• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕು

By Mahesh
|

ವಾಷಿಂಗ್ಟನ್, ಫೆಬ್ರವರಿ 23: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ತೆ ನಾಸಾ ಮಹತ್ತರವಾದ ಆವಿಷ್ಕಾರವೊಂದನ್ನು ಸಾಧಿಸಿರುವುದಾಗಿ ಘೋಷಿಸಿದೆ. ನಮ್ಮ ಸೌರಮಂಡಲದ ಆಚೆಗೆ ಮತ್ತೊಂದು ಸೌರಮಂಡಲವನ್ನು ಗುರುತಿಸಲಾಗಿದೆ.

ಭೂಮಿಯಷ್ಟೇ ಗಾತ್ರವುಳ್ಳ ಏಳು ಹೊಸ ಗ್ರಹಗಳನ್ನು ಪತ್ತೆ ಹಚ್ಚಲಾಗಿದ್ದು, ಕುಬ್ಜ ನಕ್ಷತ್ರ(ನಮ್ಮ ಸೂರ್ಯನಂತೆ ಇರುವ)ವನ್ನು ಈ ಎಲ್ಲಾ ಗ್ರಹಗಳು ಸುತ್ತುತ್ತಲಿವೆ ಎಂದು ನಾಸಾ ಹೇಳಿದೆ. ಈ ಹೊಸ ಸೌರವ್ಯೂಹ ಸರಿ ಸುಮಾರು 39 ಜ್ಯೋತಿರ್ ವರ್ಷ ದೂರದಲ್ಲಿದೆ.[ಅಂತರಿಕ್ಷದಲ್ಲಿವೆ ಒಟ್ಟು 8 ವಾಸಯೋಗ್ಯ ಭೂಮಿಗಳು!]

ಈ ಹೊಸ ಸೌರವ್ಯೂಹದಲ್ಲಿರುವ ಏಳು ಗ್ರಹಗಳ ಪೈಕಿ ಮೂರು ಗ್ರಹಗಳಲ್ಲಿ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆ. ನೀರಿನ ಸೆಲೆ ಪ್ರಮುಖವಾಗಿ ಕಂಡು ಬಂದಿದ್ದು, ಸಮುದ್ರಗಳಿರುವ ಸಾಧ್ಯತೆಯಿದೆ. ಹೀಗಾಗಿ ಅನ್ಯಗ್ರಹ ಜೀವಿಗಳ ಪತ್ತೆ ಹಚ್ಚಲು ಈ ಹೊಸ ಆವಿಷ್ಕಾರ ಮೊದಲ ಮೆಟ್ಟಿಲಾಗಲಿದೆ. [ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!]

1995ರಲ್ಲಿ ನಾಸಾದ ಕೆಪ್ಲರ್ ಟೆಲಿಸ್ಕೋಪ್ ಮೊಟ್ಟ ಮೊದಲ ಬಾರಿಗೆ ಮತ್ತೊಂದು ಸೌರ ಮಂಡಲ ಇರುವ ಬಗ್ಗೆ ಸುಳಿವು ನೀಡಿತ್ತು. ಕೆಪ್ಲರ್ 10 ಬಿ ಸಮಾರು 540 ಜ್ಯೋತಿರ್ ವರ್ಷಗಳ ದೂರದಲ್ಲಿದೆ ಎಂದು ಹೇಳಲಾಯಿತು. ಇದಾದ ಬಳಿಕ ಅನೇಕ ಸಂಶೋಧನೆಗಳು ನಡೆದರೂ ಈಗ ಮಹತ್ವದ ಫಲಿತಾಂಶ ಸಿಕ್ಕಿದೆ.

ನಮ್ಮ ಸೂರ್ಯನಿಗೂ ಈ ಹೊಸ ಸೌರ ಮಂಡಲದ ಸೂರ್ಯನಿಗೂ ಏನು ವ್ಯತ್ಯಾಸ?

ಈ ಹೊಸ ಸೌರ ಮಂಡಲದಲ್ಲಿರುವುದು ಕುಬ್ಜ ನಕ್ಷತ್ರ TRAPPIST-1 ಸದ್ಯಕ್ಕೆ ಹೆಸರಿಸಲಾಗಿದೆ. ನಮ್ಮ ಸೂರ್ಯನಿಗೆ ಹೋಲಿಸಿದರೆ ಈ ಕುಬ್ಜ ನಕ್ಷತ್ರದ ಶಕ್ತಿ ದುರ್ಬಲವಾಗಿದೆ, ಬೆಳಕು, ಶಕ್ತಿ ನಮ್ಮ ಸೂರ್ಯ ನಷ್ಟಿಲ್ಲ.

ಟೆಲಿಸ್ಕೋಪ್ ಗಳು: ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್, ಯುರೋಪಿಯನ ಇಎಸ್ ಒ ಟೆಲಿಸ್ಕೋಪ್, ಇಎಸ್ಎ/ ಸಿಎಸ್ ಎ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇನ್ಮುಂದೆ ಹೊಸ ಸೌರ ಮಂಡಲದಲ್ಲಿ ನೀರಿನ ಮೂಲ , ಪ್ರಮಾಣ, ಜೀವ ರಾಶಿ ನೆಲೆಸಲು ಸಾಧ್ಯವೇ? ಈಗಾಗಲೆ ಜೀವಿಗಳು ನೆಲೆಸಿದ್ದಾರೆಯೆ? ಎಂಬುದರ ಸಂಶೋಧನೆಯಲಿ ತೊಡಗಲಿವೆ. ಇದು ಅಂತ್ಯವಲ್ಲ ಆರಂಭ.[ಹೆಚ್ಚಿನ ವಿವರಗಳಿಗೆ ನಾಸಾ ತಾಣಕ್ಕೆ ಭೇಟಿ ಕೊಡಿ]

English summary
NASA today (Feb 22) announced a remarkable new discovery. An entire system of 7 Earth-sized planets found orbiting around a dwarf star. The new Solar system is just 39 light-years away
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more