ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾ ಪ್ರಕಟಿಸಲಿರುವ ಹೊಸ ಆವಿಷ್ಕಾರಕ್ಕೆ ಕಾದು ಕುಳಿತಿದೆ ಜಗತ್ತು

ಬುಧವಾರ ನಮ್ಮ ಸೌರಮಂಡಲದ ಹೊರತಾಗಿ ಇರುವ ಸೂರ್ಯನ ಸುತ್ತ ಇತರೆ ಗ್ರಹಗಳು ಸುತ್ತುತ್ತಿರುವ ವಿಷಯವನ್ನು ನಾಸಾ ಬಹಿರಂಗಪಡಿಸಲಿದೆ. ಇದು ನಾಸಾ ವೆಬ್ ಸೈಟ್ ಮತ್ತು ಏಜೆನ್ಸಿಯ ವೆಬ್ ಸೈಟಿನಲ್ಲಿ ನೇರವಾಗಿ ಪ್ರಸಾರವಾಗಲಿದೆ.

By Prasad
|
Google Oneindia Kannada News

ವಾಷಿಂಗ್ಟನ್ ಡಿಸಿ, ಫೆಬ್ರವರಿ 22 : ಇಡೀ ವಿಶ್ವವೇ ಒಂದು ವಿಸ್ಮಯ. ಅದರಲ್ಲೂ ನಭೋಮಂಡಲ ಎಷ್ಟೋ ವಿಸ್ಮಯ, ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅವನ್ನು ಆವಿಷ್ಕರಿಸುವ ವಿಜ್ಞಾನಿಗಳದ್ದು. ಇಂಥದೇ ಒಂದು ವಿಸ್ಮಯ ಇಂದು ಪ್ರಕಟವಾಗಲಿದೆ.

ನಕ್ಷತ್ರಗಳೆಂದರೆ ಸೂರ್ಯ. ಇದೇ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿರುತ್ತವೆ. ಭೂಮಿಯೆಂಬ ಗ್ರಹವೊಂದರಲ್ಲಿ ನಾವೆಲ್ಲ ಇದ್ದೇವೆ ಎಂಬ ಸಂಗತಿ ಚಿಕ್ಕಮಕ್ಕಳಿಗೂ ಗೊತ್ತಿರುವಂಥ ಸಂಗತಿ. ನಮ್ಮ ಸೌರಮಂಡಲದಾಚೆಯೂ ಇಂಥದೊಂದು ಗ್ರಹಮಂಡಲವಿದೆಯಾ ಎಂಬ ರಹಸ್ಯವನ್ನು ವಿಜ್ಞಾನಿಗಳಿಗೆ ಇಂದಿಗೂ ನಿಖರವಾಗಿ ಭೇದಿಸಲಾಗಿಲ್ಲ. [ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!]

NASA : Discovery beyond our Solar System

ಆದರೆ, ಬುಧವಾರ ನಮ್ಮ ಸೌರಮಂಡಲದ ಹೊರತಾಗಿ ಇರುವ ಸೂರ್ಯನ ಸುತ್ತ ಇತರೆ ಗ್ರಹಗಳು ಸುತ್ತುತ್ತಿರುವ ವಿಷಯವನ್ನು ನಾಸಾ ಬಹಿರಂಗಪಡಿಸಲಿದೆ. ಇದು ನಾಸಾ ವೆಬ್ ಸೈಟ್ ಮತ್ತು ಏಜೆನ್ಸಿಯ ವೆಬ್ ಸೈಟಿನಲ್ಲಿ ನೇರವಾಗಿ ಪ್ರಸಾರವಾಗಲಿದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಮಾಧ್ಯಮದವರು ಮತ್ತು ಸಾರ್ವಜನಿಕರು ಈ ವಿದ್ಯಮಾನ ಕುರಿತಂತೆ #askNASA ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಗುರುವಾರ ಮೂಡಣದಲ್ಲಿ ಸೂರ್ಯ ಮೂಡುವ ಹೊತ್ತಿಗೆ ಮತ್ತೊಂದು ಸೂರ್ಯನ ಸುತ್ತಲಿರುವ ರಹಸ್ಯ ಬಯಲಾಗಲಿದೆ. [13 Pics: ವರ್ಷದ ನಂತರ ಭೂಮಿಗೆ ಬಂದ ಗಗನಯಾತ್ರಿ]

NASA : Discovery beyond our Solar System

ಇದನ್ನು ನಾಸಾ ಲೈವ್ ವಿಡಿಯೋ ಸ್ಟ್ರೀಮಿಂಗ್ ಮಾಡುತ್ತಿದ್ದು, ಇದನ್ನು ವೀಕ್ಷಿಸಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು. ಆ ಸೌರಮಂಡಲದಲ್ಲಿ ಮತ್ತೊಂದು ಭೂಮಿ ಇರಬಹುದಾ? ಅಲ್ಲಿ ಜೀವ ಮೊಳಕೆ ಒಡೆದಿರಬಹುದಾ? ಇದ್ದರೂ ಮನುಷ್ಯರನ್ನು ಮೀರಿಸುವ ಜೀವಿಗಳಿರಬಹುದಾ?

English summary
NASA to present new findings on planets that orbit stars other than our sun, known as exoplanets. The event will air live on NASA Television and the agency's website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X