• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

8 ಗ್ರಹಗಳಿರುವ ಮತ್ತೊಂದು ಸೌರ ವ್ಯೂಹ ಪತ್ತೆ ಹಚ್ಚಿದ ನಾಸಾ

By Sachhidananda Acharya
|

ಲಂಡನ್, ಡಿಸೆಂಬರ್ 15: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ರೋಚಕ ಸುದ್ದಿಯೊಂದನ್ನು ಹೊರ ಹಾಕಿದೆ. ಸತತ ಸಂಶೋಧನೆಗಳ ನಂತರ ಇದೇ ಮೊದಲ ಬಾರಿಗೆ 8 ಗ್ರಹಗಳಿರುವ ನಮ್ಮದೇ ಸೌರ ವ್ಯೂಹದ ಮಾದರಿಯ ಹೊಸ ಸೌರ ಮಂಡಲವನ್ನು ಪತ್ತೆ ಹಚ್ಚಿದೆ.

ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ

ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಸಹಾಯದಿಂದ ಈ ಮಹತ್ವದ ಅನ್ವೇಷಣೆ ನಡೆಸಲಾಗಿದೆ. ಈ ಸೌರ ಮಂಡಲದಲ್ಲಿ ನಮ್ಮ ಸೌರ ವ್ಯೂಹದಂತೆಯೇ ಒಂದು ಸೂರ್ಯ ಮತ್ತು ಅದರ ಸುತ್ತ ಸುತ್ತುವ 8 ಗ್ರಹಗಳಿವೆ. ಜತೆಗೆ ಗ್ರಹಗಳ ಸುತ್ತ ಸುತ್ತುತ್ತಿರುವ ಹಲವು ಉಪಗ್ರಹಗಳಿವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಈ ಸಂಶೋಧನೆಗೆ ಗೂಗಲ್ ನ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿಯ ಸಹಾಯವನ್ನು ಪಡೆಯಲಾಗಿದೆ. ಇದೀಗ ಕೆಪ್ಲರ್ ಟೆಲಿಸ್ಕೋಪ್ ನೀಡಿದ ಮಾಹಿತಿಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.

ಕೆಪ್ಲರ್ 90i ಈ ಸೌರ ವ್ಯೂಹದಲ್ಲಿರುವ ಅತೀ ಸಣ್ಣ ಗ್ರಹವಾಗಿದ್ದು ಭೂಮಿಗಿಂತ ಶೇ. 30 ರಷ್ಟು ಹೆಚ್ಚಿನ ಗಾತ್ರವನ್ನು ಹೊಂದಿದೆ. ಆದರೆ ಈ ಗ್ರಹಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪನ್ನು 2009ರಲ್ಲಿ ಸ್ಥಾಪಿಸಲಾಗಿದ್ದು ನಮ್ಮ ಸೌರ ವ್ಯೂಹದ ಹೊರಗಿನ ಗ್ರಹಗಳ ಬಗ್ಗೆ ನಿರಂತರ ಮಾಹಿತಿಗಳನ್ನು ರವಾನಿಸುತ್ತಿದೆ. ಇಲ್ಲಿಯವರೆಗೆ ಇದು 4,034 ಗ್ರಹಗಳನ್ನು ಪತ್ತೆ ಹಚ್ಚಿದೆ. ಇವುಗಳಲ್ಲಿ 30 ಗ್ರಹಗಳು ಭೂಮಿಯ ಗಾತ್ರದವೇ ಆಗಿದ್ದು ಇವುಗಳು ಸೂರ್ಯನಿಂದ ಹ್ಯಾಬಿಟೇಬಲ್ ಝೋನ್ ಅಂತರದಲ್ಲಿವೆ. ಹ್ಯಾಬಿಟೇಬಲ್ ಝೋನ್ ನಲ್ಲಿ ಗ್ರಹಗಳಲ್ಲಿನ ವಾತಾವರಣವು ಸಾಮಾನ್ಯವಾಗಿ ನೀರಿನಂಥ ದ್ರವ ಪದಾರ್ಥಗಳು ಸೃಷ್ಟಿಗೆ ಪೂರಕವಾಗಿರುತ್ತದೆ.

English summary
The NASA space organisation announced on Thursday that the space agency's Kepler Space Telescope, for the first time, has discovered an eighth planet in an alien solar system, meaning it has at least as many worlds as our own solar system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more