ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಅಂತರಿಕ್ಷ ಯಾನದ 19000 ಗಂಟೆಗಳ ಸಂಭಾಷಣೆಯ ಆಡಿಯೋ ಬಿಡುಗಡೆ

|
Google Oneindia Kannada News

ವಾಷಿಂಗ್ಟನ್, ಜುಲೈ 31: ಚಂದ್ರನ ಮೇಲೆ ಮೊದಲ ಹೆಜ್ಜೆಯನ್ನಿಟ್ಟ ಮೊದಲ ವ್ಯಕ್ತಿಯ ಹೆಸರು ಬಹುತೇಕರಿಗೆ ಚಿರಪರಿಚಿತ. ಆದರೆ ಆ ಐತಿಹಾಸಿಕ ಕ್ಷಣ ಕೈಗೂಡುವ ಹಿಂದಿದ್ದ ಕೈಗಳು ಸಾವಿರಾರು.

ಸಾವಿರಾರು ಎಂಜಿನಿಯರ್‌ಗಳು, ವಿಜ್ಞಾನಿಗಳು ಇನ್ನೂ ಹಲವರ ಹಲವು ವರ್ಷದ ಪರಿಶ್ರಮದಿಂದ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ. ನಾಸಾದ ಈ ಐತಿಹಾಸಿಕ ಮಿಷನ್‌ನ ಕುರಿತಾದ ಆಡಿಯೋ ಕ್ಲಿಪ್‌ ಅನ್ನು ಮೊದಲ ಬಾರಿಗೆ ನಾಸಾ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ.

NASA released audio clip of its first mission

ನಾಸಾದ ಈ ಕಾರ್ಯಾಚರಣೆ ಬಗ್ಗೆ ವಿಜ್ಞಾನಿಗಳು ಮಾತನಾಡಿಕೊಂಡ ಸಂಭಾಷಣೆಯ ಆಡಿಯೋ ಕ್ಲಿಪ್‌ ಅನ್ನು ನಾಸಾ ಬಿಡುಗಡೆ ಮಾಡಿದೆ. ಈ ಸಂಭಾಷಣೆ ಕ್ಲಿಪ್‌ ಬರೋಬ್ಬರಿ 19000 ಗಂಟೆಗಳಷ್ಟು ಉದ್ದವಿದೆ.

ಸತತವಾಗಿ ಈ ಸಂಭಾಷಣೆಗಳನ್ನು ಕೇಳಿದರೂ ಪೂರ್ತಿ ಸಂಭಾಷಣೆ ಕೇಳಲು ಎರಡೂ ವರೆ ವರ್ಷಗಳ ಬೇಕಿದೆ. ಸಂಭಾಷಣೆ ಕೇಳಲೇ ನಮಗೆ ಎರಡೂವರೆ ವರ್ಷ ಬೇಕಾಗುತ್ತದೆಯಂರೆ ಆಗ ವಿಜ್ಞಾನಿಗಳು ಪಟ್ಟ ಶ್ರಮವನ್ನು ಸುಲಭವಾಗಿ ಅಂದಾಜು ಮಾಡಬಹುದು.

1969 ರಲ್ಲಿ ನಡೆದ ಈ ಮಿಷನ್‌ನಲ್ಲಿ ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆ ಇಡುತ್ತಾ ಹೇಳಿದ್ದ ಖ್ಯಾತ ಹೇಳಿಕೆ, 'ಇದು ಮಾನವನಿಗೆ ಸಣ್ಣ ಹೆಜ್ಜೆ, ಮನುಕುಲಕ್ಕೆ ದೊಡ್ಡ ಹೆಜ್ಜೆ' ಸಂಭಾಷಣೆಯ ತುಣುಕು ಸಹ ಅಡಕವಾಗಿದೆ.

ಆಸಕ್ತರು ನಾಸಾದ 'ಎಕ್ಸ್‌ಪ್ಲೋರ್ ಅಪೋಲೊ' ವೆಬ್‌ಸೈಟ್‌ನಲ್ಲಿ ಸಂಭಾಷಣೆಗಳನ್ನು ಕೇಳಬಹುದಾಗಿದೆ.

English summary
NASA released audio clip of its first space mission in which it sends Neil Armstrong and two others to moon. This audio clip is 19000 hours long.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X