವಾತಾವರಣದಲ್ಲಿ ನಮ್ಮ ಸೌರ ವ್ಯವಸ್ಥೆಯಲ್ಲಿನ 'ಸೂಪ್‌'ನ ಅಂಶಗಳು ಒಳಗೊಂಡಿದ್ದವು. ಡೀಪ್ ಇಂಪ್ಯಾಕ್ಟ್‌ ಕುರಿತ ಸ್ಪಿಟ್ಜರ್‌ನ ಗ್ರಹಿಕೆಗಳ ಮಾಹಿತಿ ಪಡೆದು ಸೂಪ್ಅನ್ನು ವಿಶ್ಲೇಷಿಸಿದ ವಿಜ್ಞಾನಿಗಳಿಗೆ ನಮ್ಮ ಸೌರ ವ್ಯವಸ್ಥೆಯಲ್ಲಿನ ಗ್ರಹಗಳು, ಧೂಮಕೇತುಗಳು ಮತ್ತು ಇತರೆ ಆಕಾಶಕಾಯಗಳ ಸೃಷ್ಟಿಯಲ್ಲಿರುವ ಅಂಶಗಳನ್ನು ಗುರುತಿಸಲು ನೆರವಾಯಿತು.

ನಾಸಾದ ಪಾರ್ಕರ್ ಸೋಲಾರ್ ನೌಕೆ ಹಿಂದೆ ಭಾರತದ ವಿಜ್ಞಾನಿಯ ಕೊಡುಗೆನಾಸಾದ ಪಾರ್ಕರ್ ಸೋಲಾರ್ ನೌಕೆ ಹಿಂದೆ ಭಾರತದ ವಿಜ್ಞಾನಿಯ ಕೊಡುಗೆ

ಶನಿಗ್ರಹದ ಸುತ್ತಲಿನ ಬೃಹತ್ ಉಂಗುರ

ಶನಿಗ್ರಹದ ಸುತ್ತಲಿನ ಬೃಹತ್ ಉಂಗುರ

ಶನಿಗ್ರಹದ ಸುತ್ತ ಇರುವ ಉಂಗುರಗಳ ವ್ಯವಸ್ಥೆಯ ಅದ್ಭುತ ಚಿತ್ರಗಳನ್ನು ನಿರಂತರವಾಗಿ ತೆಗೆಯಲಾಗುತ್ತದೆ. ಆದರೆ, ಈ ಫೋಟೊಗಳು ಆ ಗ್ರಹದ ಅತ್ಯಂತ ದೊಡ್ಡ ಉಂಗುರದ ಬಗ್ಗೆ ಯಾವ ಮಾಹಿತಿಯನ್ನೂ ನೀಡಿರಲಿಲ್ಲ.

ಶನಿ ಗ್ರಹದ ಸುತ್ತಲೂ ಇರುವ ಇತರೆ ಉಂಗುರಗಳಿಗಿಂತಲೂ ಈ ವಿಶಿಷ್ಟ ಸಂರಚನೆಯ ಉಂಗುರದಲ್ಲಿ ಹೆಚ್ಚಿನ ಪ್ರಮಾಣದ ಕಣಗಳ ರಾಶಿಯಿದೆ. ಈ ಉಂಗುರ ಶನಿ ಗ್ರಹಕ್ಕಿಂತಲೂ 3.7 ಮಿಲಿಯನ್ ಮೈಲು, ಅಂದರೆ ಆರು ಮಿಲಿಯನ್ ಮೈಲು ದೂರದಲ್ಲಿ ಆರಂಭವಾಗಿದೆ. ಶನಿಗಿಂತಲೂ 170 ಪಟ್ಟು ಅಗಲವಾದ ವ್ಯಾಸ ಹೊಂದಿದೆ. ಅಲ್ಲದೆ, ಗ್ರಹದ ವ್ಯಾಸಕ್ಕಿಂತ 20 ಪಟ್ಟು ದಪ್ಪಗಿದೆ.

