ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಬಾಂಬ್ ದಾಳಿ ನಡೆದ ದೇಶಕ್ಕೆ ಮೋದಿ ಭೇಟಿ

|
Google Oneindia Kannada News

ಬ್ರಸಲ್ಸ್‌, ಮಾರ್ಚ್, 30: ಬಾಂಬ್ ದಾಳಿಯಿಂದ ನಲುಗಿದ್ದ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಭಾರತದ ಪ್ರಧಾನಿಗೆ ಭವ್ಯ ಸ್ವಾಗತ ಸಿಕ್ಕಿದೆ. ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ಮೋದಿ ನಡೆಸಿದ್ದಾರೆ.

ಬ್ರಸೆಲ್ಸ್ ಭೇಟಿ ಮುಗಿಸಿಕೊಂಡು ಪ್ರಧಾನಿ ಮೋದಿ ಅವರು ಪರಮಾಣು ಭದ್ರತಾ ಶೃಂಗದಲ್ಲಿ ಪಾಲ್ಗೊಳ್ಳಲು ಅಮೆರಿಕದ ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ. ಮಾರ್ಚ್‌ 31 ಹಾಗೂ ಏಪ್ರಿಲ್ 1 ರಂದು ಎರಡು ದಿನಗಳ ಕಾಲ ಪರಮಾಣು ಭದ್ರತಾ ಶೃಂಗ ನಡೆಯಲಿದ್ದು ಅದರಲ್ಲಿ ಭಾಗವಹಿಸಲಿದ್ದಾರೆ. ನಂತರ ಮೋದಿ ಅವರು ಸೌದಿ ಅರೇಬಿಯಾಕ್ಕೆ ಎರಡು ದಿನಗಳ ಭೇಟಿಗೆ ತೆರಳಿದ್ದಾರೆ.[ಪ್ರಧಾನಿ ಮೋದಿ ದೇಶಕ್ಕೆ 'ಗಾಡ್ ಗಿಫ್ಟ್' ಹೇಳಿಕೆ ಸಮಂಜಸವೇ?]

ಮಾರ್ಚ್ 22ರಂದು ಉಗ್ರರ ನಡೆದ ಉಗ್ರರ ದಾಳಿಯಲ್ಲಿ ಭಾರತದ ರಾಘವೇಂದ್ರನ್ ಗಣೇಶನ್ ಸೇರಿದಂತೆ 32 ಜನರು ಮೃತಪಟ್ಟಿದ್ದರು. ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿಗೆ ಭಾರತೀಯ ಮೂಲದವರಿಂದ ಭವ್ಯ ಸ್ವಾಗತ ಸಿಕ್ಕಿತು.

ವಿಮಾನ ಇಳಿದ ಮೋದಿ

ವಿಮಾನ ಇಳಿದ ಮೋದಿ

ಬ್ರಸಲ್ಸ್‌ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕಿದ್ದು ಹೀಗೆ.

ಬನ್ನಿ ಸ್ವಾಗತವೂ ನಿಮಗೆ

ಬನ್ನಿ ಸ್ವಾಗತವೂ ನಿಮಗೆ

ಬ್ರಸಲ್ಸ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಮೂಲದವರಿಂದ ಭ್ಯವ ಸ್ವಾಗತ ಸಿಕ್ಕಿತು.

ಗಣ್ಯರ ಭೇಟಿ

ಗಣ್ಯರ ಭೇಟಿ

ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ಚರ್ಚೆ ನಡೆಸಿದರು.

ಭಾರತೀಯರೊಂದಿಗೆ ಸಂವಾದ

ಭಾರತೀಯರೊಂದಿಗೆ ಸಂವಾದ

ವಿಮಾನ ನಿಲ್ದಾಣದ ಹೊರಗೆ ಭಾರತೀಯ ಮೂಲದವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿಗೆ ಬಿಗಿ ಭದ್ರತೆ ನೀಡಲಾಗಿತ್ತು.

English summary
Indian Prime Minister Narendra Modi on Wednesday laid a wreath at the Maalbeek metro station in Brussels, one of the sites of the March 22 terror attacks in the Belgian capital. Indian Infosys techie Raghavendran Ganesan was among the many who were killed when a bomb ripped through a train carriage at the station, located in the heart of Brussels and close to the EU headquarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X