ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಅಂಗಳದಲ್ಲಿ ಉಪ್ಪು ನೀರಿದೆ : ನಾಸಾ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29 : ಮಂಗಳ ಗ್ರಹದ ಅಂಗಳದಲ್ಲಿ ನೀರಿನ ಅಂಶವಿರುವುದಕ್ಕೆ ಖಚಿತವಾದ ದಾಖಲೆಗಳು ಲಭ್ಯವಾಗಿವೆ ಎಂದು ನಾಸಾ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಮಾರ್ಸ್ ರಿಕಾನಿಸನ್ಸ್ ಆರ್ಬಿಟ್ ನೌಕೆ ಈ ಕುರಿತು ಮಾಹಿತಿಗಳನ್ನು ಸಂಗ್ರಹಣೆ ಮಾಡಿದೆ.

ಮಂಗಳನ ಅಧ್ಯಯನಕ್ಕೆ ಕಳಿಸಲಾದ ಮಾರ್ಸ್ ರಿಕಾನಿಸನ್ಸ್ ಆರ್ಬಿಟ್ ನೌಕೆಯು ಪರ್‌ಕ್ಲೋರೇಟ್ಸ್ ಎಂದು ಕರೆಯಲಾಗುವ ಹೈಡ್ರೇಟ್‌ ಸಾಲ್ಟ್‌ಗಳನ್ನು ಗುರುತಿಸಿದೆ. ಈ ಹೈಡ್ರೇಟ್‌ ಸಾಲ್ಟ್‌ಗಳು ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿಯೂ ನೀರು ಘನೀಕರಣಗೊಳ್ಳದಂತೆ ತಡೆಯ ಬಲ್ಲವು ಎಂಬುದು ವಿಜ್ಞಾನಿಗಳ ವಾದ. [ಮಂಗಳನ ಅಂಗಳದಲ್ಲಿ ನೀರಿದೆ]

nasa

'ಮಂಗಳನ ಅಧ್ಯಯನದಲ್ಲಿ ಇಂದೊಂದು ಮಹತ್ವದ ಬೆಳವಣಿಗೆಯಾಗಿದೆ. ಸಂಶೋಧನೆ ಪ್ರಕಾರ ಮಂಗಳನ ಅಂಗಳದಲ್ಲಿ ನೀರಿದೆ ಎಂಬ ಅಂಶ ಪತ್ತೆಯಾಗಿದೆ' ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. [ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

2011ರಲ್ಲಿ ಲುಜೇಂದ್ರ ಓಝಾ ಎಂಬ ಪಿಎಚ್‌ಡಿ ವಿದ್ಯಾರ್ಥಿ ಚಿತ್ರಗಳ ಸಹಾಯದಿಂದ ಮಂಗಳನ ಅಂಗಳದಲ್ಲಿ ಉಪ್ಪುನೀರಿನ ಅಂಶವಿರುವ ಬಗ್ಗೆ ಮೊದಲು ಹೇಳಿದ್ದರು. ಈಗ ಈ ಕುರಿತು ಖಚಿತವಾದ ದಾಖಲೆ ಲಭ್ಯವಾಗಿದೆ.

2015ರ ಏಪ್ರಿಲ್‌ನಲ್ಲಿ ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ನಾಸಾ ಹೇಳಿತ್ತು. ಮೊದಲು ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ, ನಂತರ ದ್ರವ ರೂಪದಲ್ಲಿಯೇ ನೀರು ಪತ್ತೆಯಾಗಿದೆ. ಮಣ್ಣಿನಲ್ಲಿ ನೀರಿನ ಅಂಶ ಪತ್ತೆಯಾಗಿದ್ದು ಇದು ಅಪಾರ ಪ್ರಮಾಣದ ಲವಣಾಂಶದಿಂದ ಕೂಡಿದೆ ಎಂದು ವಿಜ್ಞಾನಿಗಳು ಹೇಳಿದ್ದರು.

English summary
New findings from NASA's Mars Reconnaissance Orbiter (MRO) provide the strongest evidence yet that liquid water flows intermittently on present day Mars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X