ಈ ಉಂಗುರದಲ್ಲಿನ ಶೀತ ದೂಳುಗಳನ್ನು ಪತ್ತೆಹಚ್ಚುವಲ್ಲಿ ಸ್ಪಿಟ್ಜರ್ ಯಶಸ್ವಿಯಾಗಿತ್ತು. ಇದರಲ್ಲಿರುವ ಸಣ್ಣ ಹಾಗೂ ದಟ್ಟವಾದ ಕಣಗಳು ಹೆಚ್ಚಿನ ಬೆಳಕನ್ನು ಪ್ರತಿಫಲಿಸಲು ಅವಕಾಶ ನೀಡದ ಕಾರಣ ಇಷ್ಟು ಕಾಲ ಇದು ಗೋಚರವಾಗುತ್ತಿರಲಿಲ್ಲ.

ಬಾಹ್ಯಾಕಾಶದಲ್ಲಿ ಬುಕ್ಕಿಬಾಲ್‌ಗಳು

ಬಾಹ್ಯಾಕಾಶದಲ್ಲಿ ಬುಕ್ಕಿಬಾಲ್‌ಗಳು

ಬುಕ್ಕಿಬಾಲ್‌ಗಳು ಫುಟ್ಬಾಲ್ ಚೆಂಡಿನಂತೆ ವಿನ್ಯಾಸ ಹೊಂದಿರುವ ಹೆಕ್ಸಾಜನ್-ಪೆಂಟಗನ್ ಇಂಗಾಲದ ಕಣಗಳು. ವಾಸ್ತುಶಿಲ್ಪಿ ಬುಕ್‌ಮಿನಿಸ್ಟರ್ ಫುಲ್ಲರ್ ಅವರ ವಿನ್ಯಾಸವನ್ನು ಇದು ಹೋಲುತ್ತಿರುವುದರಿಂದ ಅದಕ್ಕೆ ಬುಕ್ಕಿಬಾಲ್ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶದಲ್ಲಿ ಬುಕ್ಕಿಬಾಲ್‌ಗಳನ್ನು ಪತ್ತೆಹಚ್ಚಿದ ಮೊದಲ ಟೆಲಿಸ್ಕೋಪ್ ಸ್ಪಿಟ್ಜರ್.

ಸಾಯುತ್ತಿರುವ ನಕ್ಷತ್ರ ಅಥವಾ ಟಿಸಿ1 ಎಂದು ಕರೆಯಲಾಗುವ ನೆಬುಲಾ ಗ್ರಹದ ಸುತ್ತಲೂ ಹರಡಿಕೊಂಡಿರುವ ಹರಡಿಕೊಂಡಿರುವ ಈ ಕಣಗಳನ್ನು ಸ್ಪಿಟ್ಜರ್ ಗುರುತಿಸಿದೆ. ಟಿಸಿ 1 ಒಂದು ಕಾಲದಲ್ಲಿ ನಮ್ಮ ಸೂರ್ಯನಂತೆಯೇ ಇತ್ತು. ಆದರೆ, ವಯಸ್ಸಾದಂತೆ ತನ್ನ ಹೊರ ಮೇಲ್ಮೈಯನ್ನು ಕಳೆದುಕೊಂಡು ಕೊನೆಗೆ ಬಿಳಿ ಸಾಂದ್ರದ ಸಣ್ಣ ನಕ್ಷತ್ರವಾಗಿ ಉಳಿದುಕೊಂಡಿದೆ. ಈ ನಕ್ಷತ್ರ ಉರಿದ ಪರಿಣಾಮ ಹೊರ ಬಂದ ಇಂಗಾಲದ ಪದರಗಳಿಂದ ಬುಕ್ಕಿಬಾಲ್‌ಗಳು ಸೃಷ್ಟಿಯಾಗಿವೆ ಎಂದು ನಂಬಲಾಗಿದೆ.

