ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.28ರ ಕೆಂಪುಚಂದ್ರನ ಕುರಿತು ನಾಸಾ ಹೇಳುವುದೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 23: ಸೆಪ್ಟೆಂಬರ್ 28 ರಂದು ಆಕಾಶದಲ್ಲಿ ಕೆಂಪು ಚಂದ್ರ ಕಾಣಿಸಿಕೊಳ್ಳಲಿದ್ದಾನೆ. ಭೂಮಿ ಅಂದೇ ಅಂತ್ಯವಾಗಲಿದ್ದು ಜಗತ್ ಪ್ರಳಯ ಸಂಭವಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಆದರೆ ನಾಸಾ(ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಆರ್ಗನೈಜೇಶನ್) ಚಂದ್ರಗ್ರಹಣವನ್ನು ಅದರ ವಿಧಾನವನ್ನು ವಿವರಿಸಿದೆ. ಕೆಂಪು ಚಂದ್ರ ಕಾಣಿಸಿಕೊಳ್ಳುವುದು ಸತ್ಯ. ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಂಪು ಚಂದ್ರನನ್ನು ವೀಕ್ಷಣೆ ಮಾಡುವ ಅವಕಾಶ ನಮಗೆ ಸಿಗಲಿದೆ ಎಂದು ತಿಳಿಸಿದೆ. ಇದನ್ನು ನಾಸಾ ಸೂಪರ್ ಮೂನ್ ಎಂದು ಕರೆದಿದೆ.[ಸೆಪ್ಟೆಂಬರ್ 28 ಭೂಮಿ ಮೇಲೆ ನಮ್ಮೆಲ್ಲರದ್ದು ಕೊನೆ ದಿನ!]

NASA Scientist Sheds Light on Rare Supermoon Eclipse

ಹಾಗಾದರೆ ಈ ಕೆಂಪು ಚಂದ್ರನ ಬಗ್ಗೆ ನಾಸಾ ಹೇಳುವುದೇನು? ಈ ಸ್ವಾಭಾವಿಕ ಪ್ರಕ್ರಿಯೆ ಹಿಂದಿರುವ ಸತ್ಯ ಏನು? ಎಂಬುದನ್ನು ನಾಸಾದ ವರದಿ ಆಧಾರದಲ್ಲಿಯೇ ನೋಡಿಕೊಂಡು ಬರೋಣ.

ಅಂದು ಅತಿ ದೊಡ್ಡ ಗಾತ್ರದಲ್ಲಿ ಚಂದ್ರ ಗೋಚರವಾಗಲಿದ್ದಾನೆ. ಇದೊಂದು ಸ್ವಾಭಾವಿಕ ಗ್ರಹಣವಾಗಿದ್ದರೂ ಕೆಲ ವಿಶೇಷತೆಗಳನ್ನು ಹೊಂದಿದೆ. 1982ರಲ್ಲಿ ಇಂಥ ಚಂದ್ರನನ್ನು ನೋಡಲಾಗಿತ್ತು, ಮುಂದೆ 2033 ರಲ್ಲಿ ಈ ಬಗೆಯ ಚಂದ್ರ ಕಾಣಸಿಗಲಿದ್ದಾನೆ ಎಂದು ನಾಸಾದ ವಿಜ್ಞಾನಿ ಪೆಟ್ರೋ ತಿಳಿಸಿದ್ದಾರೆ.[ಅರೆರೆ ಇದೇನು... ಚಂದಮಾಮ ಕಪ್ಪು ಬಣ್ಣಕ್ಕೆ ತಿರುಗಿದನೇ?]

ಭೂಮಿಗೆ ಯಾವುದೇ ಅಪಾಯವಿಲ್ಲ
ಪ್ರಳಯದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಮುಂದಿನ ನೂರು ವರ್ಷಗಳವರೆಗೆ ಭೂಮಿಗೆ ಆತಂಕ ಎದುರಾಗಲ್ಲ. ಚಂದ್ರ ಗ್ರಹಣದ ವೈಜ್ಞಾನಿಕ ಪ್ರಕಕ್ರಿಯೆಯನ್ನು ಎಲ್ಲರೂ ವೀಕ್ಷಣೆ ಮಾಡಬಹುದು. ವಿಜ್ಞಾನಿಗಳಿಗೆ ಇದು ಹೊಸ ಸಂಶೋಧನೆ ನಡೆಸಲು ನೆರವಾಗುತ್ತದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 28ರ ಕೆಂಪು ಚಂದ್ರನ ಹೈಲೈಟ್ಸ್
* ಚಂದ್ರ ದೊಡ್ಡ ಗಾತ್ರದಲ್ಲಿ ಗೋಚರವಾಗಲಿದ್ದಾನೆ.
* ಚಂದ್ರ ಅಂದು ಭೂಮಿಗೆ ಅತಿ ಹತ್ತಿರಕ್ಕೆ ಬರಲಿದ್ದಾನೆ.[ಚಂದ್ರ ಗ್ರಹಣದ ಫೋಸ್ಟ್ ಮಾರ್ಟಮ್ ವರದಿ]
* ಹುಣ್ಣಿಮೆಯಂದು ಚಂದ್ರ ಭೂಮಿಗೆ 31,000 ಮೈಲಿ ದೂರದಲ್ಲಿ ಕಾಣಲಿದ್ದಾನೆ.
* ಪರಿಣಾಮ ಚಂದ್ರ ಶೇ. 14ರಷ್ಟು ದೊಡ್ಡದಾಗಿ, ಶೇ. 30ರಷ್ಟು ಪ್ರಖರವಾಗಿ ಕಾಣಲಿದ್ದಾನೆ.
* ಚಂದ್ರನಲ್ಲಿ ಭೌತಿಕವಾಗಿ ಯಾವ ಬದಲಾವಣೆಯೂ ಆಗುತ್ತಿಲ್ಲ.
* ಭೂಮಿಗೆ ಹತ್ತಿರ ಬರುವುದರಿಂದ ನಮ್ಮ ಕಣ್ಣಿಗೆ ಮಾತ್ರ ಕೆಂಪದಾಗಿ, ದೊಡ್ಡದಾಗಿ ಚಂದ್ರ ಕಾಣುತ್ತಾನೆ
* ಸುಮಾರು ಒಂದು ಗಂಟೆಗೂ ಅಧಿಕ ಕಾಲ ಗ್ರಹಣ ಸಂಭವಿಸಲಿದೆ.

English summary
First time in more than 30 years: you’ll be able to witness a supermoon in combination with a lunar eclipse. A total lunar eclipse will mask the moon’s larger-than-life face for more than an hour. But what is this behemoth of the night sky? Not a bird, not a plane, it’s a supermoon! Although this incarnation of the moon comes around only once every year, it’s not as mysterious as you might think. But before you head to the closest cave, it's helpful to know that NASA, the group that tracks such objects, is shooting down the rumor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X