• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್

|

ವಾಷಿಂಗ್ಟನ್, ಅಕ್ಟೋಬರ್ 20: ಅನೇಕ ಟೆಲಿಕಾಂ ಕಂಪೆನಿಗಳು ಹಳ್ಳಿ ಹಳ್ಳಿಯಲ್ಲಿಯೂ ಟವರ್ ಸ್ಥಾಪಿಸಿ ಮೊಬೈಲ್ ನೆಟ್ವರ್ಕ್ ಸೇವೆ ನೀಡುತ್ತಿವೆ. ಆದರೆ ಇಂದಿಗೂ ಅನೇಕ ಭಾಗಗಳಲ್ಲಿ ಸರಿಯಾಗಿ ನೆಟ್ವರ್ಕ್ ವ್ಯವಸ್ಥೆ ಇಲ್ಲ. ಪಕ್ಕದಲ್ಲಿಯೇ ಟವರ್ ಇದ್ದರೂ ನೆಟ್ವರ್ಕ್‌ಗಾಗಿ ಜನರು ಪರದಾಡುತ್ತಿದ್ದಾರೆ. ಹೀಗಿರುವಾಗ ಅತ್ತ ನಾಸಾ ಚಂದ್ರನ ಮೇಲೆ 4 ನೆಟ್ವರ್ಕ್ ಸ್ಥಾಪಿಸಲು ಹೊರಟಿದೆ.

ಬಾಹ್ಯಾಕಾಶದಲ್ಲಿ ಓಡಾಡುವ ಗಗನಯಾನಿ ಅಲ್ಲಿಂದಲೇ ತನ್ನ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದು. ಚಂದ್ರನ ಮೇಲಿನಿಂದಲೇ ಭೂಮಿಯಲ್ಲಿನ ಜನರಿಗೆ ಕರೆ ಮಾಡಿ ಮಾತನಾಡಬಹುದು. ಇಂತಹ ಬಯಕೆಗಳು ಇನ್ನು ಕಲ್ಪನೆಯಲ್ಲ, ವಾಸ್ತವವಾಗುವ ದಿನಗಳು ದೂರವಿಲ್ಲ.

ಅಂತರ್ಜಾಲ ಸಂಪರ್ಕ ಸಮಸ್ಯೆಗಳಿಗೆ ಅಪರೂಪದ ಪರಿಹಾರ ನೀಡಲು ರಾಷ್ಟ್ರೀಯ ಗಗನಯಾನ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಹಾಗೂ ನೋಕಿಯಾ ಸಂಸ್ಥೆಗಳು ಜತೆಗೂಡಿ ಚಂದ್ರನ ಮೇಲೆ 4ಜಿ ನೆಟ್ವರ್ಕ್ ಸ್ಥಾಪನೆಯ ಯೋಜನೆ ರೂಪಿಸಿವೆ. ಇದು ಸಾಧ್ಯವಾದರೆ ಚಂದ್ರನ ಮೇಲಿನಿಂದ ರಿಯಲ್ ಟೈಮ್ ನೇವಿಗೇಷಮ್, ವಿಡಿಯೋ ಸ್ಟ್ರೀಮಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಬಹುದು. ಭೂಮಿ ಹಾಗೂ ಚಂದ್ರನ ನಡುವಿನ ಅಂತರ ಈ ಮೂಲಕ ಕಡಿಮೆಯಾಗಲಿದೆ. ಮುಂದೆ ಓದಿ.

370 ಮಿಲಿಯನ್ ಡಾಲರ್ ಅನುದಾನ

370 ಮಿಲಿಯನ್ ಡಾಲರ್ ಅನುದಾನ

2028ರ ವೇಳೆಗೆ ಚಂದ್ರನ ಮೇಲೆ ನೆಲೆಯೊಂದನ್ನು ಸ್ಥಾಪಿಸುವ ಮತ್ತು ಅಲ್ಲಿ ಮನುಷ್ಯದ ಅಸ್ತಿತ್ವವನ್ನು ಸುಗಮಗೊಳಿಸುವ ಗುರಿ ಹೊಂದಿರುವ ನಾಸಾ, ಚಂದ್ರನ ಮೇಲ್ಮೈನಲ್ಲಿ ತಂತ್ರಜ್ಞಾನ ಅಳವಡಿಸಲು 12ಕ್ಕೂ ಅಧಿಕ ಕಂಪೆನಿಗಳಿಗೆ 370 ಮಿಲಿಯನ್ ಡಾಲರ್ ಅನುದಾನ ನೀಡಿದೆ. ಈ ಆವಿಷ್ಕಾರಗಳಲ್ಲಿ ರಿಮೋಟ್ ಪವರ್ ಉತ್ಪಾದನೆ, ಕ್ರಯೋಜನಿಕ್ ಘನೀಕರಣ, ರೋಬೊಟಿಕ್ಸ್, ಸುರಕ್ಷಿತ ಲ್ಯಾಂಡಿಂಗ್ ಮತ್ತು 4ಜಿ ನೆಟ್ವರ್ಕ್ ಸೇರಿದೆ.