ಸೌರ ವ್ಯವಸ್ಥೆಗಳ ಘರ್ಷಣೆ

ಸೌರ ವ್ಯವಸ್ಥೆಗಳ ಘರ್ಷಣೆ

ಸೌರ ವ್ಯವಸ್ಥೆಯ ಆಚೆ ಅನೇಕ ಬಂಡೆಗಳ ನಡುವೆ ಡಿಕ್ಕಿಗಳು ನಡೆದಿರುವುದಕ್ಕೆ ಸ್ಪಿಟ್ಜರ್ ಪುರಾವೆಗಳನ್ನು ಸಂಗ್ರಹಿಸಿದೆ. ನಮ್ಮದೇ ಸೌರ ವ್ಯವಸ್ಥೆಯಲ್ಲಿಯೂ ಈ ಹಿಂದೆ ಇಂತಹ ಘರ್ಷಣೆಗಳು ಸಾಮಾನ್ಯವಾಗಿದ್ದವು. ಈ ಘರ್ಷಣೆಗಳೇ ಗ್ರಹಗಳ ಸೃಷ್ಟಿಗೆ ಕಾರಣವಾಗಿರುವುದು.

ಹೊಸದಾಗಿ ಸೃಷ್ಟಿಯಾದ ನಕ್ಷತ್ರವೊಂದರ ಸುತ್ತಲೂ ದೂಳು ಆವರಿಸುತ್ತಿರುವುದನ್ನು ಸ್ಪಿಟ್ಜರ್ ಇದೇ ವೇಳೆ ಕಂಡುಹಿಡಿದಿತ್ತು. ಇದು ಎರಡು ಬೃಹತ್ ಆಕಾಶಕಾಯಗಳ ನಡುವಣ ಡಿಕ್ಕಿಯಿಂದ ಉಂಟಾಗಿರಬಹುದು ಎನ್ನಲಾಗಿದೆ. ಆಕಾಶಕಾಯಗಳ ನಡುವೆ ಈ ಘರ್ಷಣೆ ಉಂಟಾಗುವುದಕ್ಕೂ ಮೊದಲು ಮತ್ತು ಘರ್ಷಣೆ ಬಳಿಕ ಒಂದು ವ್ಯವಸ್ಥೆ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ದೊರಕಿರುವುದು ಇದೇ ಮೊದಲು.

ಸೌರ ವ್ಯವಸ್ಥೆಯಾಚೆಗಿನ ವಾತಾವರಣ

ಸೌರ ವ್ಯವಸ್ಥೆಯಾಚೆಗಿನ ವಾತಾವರಣ

2007ರಲ್ಲಿ ನಮ್ಮ ಸೌರ ವ್ಯವಸ್ಥೆಯಾಚೆಗಿನ ಗ್ರಹಗಳಲ್ಲಿನ ವಾತಾವರಣದಲ್ಲಿ ಸಣ್ಣಕಣಗಳನ್ನು ನೇರವಾಗಿ ಹತ್ತೆಹಚ್ಚಿದ ಮೊದಲ ಟೆಲಿಸ್ಕೋಪ್ ಸ್ಪಿಟ್ಜರ್. ವಿಜ್ಞಾನಿಗಳು ಸ್ಪೆಕ್ಟ್ರೊಸ್ಕೋಪಿ ಎಂಬ ತಂತ್ರಜ್ಞಾನವನ್ನು ಬಳಸಿ ಎರಡು ವಿಭಿನ್ನ ಗ್ರಹಗಳಲ್ಲಿನ ರಾಸಾಯನಿಕ ಕಣಗಳನ್ನು ಗುರುತಿಸಿದರು. ಈ ಗ್ರಹಗಳು ಕಲ್ಲಿಗಿಂತಲೂ ಅನಿಲಗಳಿಂದ ಸೃಷ್ಟಿಯಾಗಿರುವುದನ್ನು ಪತ್ತೆಹಚ್ಚಿದರು. ಇವುಗಳನ್ನು 'ಹಾಟ್ ಜುಪಿಟರ್ಸ್' ಎಂದು ಕರೆಯಲಾಗಿದೆ.

ಸೂರ್ಯನ ಸ್ಪರ್ಶಕ್ಕಾಗಿ ನಭಕ್ಕೆ ಚಿಮ್ಮಿದ ಪಾರ್ಕರ್ ನೌಕೆ! ಸೂರ್ಯನ ಸ್ಪರ್ಶಕ್ಕಾಗಿ ನಭಕ್ಕೆ ಚಿಮ್ಮಿದ ಪಾರ್ಕರ್ ನೌಕೆ!

