ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ವಿರುದ್ಧ ಮಾತನಾಡಿ ವಾಷಿಂಗ್‌ಟನ್‌ಗೆ ತೆರಳಿದ ಪ್ರಧಾನಿ

|
Google Oneindia Kannada News

ಬ್ರಸಲ್ಸ್‌, ವಾಷಿಂಗ್ ಟನ್, ಮಾರ್ಚ್, 31: ಭಾರತೀಯರನ್ನು ಉದ್ದೇಶಿಸಿ ಬೆಲ್ಜಿಯಂನ ಬ್ರಸಲ್ಸ್‌ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ವಾಷಿಂಗ್ ಟನ್ ಗೆ ತೆರಳಿದ್ದಾರೆ.
ವಾಷಿಂಗ್ ಟನ್ ನಲ್ಲೂ ಭವ್ಯ ಸ್ವಾಗತ ಸಿಕ್ಕಿದೆ.

ಕಳೆದ 40 ವಷ೯ಗಳಿ೦ದ ಭಾರತ ಭಯೋತ್ಪಾದನೆ ವಿರುದ್ಧ ಏಕಾ೦ಗಿ ಹೋರಾಟ ನಡೆಸುತ್ತಿದೆ. ಇದೀಗ ಉಗ್ರವಾದ ಜಗತ್ತಿನಾದ್ಯ೦ತ ವ್ಯಾಪಿಸುತ್ತಿದ್ದು ಇದನ್ನು ಮಟ್ಟಹಾಕಲು ಪ್ರಪಂಚವೇ ಒಂದಾಗಬೇಕಿದೆ ಎಂದು ಮೋದಿ ಹೇಳಿದ್ದಾರೆ.[ಚಿತ್ರಗಳು: ಬಾಂಬ್ ದಾಳಿ ನಡೆದ ದೇಶಕ್ಕೆ ಮೋದಿ ಭೇಟಿ]

ಎಲ್ಲ ದೇಶಗಳು ಪರಸ್ಪರ ಸ್ಹೇಹದಿಂದ ಬಾಳಬೇಕಿದೆ. ಭಾರತ ಹೂಡಿಕೆದಾರರಿಗೆ ಮತ್ತು ಪ್ರತಿಭಾವಂತರಿಗೆ ನೆಲೆಯಾಗಿದೆ. ವ್ಯಾಪಾರ ವಾಣಿಜ್ಯಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಮುಕ್ತವಾಗಿ ಭಾರತ ನಿರ್ವಹಿಸುತ್ತಿದೆ ಎಂದು ಹೇಳಿದರು. ವಜ್ರದ ಉದ್ಯಮ ಸ್ಣೆಹ ಸಂಬಂಧವನ್ನು ಮತ್ತಷ್ಟು ಬೆಸೆದಿದೆ ಎಂದು ಹೇಳಿದರು. ಬೆಲ್ಜಿಯಂ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಮೋದಿ ಪ್ರಯಾಣ ಬೆಳೆಸಿದರು.

ಶ್ರದ್ಧಾ೦ಜಲಿ

ಶ್ರದ್ಧಾ೦ಜಲಿ

ಬ್ರಸೆಲ್ಸ್‌ನ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಬಾ೦ಬ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾ೦ಜಲಿ ಸಲ್ಲಿಸಿದರು. ಟೆಕ್ಕಿ ರಾಘವೇ೦ದ್ರನ್ ಗಣೇಶನ್ ಇದೇ ನಿಲ್ದಾಣದಲ್ಲಿ ಉಗ್ರರ ಸ್ಫೋಟಕ್ಕೆ ಬಲಿಯಾಗಿದ್ದರು.

 ಭಯೋತ್ಪಾದನೆ ನಿಗ್ರಹ ನಮ್ಮ ಹೊಣೆ

ಭಯೋತ್ಪಾದನೆ ನಿಗ್ರಹ ನಮ್ಮ ಹೊಣೆ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ಭಾರತ ಪ್ರಮುಖ ಜತೆಗಾರನಾಗಿದೆ. ಈ ವಿಷಯದಲ್ಲಿ ಭಾರತ ಹೆಚ್ಚು ಅನುಭವ ಹೊ೦ದಿರುವುದರಿ೦ದ ಪ್ರಧಾನಿ ಮೋದಿ ಸಕ್ರಿಯರಾಗಿ ಸಲಹೆ ನೀಡಬೇಕು ಎ೦ದು ಬೆಲ್ಜಿಯ೦ ಸ೦ಸತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದು ಉತ್ತಮ ಬೆಳವಣಿಗೆಯಾಗಿದೆ.

ಟೆಲಿಸ್ಕೋಪ್ ಗೆ ಚಾಲನೆ

ಟೆಲಿಸ್ಕೋಪ್ ಗೆ ಚಾಲನೆ

ಉತ್ತರಾಖ೦ಡದ ದೇವಸ್ಥಳದಲ್ಲಿ ಸ್ಥಾಪಿಸಲಾಗಿರುವ ಏಷ್ಯಾದ ಅತಿದೊಡ್ಡ ಟೆಲಿಸ್ಕೋಪ್(ದೂರದಶ೯ಕ)ಗೆ ಪ್ರಧಾನಿ ಮೋದಿ ಹಾಗೂ ಬೆಲ್ಜಿಯ೦ ಪ್ರಧಾನಿ ಚಾಲ್ಸ್೯ ಮೈಕೆಲ್ ಜ೦ಟಿಯಾಗಿ ರಿಮೋಟ್ ಮೂಲಕ ಚಾಲನೆ ನೀಡಿದರು.

ಮೋದಿಗೆ ಶುಭಾಶಯ

ಮೋದಿಗೆ ಶುಭಾಶಯ

ಬ್ರಸೆಲ್ಸ್‌ ನಿಂದ ಹೊರಟ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಡಲಾಯಿತು.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ವಾಷಿಂಗ್ ಟನ್ ಗೆ ಬಂದಿಳಿದ ಪ್ರಧಾನಿ ಅವರನ್ನು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಬರಮಾಡಿಕೊಂಡರು.

English summary
The United Nations is risking its relevance in the absence of a strong and structured response to terrorism, Indian Prime Minister Narendra Modi has warned. In an address to Indian diaspora in Belgium on Wednesday night, Modi regretted that the world had not come up with a proportionate response to terror despite the huge threat it posed to humanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X