ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್‌ ಟ್ರಂಪ್‌ಗೆ ಪ್ರಧಾನಿ ಮೋದಿ ದೂರವಾಣಿ ಕರೆ

|
Google Oneindia Kannada News

ನವದೆಹಲಿ, ಜನವರಿ 07 : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಕಚೇರಿ ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

ಮಂಗಳವಾರ ವಿಶ್ವದ ಇಬ್ಬರು ಪ್ರಭಾವಿ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ನರೇಂದ್ರ ಮೋದಿ ಡೊನಾಲ್ಡ್ ಕರೆ ಮಾಡಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು ಎಂದು ಪ್ರಧಾನಿ ಕಚೇರಿ ಹೇಳಿದೆ.

ಅಮೆರಿಕ ಕೊಂದ ಖಾಸಿಂ ಸೋಲೆಮಾನಿ ಯಾರು? ಟ್ರಂಪ್‌ಗೇಕೆ ಈತನ ಬಗ್ಗೆ ಭಯ?ಅಮೆರಿಕ ಕೊಂದ ಖಾಸಿಂ ಸೋಲೆಮಾನಿ ಯಾರು? ಟ್ರಂಪ್‌ಗೇಕೆ ಈತನ ಬಗ್ಗೆ ಭಯ?

Narendra Modi Conveys New Year Greetings To Donald Trump

ಅಮೆರಿಕದ ಪ್ರಜೆಗಳು, ಡೊನಾಲ್ಡ್ ಟ್ರಂಪ್, ಅವರ ಕುಟುಂಬಕ್ಕೆ ನರೇಂದ್ರ ಮೋದಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಹೊಸ ವರ್ಷದಲ್ಲಿ ಉತ್ತಮ ಆರೋಗ್ಯ, ಯಶಸ್ಸು ಸಿಗಲಿ ಎಂದು ಹಾರೈಸಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಭಾರತೀಯ ಸಂಜಾತೆ!ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಭಾರತೀಯ ಸಂಜಾತೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹ ಭಾರತೀಯರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ಹಲವು ವರ್ಷದ ಸ್ನೇಹದ ಕುರಿತು ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು.

'ಮೋದಿ ಅಪ್ಪು'ಗೆಯ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮನದಾಳದ ಮಾತು...'ಮೋದಿ ಅಪ್ಪು'ಗೆಯ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮನದಾಳದ ಮಾತು...

ಪ್ರಧಾನಿ ನರೇಂದ್ರ ಮೋದಿ ಎರಡೂ ರಾಷ್ಟ್ರಗಳ ಸಂಬಂಧ, ಬೆಳವಣಿಗೆ ಕುರಿತು ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಿದರು. ಕಳೆದ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಪಾಲುದಾರಿಕೆ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು.

ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರಿಗೆ ಕರೆ ಮಾಡಿರುವ ಕುರಿತು ಹಲವು ವಿಶ್ಲೇಷಣೆ ನಡೆಯುತ್ತಿದೆ. ಡೊನಾಲ್ಡ್‌ ಟ್ರಂಪ್ ಆತ್ಮೀಯರಲ್ಲಿ ಮೋದಿ ಸಹ ಒಬ್ಬರು.

English summary
Prime Minister Narendra Modi spoke with America president Donald Trump and conveyed new year greetings said prime minister office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X