ಕಪ್ಪುಕುಳಿಗಳು

ಕಪ್ಪುಕುಳಿಗಳು

ಅನೇಕ ಗ್ಯಾಲಕ್ಸಿಗಳ ಕೇಂದ್ರ ಭಾಗದಲ್ಲಿ ಭಾರಿ ಪ್ರಮಾಣದ ಕಪ್ಪುಕುಳಿಗಳಿವೆ. ವಿಜ್ಞಾನಿಗಳು ಸ್ಪಿಟ್ಜರ್ ಬಳಸಿಕೊಂಡು ಬಹು ದೂರದ ಎರಡು ಬೃಹತ್ ಕಪ್ಪುರಂದ್ರಗಳನ್ನು ಗುರುತಿಸಿದರು. ಇವು ಜಗತ್ತಿನಲ್ಲಿ ಗ್ಯಾಲಕ್ಸಿಗಳ ರಚನೆಯ ಇತಿಹಾಸವನ್ನು ಕಂಡುಹಿಡಿಯುವ ಪ್ರಯತ್ನಕ್ಕೆ ಕೆಲವು ಮಾಹಿತಿಗಳನ್ನು ಒದಗಿಸಿದವು.

ಅತಿ ದೂರದ ಗ್ರಹ

ಅತಿ ದೂರದ ಗ್ರಹ

2010ರಲ್ಲಿ ಇದುವರೆಗೂ ಅತ್ಯಂತ ದೂರದಲ್ಲಿರುವ ಗ್ರಹಗಳಲ್ಲಿ ಒಂದನ್ನು ಪತ್ತೆಮಾಡಲು ಸ್ಪಿಟ್ಜರ್ ನೆರವು ನೀಡಿತು. ಇದು ಭೂಮಿಯಿಂದ 13 ಸಾವಿರ ಜ್ಯೋತಿರ್ವರ್ಷಗಳಷ್ಟು ದೂರವಿದೆ.

ಇದಕ್ಕೂ ಮುನ್ನ ಹೊರ ಸೌರ ವ್ಯವಸ್ಥೆಯ ಗ್ರಹಗಳು ಭೂಮಿಯಿಂದ ಹೆಚ್ಚೆಂದರೆ 1,000 ಜ್ಯೋತಿರ್ವರ್ಷಗಳಷ್ಟು ದೂರ ಇರುತ್ತವೆ ಎಂದು ನಂಬಲಾಗಿತ್ತು.

ಭೂಆಧಾರಿತ ಟೆಲಿಸ್ಕೋಪ್ ಮತ್ತು ಮೈಕ್ರೋಲೆನ್ಸಿಂಗ್ ಎಂಬ ಗ್ರಹ ಪತ್ತೆಯ ತಂತ್ರಜ್ಞಾನಗಳ ನೆರವಿನಿಂದ ಸ್ಪಿಟ್ಜರ್ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು.

NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರNASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ

ಬಾಹ್ಯಗ್ರಹದ ಮೊದಲ ಬೆಳಕು

ಬಾಹ್ಯಗ್ರಹದ ಮೊದಲ ಬೆಳಕು

ನಮ್ಮ ಸೌರ ವ್ಯವಸ್ಥೆಯ ಹೊರಗಿನ ಗ್ರಹದಿಂದ ಬರುವ ಬೆಳಕನ್ನು ನೇರವಾಗಿ ಗುರುತಿಸಿದ ಮೊದಲ ಟೆಲಿಸ್ಕೋಪ್ ಸ್ಪಿಟ್ಜರ್. ಅದಕ್ಕೂ ಮೊದಲು ಈ ಬಾಹ್ಯ ಗ್ರಹಗಳನ್ನು ಪರೋಕ್ಷವಾಗಿ ಮಾತ್ರ ಗುರುತಿಸಲಾಗುತ್ತಿತ್ತು. ಇದು ಬಾಹ್ಯಗ್ರಹ ವಿಜ್ಞಾನದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿತು. ಜತೆಗೆ ಕಲ್ಲುಬಂಡೆಗಳಿರುವ ಗ್ರಹಗಳಲ್ಲಿ ಜೀವಿಗಳ ಅಸ್ತಿತ್ವದ ಸಾಧ್ಯತೆ ಕುರಿತ ಸಂಶೋಧನೆಗೆ ಮಹತ್ವದ ಆಯಾಮ ನೀಡಿತು.

