ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾ ಕಣ್ಣಲ್ಲಿ ಕ್ಯಾಲಿಫೋರ್ನಿಯಾದ ಭಯಂಕರ ಕಾಡ್ಗಿಚ್ಚಿನ ಚಿತ್ರ!

|
Google Oneindia Kannada News

ಕ್ಯಾಲಿಫೋರ್ನಿಯಾ, ಡಿಸೆಂಬರ್ 12: ಭೂಮಿಯಿಂದ ಸಾವಿರಾರು ಮೈಲಿ ದೂರದಲ್ಲಿರುವ ನಾಸಾದ ಉಪಗ್ರಹವೊಂದಕ್ಕೆ ಇದ್ದಕ್ಕಿದ್ದಂತೆ ವಿಲಕ್ಷಣ ವಸ್ತುವೊಂದು ಕಂಡಿತ್ತು. ಏನದು ಎಂದು ಸರಿಯಾಗಿ ಗಮನಿಸಿದಾಗ ಅದು ವಿಲಕ್ಷಣ ವಸ್ತುವೇನಲ್ಲ, ದಟ್ಟ ಹೊಗೆ ಎಂಬುದು ತಿಳಿದುಬಂದು. ಈ ಹೊಗೆ ಎಲ್ಲಿಂದ ಬಂತು ಎಂಬ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದ ಭಯಂಕರ ಕಾಳ್ಗಿಚ್ಚಿನ ಕತೆ!

ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!ಡಿ.31 ರೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!

ಹೌದು, ಕ್ಯಾಲಿಫೋರ್ನಿಯಾ ಜನರ ನಿದ್ದೆ ಕೆಡಿಸಿರುವ ಭೀಕರ ಕಾಳ್ಗಿಚ್ಚು ಇನ್ನೂ ಆರಿಲ್ಲ. ಬೆಂಕಿ ಆರಿಸುವುದಕ್ಕೆ ನಡೆದ ನೂರಾರು ಪ್ರಯತ್ನಗಳೂ ವಿಫಲವಾಗಿವೆ. ಜಾಗತಿಕ ತಾಪಮಾನದ ಹೆಚ್ಚಳವೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಿರುವಾಗ ಈ ಭಯಾನಕ ಕಾಳ್ಗಿಚ್ಚಿನ ಚಿತ್ರಗಳು ನಾಸಾ ಕಣ್ಣಿಗೂ ಕಾಣಿಸಿವೆ. ದಟ್ಟ ಹೊಗೆ, ಬೆಂಕಿ ಉಪಗ್ರಹದಲ್ಲೂ ಕಾಣಿಸುತ್ತಿದೆ ಎಂದರೆ ಇದರ ತೀವ್ರತೆಯನ್ನು ಬಿಡಿಸಿಹೇಳಬೇಕಿಲ್ಲ.

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಎದೆನಡುಗಿಸುವ ವಿಡಿಯೋ, ಚಿತ್ರ

ನಾಸಾ(National Aeronautics and Space Administration) ಕ್ಲಿಕ್ಕಿಸಿದ ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ. ಈ ಎಲ್ಲಾ ಚಿತ್ರಗಳನ್ನು ನಾಸಾದ ಅಧಿಕೃತ ವೆಬ್ ಸೈಟ್ ನಿಂದ ತೆಗೆದುಕೊಳ್ಳಲಾಗಿದೆ. (ಚಿತ್ರಕೃಪೆ: ನಾಸಾ)

ಉಪಗ್ರಹಕ್ಕೂ ಕಂಡ ಕಾಳ್ಗಿಚ್ಚು!

ಉಪಗ್ರಹಕ್ಕೂ ಕಂಡ ಕಾಳ್ಗಿಚ್ಚು!

ಕ್ಯಾಲಿಫೋರ್ನಿಯಾವನ್ನು ಸುತ್ತವರಿದ ಈ ದೈತ್ಯ ಕಾಳ್ಗಿಚ್ಚು ಎಷ್ಟು ಭಯಾವನಕವಾಗಿದೆ ಎಂದರೆ ಉಪಗ್ರಹಕ್ಕೂ ಇದು ಕಾಣುತ್ತಿದೆ. ಈ ಕಾಳ್ಗಿಚ್ಚಿಗೆ ಇಬ್ಬರು ಬಲಿಯಾಗಿದ್ದು ಒಟ್ಟು 1.40 ಲಕ್ಷ ಎಕರೆಗೂ ಹೆಚ್ಚು ಜಾಗಕ್ಕೆ ಇದು ಆವರಿಸಿ ಅಲ್ಲಿದ್ದ ಮನೆ, ಕಾಡುಗಳನ್ನು ಭಸ್ಮ ಮಾಡಿದೆ.

ಮೋಡವಲ್ಲ ಇದು ಗಾಢ ಹೊಗೆ

ಮೋಡವಲ್ಲ ಇದು ಗಾಢ ಹೊಗೆ

ಉಪಗ್ರಹದಿಂದ ಮೊದಲು ಮೋಡದಂತೇ ಕಂಡ ಗಾಢ ಹೊಗೆಯನ್ನು ಸರಿಯಾಗಿ ಗಮನಿಸಿದಾಗಲೇ ಗೊತ್ತಾಗಿದ್ದು, ಇದು ಮೋಡವಲ್ಲಯಲ್ಲ ಹೊಗೆ ಅಂತ. ಈ ದೈತ್ಯ ಕಾಳ್ಗಿಚ್ಚಿನ ಭಯಕ್ಕೆ, ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಸ್ಪಷ್ಟವಾಗಿ ಕಾಣುವ ಬೆಂಕಿ

ಸ್ಪಷ್ಟವಾಗಿ ಕಾಣುವ ಬೆಂಕಿ

ಕಾಳ್ಗಿಚ್ಚು ಉಪಗ್ರಹದಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಇದು ಆರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಗ್ನಿ ಶಾಮಕ ದಳದ ಬಹುಪಾಲು ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕವೂ ನೀರು ಹಾಕಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರಾದರೂ ಬೆಂಕಿ ಮಾತ್ರ ಆರುತ್ತಿಲ್ಲ.

ಜಾಗತಿಕ ತಾಪಮಾನದಲ್ಲಿ ಹೆಚ್ಚಳ

ಜಾಗತಿಕ ತಾಪಮಾನದಲ್ಲಿ ಹೆಚ್ಚಳ

ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿರುವುದೇ ಈ ಕಾಳ್ಗಿಚ್ಚಿಗೆ ಕಾರಣ ಎಂಬುದು ತಜ್ಞರ ಮಾತು. ಕ್ಯಾಲಿಫೋರ್ನಿಯಾದಲ್ಲಿ ಪದೇ ಪದೇ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿರುವುದಕ್ಕೆ ಅದೇ ಕಾರಣವಂತೆ. ಒಣ ಹವೆ ಮತ್ತು ಬಿಸಿ ಗಾಳಿಯಿಂದಾಗಿ ಕಾಳ್ಗಿಚ್ಚು ಸಂಭವಿಸಿದೆ.

English summary
NASA clicks photos of California fire. 2 dead and thousands evacuated, 1,41,000 acres burnt in wind fueled flames. The devastating fire is out of control says media reports from Southern California, US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X