ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣುಬಂಧ, ಪರಿಸರ ಸಂರಕ್ಷಣೆಗೆ ಮಹಾನ್ ನಾಯಕರ ಸಂಕಲ್ಪ

By Madhusoodhan
|
Google Oneindia Kannada News

ವಾಷಿಂಗ್ ಟನ್, ಜೂನ್, 07: ಅಣುಶಕ್ತಿ ಹೊಂದಿರುವ ಭಾರತಕ್ಕೆ ಅಮೆರಿಕದಿಂದ ಎಲ್ಲ ಬಗೆಯ ಸಹಕಾರ, ಹವಾಮಾನ ಮತ್ತು ಪರಿಸರ ಸಂರಕ್ಷಣೆಗೆ ಎರಡು ದೇಶಗಳ ಮೊದಲ ಆದ್ಯತೆ..

ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪರಸ್ಪರ ಭೇಟಿಯ ನಂತರದ ಹೈಲೈಟ್ಸ್. [ಅಮೆರಿಕದಿಂದ ಭಾರತಕ್ಕೆ 200 ಅತ್ಯಮೂಲ್ಯ ಕಲಾಕೃತಿ ವಾಪಸ್]

modi

ಪ್ರಧಾನಿಯಾದ ಬಳಿಕ ನಾಲ್ಕನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಮೋದಿ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಮಾಡಲಿದ್ದು ಜೂನ್ 8 ರಂದು ಯುಎಸ್ ಕಾಂಗ್ರೆಸ್(ಸಂಸತ್) ಉದ್ದೇಶಿಸಿ ಮಾತನಾಡಲಿದ್ದಾರೆ.

ಎರಡು ದೇಶಗಳು ಪರಸ್ಪರ ಸಹಕಾರದಲ್ಲಿ ಮುಂದುವರಿಯಲಿದೆ. ಜಿ 20 ಯಲ್ಲಿ ಮತ್ತೆ ಭೇಟಿಯಾಗೋಣ ಎಂಬ ಮಾತುಗಳು ಭೇಟಿಯ ನಂತರ ಕೇಳಿಬಂತು. ಉಭಯ ನಾಯಕರು ಭೇಟಿಯ ನಂತರ ಜಂಟಿಯಾಗಿ ಮಾತನಾಡಿದರು.[ಇಂಡೋ-ಅಫ್ಘನ್ ನಡುವೆ 'ಅಣೆಕಟ್ಟು' ಬಂಧನ]

ಶ್ವೇತ ಭವನಕ್ಕೆ ಆಗಮಿಸಿ ಪ್ರಧಾನಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬರಮಾಡಿಕೊಂಡರು. ಕ್ಷಿಪಣಿ ತಂತ್ರಜ್ಞಾನ ಮತ್ತು ಅಭಿವೃದ್ಧಿ ಬಗ್ಗೆ ಇಬ್ಬರು ನಾಯಕರು ಮಾತುಕತೆ ನಡೆಸಿದರು.

ಈ ಭೇಟಿ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕೂ ಮೊದಲು ಭಾರತಕ್ಕೆ ಸೇರಿದ 200ಕ್ಕೂ ಅತ್ಯಮೂಲ್ಯ ಕಲಾಕೃತಿಗಳನ್ನು ಅಮೆರಿಕ ಹಿಂತಿರುಗಿಸಿತು. ಸುಮಾರು 67 ಕೋಟಿ ರು ಗೂ ಅಧಿಕ ಮೌಲ್ಯದ ಕಲಾಕೃತಿಗಳು ಭಾರತಕ್ಕೆ ಮರಳಿ ಸಿಕ್ಕಿತು.

English summary
Prime Minister Narendra Modi who is on his three day visit to US, will hold bilateral talks with President Barack Obama on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X