ಕಿರು ಆಕಾಶಕಾಯಗಳ ಪತ್ತೆ

ಕಿರು ಆಕಾಶಕಾಯಗಳ ಪತ್ತೆ

ಸ್ಪಿಟ್ಜರ್‌ನ ಕ್ಷಕಿರಣ ಗ್ರಹಿಕೆ ಶಕ್ತಿಯು ಭೂಮಿಯಿಂದ ಅತಿ ದೂರದಲ್ಲಿ ಪತ್ತೆಯಾದ ಅನೇಕ ವಸ್ತುಗಳ ಅಧ್ಯಯನಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ, ಈ ಟೆಲಿಸ್ಕೋಪ್ ಭೂಮಿಗೆ ಸಮೀಪವಿರುವ ಅತಿ ಸಣ್ಣ ವಸ್ತುಗಳ ಅಧ್ಯಯನಕ್ಕೂ ಬಳಕೆಯಾಗಿದೆ. ಮುಖ್ಯವಾಗಿ ಭೂಮಿಗೆ ಸಮೀಪದ ಸಣ್ಣ ಆಕಾಶಕಾಯಗಳನ್ನು (ಎನ್‌ಇಎ) ಗುರುತಿಸಲು ಹಾಗೂ ಅಧ್ಯಯನ ಮಾಡಲು ಸ್ಪಿಟ್ಜರ್ ಸಹಾಯ ಮಾಡಿದೆ.

ಎನ್‌ಇಎಗಳ ನೈಜ ಗಾತ್ರದ ಗುಣಗಳನ್ನು ಕಂಡುಕೊಳ್ಳಲು ಸ್ಪಿಟ್ಜರ್ ಹೆಚ್ಚು ನೆರವಾಗಿದೆ. ಏಕೆಂದರೆ ಇದು ಆಕಾಶಕಾಯಗಳಿಂದ ಬರುವ ಇನ್‌ಫ್ರಾರೆಡ್ ಬೆಳಕನ್ನು ನೇರವಾಗಿ ಪತ್ತೆಹಚ್ಚುತ್ತದೆ. ಇದರಿಂದ ಆಕಾಶಕಾಯಗಳು ಕಣ್ಣಿಗೆ ಕಾಣಿಸುವ ಬೆಳಕನ್ನು ಹಾಯಿಸುವುದಿಲ್ಲ. ಬದಲಾಗಿ ಸೂರ್ಯನಿಂದ ಪಡೆದ ಬೆಳಕನ್ನು ಸ್ವಲ್ಪವೇ ಪ್ರತಿಫಲಿಸುತ್ತವೆ ಎನ್ನುವುದು ಗೊತ್ತಾಯಿತು. ಅಲ್ಲದೆ ಕೆಲವು ಆಕಾಶಕಾಯಗಳು ಪರಸ್ಪರ 100 ಮೀಟರ್‌ ದೂರದಲ್ಲಿಯೇ ಇವೆ ಎನ್ನುವುದನ್ನೂ ಸ್ಪಿಟ್ಜರ್ ಕಂಡುಕೊಂಡಿತು.

