ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್ ಸಂಸತ್ತಿನಲ್ಲಿ ಮೋದಿ ಭಾಷಣ ವಿಡಿಯೋ

By Mahesh
|
Google Oneindia Kannada News

ಥಿಂಪು, ಜೂ.16: ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ ಅವರು ಭೂತಾನ್ ನ ಸಂಸತ್ತಿನಲ್ಲಿ ಸೋಮವಾರ ಭಾಷಣ ಮಾಡಿದರು.

'ಭಾರತ ಹಾಗೂ ಭೂತನ್ ನಡುವಿನ ಸಂಬಂಧ ಐತಿಹಾಸಿಕವಾಗಿದೆ, ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದಿರುವ ರಾಜ ಪರಿವಾರಕ್ಕೆ ನನ್ನ ಅಭಿನಂದನೆಗಳು' ಎಂದು ಮೋದಿ ಅವರು ಹೇಳಿದರು.

ಭಾನುವಾರ ವಿಶೇಷ ವಿಮಾನದಲ್ಲಿ ಥಿಂಪುವಿನ ಪಾರೊ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭೂತಾನ್‌ ಪ್ರಧಾನಿ ಶೆರಿಂಗ್‌ ತೊಗ್ಬೆ ಸ್ವಾಗತಿಸಿದರು. ಭೂತಾ‌ನ್‌ ಸೇನಾ ಪಡೆಗಳು ಮೋದಿ ಅವರಿಗೆ ವಿದಿಬದ್ಧ ಗೌರವ ರಕ್ಷೆ ನೀಡಲಾಯಿತು. ಭಾರತದ ನೆರವಿನಿಂದ ನಿರ್ಮಾಣವಾಗಿರುವ ಭೂತಾನ್‌ನ ಸುಪ್ರೀಂ ಕೋರ್ಟ್ ಕಟ್ಟಡ, ಸಂಸತ್ ಭವನದ ಕಟ್ಟಡ ಹಾಗೂ ಜಲವಿದ್ಯುತ್ ಯೋಜನೆಯನ್ನ ಮೋದಿ ಲೋಕಾರ್ಪಣೆ ಮಾಡಿದರು. [ಭಾನುವಾರ ಮೋದಿ ದಿನಚರಿ ವಿವರ]

ನಂತರ ಭೂತಾನ್ ದೇಶದ ದೊರೆಯನ್ನ ಭೇಟಿಯಾದ ಮೋದಿ ಭಾರತ ಭೂತಾನ್ ನಡುವಿನ ಶೈಕ್ಷಣಿಕ, ಆರ್ಥಿಕ ಒಪ್ಪಂದವಾದ ಬಿಟುಬಿ ಒಪ್ಪಂದದ ಕುರಿತು ಚರ್ಚೆ ನಡೆಸಿದರು. ಸೋಮವಾರ ಕೂಡಾ ಮೋದಿ ಹಲವು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಮೋದಿಯ ಭೂತಾನ್ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ.

Narendra Modi: Relationship between India and Bhutan is historic

ಭೂತಾನ್ ಸಂಸತ್ತಿನಲ್ಲಿ ಹಿಂದಿಯಲ್ಲಿ ಮೋದಿ ಅವರು ಮಾಡಿದ ಭಾಷಣದ ಮುಖ್ಯಾಂಶಗಳು ಹೀಗಿದೆ :

* ಭೂತಾನಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿರುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ.
* ಪ್ರಜಾಪ್ರಭುತ್ವದ ತತ್ತ್ವವನ್ನು ಭೂತಾನಿನಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಸಂಸ್ಕೃತಿ ಉಳಿಸಲು ನಡೆದಿರುವ ಪ್ರಯತ್ನ ಕಂಡು ಹೃದಯ ತುಂಬಿ ಬಂದಿದೆ.
* ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆಯಿತು. ಮತದಾರರಿಗೆ ಉತ್ಸಾಹ ಮೂಡುವಂಥ ವಾತಾವರಣ ಸೃಷ್ಟಿಯಾಗಬೇಕಿದೆ.
* ಸಶಕ್ತ ಭಾರತ ನಿರ್ಮಾಣವಾದರೆ ನೆರೆ ರಾಷ್ಟ್ರಗಳ ಕಷ್ಟ ಸುಖಗಳಿಗೆ ಹೆಚ್ಚಿನ ರೀತಿಯಲ್ಲಿ ನಾವು ಸ್ಪಂದಿಸಬಹುದು.
* ಭಾರತ ಹಾಗೂ ಭೂತಾನ್ ಸಂಬಂಧ ಐತಿಹಾಸಿಕವಾಗಿದ್ದು, ಆಡಳಿತ ಬದಲಾದ ಮಾತ್ರಕ್ಕೆ ಸಂಬಂಧ ಹಳಸುವುದಿಲ್ಲ. ನಾವು ಮುಕ್ತವಾಗಿ ಭೂತನ್ ಜತೆ ಸಂಬಂಧ ಮುಂದುವರೆಸುತ್ತೇವೆ.
* ಶಿಕ್ಷಣಕ್ಕೆ ಭೂತಾನ್ ನೀಡಿರುವ ಮಹತ್ವ ಪ್ರಶಂಸನೀಯ. ಭೂತಾನ್ ನಲ್ಲಿ ಇ ಗ್ರಂಥಾಲಯ ಸ್ಥಾಪನೆಗೆ ಭಾರತ ಅಗತ್ಯ ನೆರವು ನೀಡಲಿದೆ.
* ಭಾರತದ ಉಪಗ್ರಹ ತಂತ್ರಜ್ಞಾನವನ್ನು ಭೂತಾನ್ ಬಳಸಿಕೊಂಡು ಅಭಿವೃದ್ಧಿ ಕಾಣಬಹುದು. ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ನಮ್ಮ ಬಾಂಧವ್ಯ ಇನ್ನಷ್ಟು ಹತ್ತಿರವಾಗಬಹುದು.
* ಭಾರತ ಹಾಗೂ ಭೂತಾನ್ ಪರಂಪರೆಗೆ ಹಿಮಾಲಯವೇ ಸಾಕ್ಷಿ ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು.
* Terrorism divides,tourism unites-PM Modi
* ಹಿಮಾಲಯದ ರಾಜ್ಯಗಳು, ರಾಷ್ಟ್ರಗಳು ತಮ್ಮ ಸಂಸ್ಕೃತಿ, ಕ್ರೀಡೆ ಹಂಚಿಕೆಯಲ್ಲಿ ತೊಡಗಬೇಕು. ಇದರಿಂದ ಇತರೆ ಭಾಗದ ಜನರಿಗೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.
* ಥಿಂಪುವಿನ ವಿಮಾನ ನಿಲ್ದಾಣದಲ್ಲಿ ಸಿಕ್ಕ ಆದರದ ಸ್ವಾಗತದಿಂದ ನನ್ನ ಹೃದಯ ತುಂಬಿ ಬಂದಿದೆ ಎಂದರು.

ಮೋದಿ ಭಾಷಣದ ಸಂಪೂರ್ಣ ವಿವರ ವಿಡಿಯೋದಲ್ಲಿ ಲಭ್ಯವಿದೆ ನೋಡಿ:

English summary
Narendra Modi in Bhutan Parliament : Speaking in crisp and fluent Hindi, Prime Minister Narendra Modi on Monday addressed the joint session at the Bhutan Parliament congratulating the political family of Bhutan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X