ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನಲ್ಲಿ ಪತ್ತೆಯಾದ ಹಿಮಚ್ಛಾದಿತ ಪ್ರದೇಶ!

ಮಂಗಳನಲ್ಲಿ ಹಿಮದಂಥಹ ಪ್ರದೇಶ ಕಂಡು ಹಿಡಿದ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ). ಆದರೆ, ಈ ಹಿಮಚ್ಛಾದಿತ ಪ್ರದೇಶ ನೀರಿನಿಂದ ಆವೃತವಾಗಿದ್ದಲ್ಲ, ಬದಲಿಗೆ ಕಾರ್ಬನ್ ಡೈ ಆಕ್ಸೈಡ್ ನಿಂದ ಆವೃತವಾಗಿದ್ದೆಂದ ನಾಸಾ.

|
Google Oneindia Kannada News

ನವದೆಹಲಿ, ಆಗಸ್ಟ್ 26: ಮಂಗಳ ಗ್ರಹದ ಅಧ್ಯಯನಕ್ಕೆ ತೊಡಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು (ನಾಸಾ) ಅಲ್ಲಿ ಮಂಜಿನಂತಹ ವಸ್ತುವಿನಿಂದ ಆವರಿಸಲ್ಪಟ್ಟಿರುವ ಅಲ್ಲಿನ ನೆಲದ ಮೇಲ್ಮೈ ಒಂದನ್ನು ಪತ್ತೆ ಹಚ್ಚಿದೆ.

ಈ ಚಿತ್ರವನ್ನು ನಾಸಾವು ಮಂಗಳ ಗ್ರಹದ ಅಧ್ಯಯನಕ್ಕಾಗಿ ಹಾರಿಬಿಟ್ಟಿರುವ ರೆಕಾನ್ನಾಸ್ಸನ್ಸ್ ಆರ್ಬಿಟರ್ ಎಂಬ ನೌಕೆಯು ತನ್ನಲ್ಲಿನ ಅತ್ಯಾಧುನಿಕ ಕ್ಯಾಮೆರಾದಿಂದ ಮಂಗಳನ ಉತ್ತರ ಧ್ರುವದ ಭಾಗದಿಂದ ಇದನ್ನು ಸೆರೆ ಹಿಡಿದಿದೆ.

NASA image captures the 'beautiful patterns' on Mars created by dry ice

ಈ ಚಿತ್ರಗಳು ಲಭ್ಯವಾಗುತ್ತಲೇ ವಿಜ್ಞಾನಿಗಳು ಪುಳಕಗೊಂಡಿದ್ದರೂ, ಇದು ಆನಂತರ ನೀರಿನಿಂದ ಕೂಡಿದ ಹಿಮ ಅಲ್ಲ ಎಂದು ಸ್ಪಷ್ಟಪಡಿಸಲಾಯಿತು. ಏಕೆಂದರೆ, ಇವು ಇಂಗಾಲದ ಡೈ ಆಕ್ಸೈಡ್ ನಿಂದ ಉತ್ಪತ್ತಿಯಾಗಿರುವ ಹಿಮ ರೂಪದ ಪದಾರ್ಥ ಎಂದು ಪತ್ತೆ ಹಚ್ಚಲಾಯಿತು. ಅಂದಹಾಗೆ, ಇದನ್ನು ಡ್ರೈ ಐಸ್ ಎಂದು ಕರೆಯಲಾಗುತ್ತದೆ.

ಇದರಿಂದಾಗಿ, ಮಂಗಳ ಗ್ರಹದ ಮೇಲೆ ನೀರಿನ ಅಂಶವಿದೆಯೇ ಎಂಬುದನ್ನು ಪತ್ತೆ ಹಚ್ಚಲು ಹಂಬಲಿಸುತ್ತಿರುವ ನಾಸಾ, ಇನ್ನೂ ಮತ್ತಷ್ಟು ದಿನ ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕಾಗಿರುವುದಂತೂ ಸ್ಪಷ್ಟ.

ಅಂದಹಾಗೆ, ಈ ಚಿತ್ರವು ಕ್ಲಿಕ್ ಆಗಿರುವುದು ಈಗಲ್ಲ.ಇದೇ ವರ್ಷ ಮೇ 21ರಂದು. ಅಂದು ಮಂಗಳ ಗ್ರಹದ ಕಾಲಮಾನದ ಪ್ರಕಾರ, ಮಧ್ಯಾಹ್ನ 1:21ಕ್ಕೆ. ಆಗ, ಕ್ಲಿಕ್ ಮಾಡಿ ರವಾನೆ ಮಾಡಿರುವ ಈ ಚಿತ್ರ ಲಕ್ಷಾಂತರ ಮೈಲುಗಳ ದೂರವನ್ನು ಕ್ರಮಿಸಿ ಹಲವಾರು ದಿನಗಳ ನಂತರ ಭೂಮಿಗೆ ಬಂದಿದೆ.

English summary
As Martian winter gives way to spring, the snow-covered features on the red planet begin to change form, driven by an influx of sunlight. It might sound familiar to the seasonal changes that take place here on Earth – but, in Mars’ northern hemisphere, the snow and ice speckling the landscape is made not of water, but carbon dioxide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X