ಕ್ಷೀರಪಥದ ಅಭೂತಪೂರ್ವ ನಕ್ಷೆ

ಕ್ಷೀರಪಥದ ಅಭೂತಪೂರ್ವ ನಕ್ಷೆ

2013ರಲ್ಲಿ ವಿಜ್ಞಾನಿಗಳು ಕ್ಷೀರಪಥ ಗ್ಯಾಲಕ್ಸಿಯ ಬೃಹತ್ ವಿಸ್ತೃತ ನಕಾಶೆ ತಯಾರಿಸಲು ಸ್ಪಿಟ್ಜರ್‌ನ ಎರಡು ಮಿಲಿಯನ್ ಚಿತ್ರಗಳನ್ನು ಬಳಸಿಕೊಂಡರು. 'ಮಿಲ್ಕಿ ವೇ (ಕ್ಷೀರಪಥ) ಗ್ಯಾಲಕ್ಸಿಯನ್ನು ವೀಕ್ಷಿಸುವ ಕೆಲಸ ಸವಾಲಿನದ್ದು. ಏಕೆಂದರೆ ಅದರಿಂದ ಬರುವ ಬೆಳಕನ್ನು ದೂಳಿನ ಕಣಗಳು ಮುಚ್ಚಿರುತ್ತವೆ. ಹೀಗಾಗಿ ಗ್ಯಾಲಕ್ಸಿಯ ಇಡೀ ಪ್ರದೇಶ ಕಣ್ಣಿಗೆ ಕಾಣುವುದಿಲ್ಲ. ಆದರೆ, ಇನ್‌ಫ್ರಾರೆಡ್ ಬೆಳಕು ಕೆಲವೊಮ್ಮೆ ದೂಳುಮಯ ಪ್ರದೇಶವನ್ನು ಹಾಯುವುದರಿಂದ ಗ್ಯಾಲಕ್ಸಿಯ ಅಗೋಚರ ವಿಭಾಗಗಳು ಕಾಣಿಸುತ್ತವೆ.

ಗ್ಯಾಲಕ್ಸಿಯ ಸಂರಚನೆ ಮತ್ತು ಅದರ ಕೇಂದ್ರದಲ್ಲಿರುವ ನಕ್ಷತ್ರಗಳ ನಕಾಶೆಯನ್ನು ಹೆಚ್ಚು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ಜತೆಗೆ ಗ್ಯಾಲಕ್ಸಿಯಲ್ಲಿ ನಿರೀಕ್ಷೆಯಿಂತಲೂ ಹೆಚ್ಚಿನ ಇಂಗಾಲದ ಅಸ್ತಿತ್ವ ಇದೆ ಎಂಬುದನ್ನು ಬಹಿರಂಗಪಡಿಸಿದೆ.

'ಬಿಗ್ ಬೇಬಿ' ಗ್ಯಾಲಕ್ಸಿಗಳು

'ಬಿಗ್ ಬೇಬಿ' ಗ್ಯಾಲಕ್ಸಿಗಳು

ಬಹಳ ವರ್ಷಗಳ ಹಿಂದೆಯೇ ಸೃಷ್ಟಿಯಾದ ಗ್ಯಾಲಕ್ಸಿಗಳ ಅಧ್ಯಯನಕ್ಕೆ ಸ್ಪಿಟ್ಜರ್ ಗಣನೀಯ ಕೊಡುಗೆ ನೀಡಿದೆ. ಈ ಗ್ಯಾಲಕ್ಸಿಗಳಿಂದ ಹೊರಡುವ ಬೆಳಕು ಭೂಮಿಯನ್ನು ತಲುಪಲು ಕೋಟ್ಯಂತರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಅವು ಕೋಟ್ಯಂತರ ವರ್ಷಗಳ ಹಿಂದೆಯೇ ಉಗಮಿಸಿದ್ದವು ಎಂದು ವಿಜ್ಞಾನಿಗಳು ಗ್ರಹಿಸಿದ್ದಾರೆ.

ಸ್ಪಿಟ್ಜರ್ ಪತ್ತೆಹಚ್ಚಿದ ಅತಿ ದೂರದ ಗ್ಯಾಲಕ್ಸಿಯ ಬೆಳಕು 13.4 ಬಿಲಿಯನ್ ವರ್ಷಗಳಷ್ಟು ಹಳೆಯದು ಅಥವಾ ಜಗತ್ತು ಸೃಷ್ಟಿಯಾದ 400 ಮಿಲಿಯನ್ ವರ್ಷಗಳಿಗಿಂತ ಕಡಿಮೆ ಅವಧಿಯದ್ದು.