ಹೆಚ್ಚು ಗುಣಮಟ್ಟದ ನೆಟ್ವರ್ಕ್

ಹೆಚ್ಚು ಗುಣಮಟ್ಟದ ನೆಟ್ವರ್ಕ್

ಚಂದ್ರನ ಮೇಲಿನ 4ಜಿ ನೆಟ್ವರ್ಕ್ ಪ್ರಸ್ತುತ ಚಂದ್ರನ ಮೇಲಿನ ರೇಡಿಯೋ ತರಂಗಾಂತರ ಗುಣಮಟ್ಟಕ್ಕಿಂತಲೂ ಹೆಚ್ಚು ವಿಶ್ವಾಸಾರ್ಹ, ದೂರ ಸಂವೇದಿ ಸಂಹವನವನ್ನು ಒದಗಿಸುತ್ತವೆ. ಭೂಮಿಯಲ್ಲಿ ಮಾಡುವಂತೆಯೇ 4ಜಿ ನೆಟ್ವರ್ಕ್‌ಅನ್ನು ಕ್ರಮೇಣ 5ಜಿಗೆ ಉನ್ನತೀಕರಿಸಬಹುದಾಗಿದೆ.

ಬೆಲ್ ಲ್ಯಾಬ್‌ಗೆ ಅನುದಾನ

ಬೆಲ್ ಲ್ಯಾಬ್‌ಗೆ ಅನುದಾನ

ಈ ಯೋಜನೆಗಾಗಿ ನೋಕಿಯಾದ ಬೆಲ್ ಲ್ಯಾಬ್‌ಗೆ 14.1 ಮಿಲಿಯನ್ ಡಾಲರ್ ಅನುದಾನ ನೀಡಲಾಗಿದೆ. ಬೆಲ್ ಲ್ಯಾಬ್ ಈ ಹಿಂದೆ ಎಟಿ&ಟಿ ಕಂಪೆನಿ ಜತೆಗೆ ಕಾರ್ಯ ನಿರ್ವಹಿಸುತ್ತಿತ್ತು. ಇದು 4ಜಿ ಎಲ್‌ಇಟಿ ನೆಟ್ವರ್ಕ್ ಸ್ಥಾಪಿಸುವ ಸಂಬಂಧ ಯಂತ್ರಗಳ ತಯಾರಿಕೆಗಾಗಿ ಸ್ಪೇಸ್‌ ಫ್ಲೈಟ್ ಎಂಜಿನಿಯರಿಂಗ್ ಕಂಪೆನಿ ಜತೆ ಪಾಲುದಾರಿಕೆ ಹೊಂದಲಿದೆ.

ಬಾಹ್ಯಾಕಾಶದಲ್ಲಿ 4ಜಿ

ಬಾಹ್ಯಾಕಾಶದಲ್ಲಿ 4ಜಿ

ಬಾಹ್ಯಾಕಾಶದಲ್ಲಿ ಮೊದಲ ಎಲ್‌ಟಿಇ/4ಜಿ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸಲು ನೋಕಿಯಾ ಪ್ರಸ್ತಾಪಿಸಿತ್ತು. ಈ ವ್ಯವಸ್ಥೆಯು ಬಹು ದೂರದ ಜಾಗಗಳಿಗೆ, ಅತ್ಯಧಿಕ ವೇಗದಲ್ಲಿ ಮತ್ತು ಪ್ರಸ್ತುತದ ಗುಣಮಟ್ಟಕ್ಕಿಂತ ಹೆಚ್ಚು ವಿಶ್ವಾಸಾರ್ಹವಾಗಿ ಚಂದ್ರನ ಮೇಲ್ಮೈನ ಸಂವಹನಕ್ಕೆ ಸಹಾಯ ಮಾಡಲಿದೆ.

English summary
NASA and Nokia are working together to install 4G network on Lunar surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X