ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ವಾತಾವರಣ ನಾಶವಾಗಲು ಏನು ಕಾರಣ?

|
Google Oneindia Kannada News

ವಾಷಿಂಗ್ ಟನ್. ನವೆಂಬರ್. 06: ಮಂಗಳ ಗ್ರಹದಲ್ಲಿ ಮಾನವ ವಾಸ ಮಾಡಬಹುದೇ? ಎಂದು ನಿರಂತರ ಸಂಶೋಧನೆಗಳು ನಡೆಯುತ್ತಲೇ ಇವೆ. ಭಾರತ, ಅಮೆರಿಕ, ರಷ್ಯಾ ಆದಿಯಾಗಿ ಎಲ್ಲ ದೇಶಗಳು ಸಂಶೋಧನೆಯಲ್ಲಿ ನಿರತವಾಗಿವೆ.

ಆದರೆ ಈ ಮಧ್ಯೆ ಮಂಗಳನಲ್ಲಿ ವಾಸ ಮಾಡಲು ಯೋಗ್ಯವಾದ ವಾತಾವರಣವಿತ್ತು, ಅದು ನಾಶವಾಗಲು ಪ್ರಬಲ ಸೌರಗಾಳಿಯೇ ಕಾರಣ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ವರದಿಯಲ್ಲಿ ಹೇಳಿದೆ.

ಮಂಗಳ ಗ್ರಹ ಮೊದಲು ಭೂಮಿಯಂತೇ ಇತ್ತು. ಸೂರ್ಯನಿಂದ ಶಾಖ ಮತ್ತು ಪ್ರಬಲವಾದ ಸೌರ ಗಾಳಿಯ ಕಾರಣ ಮಂಗಳ ಗ್ರಹದಲ್ಲಿ ಬದಲಾವಣೆಗಳಾಗಿ ವಾಸಯೋಗ್ಯ ಪರಿಸರ ನಾಶವಾಯಿತು ಎಂದು ನಾಸಾ ಹೇಳಿದೆ.[ಮಂಗಳನ ಅಂಗಳದಲ್ಲಿ ಬುದ್ಧನ ವಿಗ್ರಹ ಇಟ್ಟವರು ಯಾರು?]

NASA: Solar Storms Strip Air From Mars

ಸುಮಾರು 4.4 ಬಿಲಿಯನ್ ವರ್ಷಗಳ ಹಿಂದೆ ಈ ರೀತಿಯ ಬದಲಾವಣೆ ಆಗಿರಬಹುದು ಎಂದು ನಾಸಾ ಸ್ಪೇಸ್ ಕ್ರಾಫ್ಟ್ ತನ್ನ ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿಯನ್ನು ಬಿಡುಗಡೆ ಮಾಡಿದೆ.

ಸೂರ್ಯನಿಂದ ಬರುವ ಪ್ರಬಲವಾದ ಸೌರಗಾಳಿ ಮತ್ತು ಕಾಂತೀಯ ಪ್ರವಾಹವು ಮಂಗಳನ ವಾತಾವರಣವನ್ನೇ ನಾಶ ಮಾಡಿತು. ಇದೀಗ ಭೂಮಿಯ ವಾತಾವರಣದ ಶೇ. 1 ರಷ್ಟು ವಾತಾವರಣವಷ್ಟೇ ಈಗ ಮಂಗಳನಲ್ಲಿದೆ. ಸೌರಗಾಳಿಯ ಪ್ರಮಾಣ ಭೂಮಿಯನ್ನು ಹೆಚ್ಚಾಗಿ ಸೋಕಿದರೆ ಭೂಮಿ ಮೇಲಿನ ವಾತಾವರಣಕ್ಕೂ ಗಂಡಾಂತರವಿದೆ ಎಂಬ ಎಚ್ಚರಿಕೆಯನ್ನೂ ನಾಸಾ ನೀಡಲು ಮರೆತಿಲ್ಲ.[ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ]

ಭಾರತದ ಮಂಗಳಯಾನ 'ಮಾಮ್' ಸಹ ಮಂಗಳ ಗ್ರಹದ ಮೇಲೆ ನಿರಂತರ ಸಂಶೋಧನೆಯಲ್ಲಿ ತೊಡಗಿದೆ.ಅಮೆರಿಕದ ಕ್ಯೂರಿಯಾಸಿಟಿ ಸಹ ಮಂಗಳ ಗ್ರಹದ ಚಿತ್ರಗಳನ್ನು ತೆಗೆಯುತ್ತಿದೆ. ರಷ್ಯಾದ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಮಂಗನನ್ನು ಕಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

English summary
The air on Mars - what there is of it - is leaking away, about half a pound a second sputtering into space, scientists announced. The planet's early atmosphere is thought to have been as thick as or thicker than Earth's today, and even over the 4.5-billion-year history of the solar system, that slow leak would not explain how it atrophied to its current wisps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X