ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಅಗ್ನಿಪರ್ವತ ದುರಂತಕ್ಕೆ ಮೋದಿ ಕಂಬನಿ

By Mahesh
|
Google Oneindia Kannada News

ಟೋಕಿಯೋ/ನ್ಯೂಯಾರ್ಕ್, ಸೆ.29: ಜಪಾನಿನ ಮೌಂಟ್ ಆನ್‌ಟೇಕ್ ಕಣಿವೆಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಸುಮಾರು 35 ಮಂದಿ ಸಾವಿಗೀಡಾಗಿರುವ ಸುದ್ದಿ ಕೇಳಿ ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಿಮ್ಮ ವೇದನೆಯಲ್ಲಿ ನಾನು ಭಾಗಿ.. ನನ್ನ ಪ್ರಾರ್ಥನೆ ನಿಮ್ಮೊಂದಿಗೆ ಇರುತ್ತದೆ ಎಂದು ಮೋದಿ ಹೇಳಿದ್ದಾರೆ.

ಜಪಾನ್‌ನ 2ನೇ ಅತಿದೊಡ್ಡ ಅಗ್ನಿ ಪರ್ವತ ಮೌಂಟ್‌ ಆನ್‌ಟೇಕ್‌ನಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡಿದೆ. ಎಲ್ಲೆಡೆ ದಟ್ಟವಾದ ಹೊಗೆ ಆವರಿಸಿದೆ. ಜ್ವಾಲಾಮುಖಿ ಸ್ಫೋಟದಿಂದ ಸುಮಾರು 35 ಮಂದಿ ಸಾವಿಗೀಡಾಗಿದ್ದು, 65 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಸುಮಾರು 45 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [ಮೋದಿ ಜಪಾನ್ ಭೇಟಿಯ ಚಿತ್ರಗಳು]

ಘಟನಾ ಸ್ಥಳಕ್ಕೆ ಜಪಾನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜ್ವಾಲಾಮುಖಿ ಸ್ಫೋಟಗೊಂಡ ಮೌಂಟ್ ಆನ್‌ಟೇಕ್ ಪರ್ವತದಲ್ಲಿ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಅದರೆ, 250ಕ್ಕೂ ಅಧಿಕ ಮಂದಿ ಈ ಹಠಾತ್ ದಾಳಿಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಅಗ್ನಿಪರ್ವತದಿಂದ 250ಕ್ಕೂ ಅಧಿಕ ಮಂದಿ ರಕ್ಷಣೆ

ಅಗ್ನಿಪರ್ವತದಿಂದ 250ಕ್ಕೂ ಅಧಿಕ ಮಂದಿ ರಕ್ಷಣೆ

ಮೌಂಟ್ ಆನ್ ಟೇಕ್ ಅಗ್ನಿಪರ್ವತದಲ್ಲಿರುವ ಸುಮಾರು 250ಕ್ಕೂ ಅಧಿಕ ಮಂದಿ ಸ್ಥಳೀಯರನ್ನು ಹೆಲಿಕಾಪ್ಟರ್ ಗಳ ಮೂಲಕವಾಗಿ ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ.

ಅಗ್ನಿಪರ್ವತ ಸ್ಫೋಟ ದುರಂತದ ಬಗ್ಗೆ ಮೋದಿ

ಅಗ್ನಿಪರ್ವತ ಸ್ಫೋಟ ದುರಂತದ ಬಗ್ಗೆ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಜಪಾನ್‌ನ 2ನೇ ಅತಿದೊಡ್ಡ ಜ್ವಾಲಾಮುಖಿ

ಜಪಾನ್‌ನ 2ನೇ ಅತಿದೊಡ್ಡ ಜ್ವಾಲಾಮುಖಿ

ಜಪಾನ್ ನ 2ನೇ ಅತಿದೊಡ್ಡ ಜ್ವಾಲಾಮುಖಿ ಪರ್ವತ ಎಂಬ ಖ್ಯಾತಿಗಳಿಸಿರುವ ಮೌಂಟ್ ಆನ್ ಟೇಕ್ ಪರ್ವತ ಸುಮಾರು 10 ಸಾವಿರದ 62 ಅಡಿ(3,067 ಮೀ) ಎತ್ತರದಲ್ಲಿದೆ.

ಜಪಾನ್ ಸರ್ಕಾರದ ಮುನ್ನಚ್ಚರಿಕೆ ನೀಡಿತ್ತು

ಜಪಾನ್ ಸರ್ಕಾರದ ಮುನ್ನಚ್ಚರಿಕೆ ನೀಡಿತ್ತು

ಅಗ್ನಿಪರ್ವತದ ಸಂಭಾವ್ಯ ಸ್ಫೋಟದ ಬಗ್ಗೆ ಜಪಾನ್ ಸರ್ಕಾರದ ಮುನ್ನಚ್ಚರಿಕೆ ನೀಡಿತ್ತು. ಅದರೆ, ಲೆಕ್ಕಿಸದೆ ಟ್ರೇಕ್ಕಿಂಗ್ ಮಾಡಲು ಹೋದ ಸಾಹಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಚಿತ್ರಗಳು: AP/PTI

ರಕ್ಷಣಾ ಕಾರ್ಯಕ್ಕೆ ವಿಷಗಾಳಿ ಅಡ್ಡಿ

ಅಗ್ನಿಸ್ಫೋಟದ ಲಾವಾರಸ ತಾಪ ಒಂದೆಡೆಯಾದರೆ, ರಕ್ಷಣಾ ಕಾರ್ಯಕ್ಕೆ ವಿಷಗಾಳಿ ಅಡ್ಡಿಪಡಿಸಿದೆ.

ಇಷ್ಟಕ್ಕೂ ಈ ದುರಂತ ಹೇಗೆ? ಏಕೆ?

ಇಷ್ಟಕ್ಕೂ ಈ ದುರಂತ ಹೇಗೆ ಸಂಭವಿಸಿತು? ಏಕೆ ಸಂಭವಿಸಿತು? ಎಂಬುದರ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿಕಲ್ ಚಾನೆಲ್ ನಿಂದ ವಿವರಣೆ

English summary
Prime Minister Narendra Modi Monday expressed "sadness" over volcanic eruptions in Japan and said his prayers are with the affected people. "News of a volcanic eruption at Mount Ontake in Japan is quite saddening. My prayers with the affected," Modi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X