ಈ ವಿಭಾಗದಲ್ಲಿ ಅತ್ಯಂತ ಅಚ್ಚರಿದಾಯಕ ಪತ್ತೆ ಎಂದರೆ 'ಬಿಗ್ ಬೇಬಿ' ಗ್ಯಾಲಕ್ಸಿಗಳು ಅಥವಾ ವಿಜ್ಞಾನಿಗಳು ಈ ಮೊದಲು ಗ್ರಹಿಸಿದ್ದಕ್ಕಿಂತಲೂ ಹೆಚ್ಚು ದೊಡ್ಡದಾದ ಮತ್ತು ಬೆಳೆದಿರುವ ಗ್ಯಾಲಕ್ಸಿಗಳು. ಸಣ್ಣ ಸಣ್ಣ ಗ್ಯಾಲಕ್ಸಿಗಳು ಸಂಯೋಜನೆಗೊಂಡು ಆಧುನಿಕ ಗ್ಯಾಲಕ್ಸಿಗಳು ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ, ಬಿಗ್ ಬೇಬಿ ಗ್ಯಾಲಕ್ಸಿಗಳು ಜಗತ್ತಿನ ಹುಟ್ಟಿನ ಆದಿಯಲ್ಲಿಯೇ ಬೃಹತ್ ನಕ್ಷತ್ರಗಳ ಪುಂಜಗಳನ್ನು ಹೊತ್ತುಕೊಂಡಿದ್ದವು.

ಒಂದು ನಕ್ಷತ್ರದ ಸುತ್ತ ಭೂಮಿ ಗಾತ್ರದ ಏಳು ಗ್ರಹಗಳು

ಒಂದು ನಕ್ಷತ್ರದ ಸುತ್ತ ಭೂಮಿ ಗಾತ್ರದ ಏಳು ಗ್ರಹಗಳು

ಟ್ರಾಪಿಸ್ಟ್-1 ಎಂಬ ನಕ್ಷತ್ರದ ಸುತ್ತ ಭೂಮಿಯಷ್ಟೆ ಗಾತ್ರದ ಏಳು ಗ್ರಹಗಳು ಸುತ್ತುತ್ತಿವೆ. ಒಂದೇ ಸೌರ ವ್ಯವಸ್ಥೆಯಲ್ಲಿ ಇದುವರೆಗೂ ಪತ್ತೆಯಾಗಿರುವ ಅತಿ ದೊಡ್ಡ ಭೂಗಾತ್ರದ ಗ್ರಹಗಳ ಗುಚ್ಛ ಇದು. ಈ ವಿಸ್ಮಯಕಾರಿ ಗ್ರಹ ವ್ಯವಸ್ಥೆಯು ವಿಜ್ಞಾನಿಗಳನ್ನು ಮತ್ತು ವಿಜ್ಞಾನಿಯೇತರ ಜನರನ್ನೂ ಸೆಳೆದಿದೆ. ಆ ನಕ್ಷತ್ರದ ಸುತ್ತ ಎಷ್ಟು ಗ್ರಹಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಪಿಟ್ಜರ್ ಮೂಲಕ ಟ್ರಾಪಿಸ್ಟ್ -1 ವ್ಯವಸ್ಥೆಯನ್ನು ವಿಜ್ಞಾನಿಗಳು 500 ಗಂಟೆ ವೀಕ್ಷಿಸಿದ್ದಾರೆ.

ಸೂರ್ಯನಿಗಿಂತ ತಂಪಾಗಿರುವ ಟ್ರಾಪಿಸ್ಟ್-1 ನಕ್ಷತ್ರದ ಅಧ್ಯಯನ ಮಾಡಲು ವಿಜ್ಞಾನಿಗಳು ಈ ಟೆಲಿಸ್ಕೋಪ್‌ನ ಇನ್‌ಫ್ರಾರೆಡ್ ವಿಷನ್ ನೆರವಾಗಿದೆ. ಈ ಗ್ರಹಗಳ ಗಾತ್ರ ಮತ್ತು ಗುಂಪುಗಳನ್ನು ತಿಳಿಯಲು ಸಹ ಅನುಕೂಲವಾಗಿದೆ.

English summary
NASA featured a gallery with 15 greatest discoveries on the honorary of Spitzer's 15 years anniversary in space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X