ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡಿಕ್ಕಿ ಕೊಲ್ಲುವ ಬದಲು 170 ಆನೆಗಳ ಮಾರಾಟಕ್ಕೆ ಮುಂದಾದ ನಮೀಬಿಯಾ

|
Google Oneindia Kannada News

ವಿಂಡ್‌ಹೋಕ್, ಡಿಸೆಂಬರ್ 03: ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ ಆನೆಗಳ ಸಂತತಿ ಹೆಚ್ಚಾಗುತ್ತಿರುವ ಕಾರಣ ಅವುಗಳನ್ನು ಕೊಲ್ಲುವ ಬದಲು 170 ಆನೆಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಕೇವಲ ಆನೆಗಳ ಸಂತತಿ ಹೆಚ್ಚಾಗಿದ್ದರಿಂದ ಅವುಗಳನ್ನು ಮಾರಾಟ ಮಾಡಲು ಆಲೋಚಿಸುತ್ತಿಲ್ಲ, ಅಲ್ಲಿ ಬರ ಪರಿಸ್ಥಿತಿ ಕಾಡುತ್ತಿದೆ, ಮಾನವರ ಜತೆ ಸಂಘರ್ಷವೂ ಹೆಚ್ಚಾಗಿದೆ. ಹಾಗಾಗಿ ಮೊದಲು ಆನೆಯಗಳನ್ನು ಹತ್ಯೆ ಮಾಡುವಂತೆ ಆಲೋಚಿಸಿದ್ದರೂ ಕೂಡ ಇದೀಗ 170 ಆನೆಗಳನ್ನು ಮಾರುವ ಕುರಿತು ನಿರ್ಧಾರ ತೆಗೆದುಕೊಂಡಿದೆ.

ಮಾರಾಟಗಾರರಿಗೆ ಅಜಾಗರೂಕತೆಯಿಂದ ಆನೆಗಳನ್ನು ಮಾರಾಟ ಮಾಡುವಂತಿಲ್ಲ, ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳನ್ನೂ ಖರೀದಿದಾರರು ನೀಡಬೇಕು ಎಂದು ತಿಳಿಸಿದ್ದಾರೆ.

Namibia To Sell 170 Live Elephants Instead Of Shooting Them

ಕಳೆದ ವರ್ಷ ಸರ್ಕಾರ ಆನೆ, ಜಿರಾಫೆ 1 ಸಾವಿರ ವನ್ಯಜೀವಿಗಳ ಮಾರಾಟಕ್ಕೆ ಯೋಜನೆ ರೂಪಿಸಿತ್ತು. ಹೆಚ್ಚುತ್ತಿರುವ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾರಾಟ ನೀತಿಗೆ ಸರ್ಕಾರ ಒಪ್ಪಿಗೆ ನೀಡಿದೆ.

ಆನೆ ಮರಿಗಳು ಸೇರಿದಂತೆ ಒಂದು ಗುಂಪಿನ ಎಲ್ಲಾ ಆನೆಗಳನ್ನು ಒಟ್ಟಿಗೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯೂ ಇರಾ ಎಂಬ ದಿನಪತ್ರಿಕೆಯಲ್ಲಿಹೆಚ್ಚು ಮೌಲ್ಯದ 170 ಆನೆಗಳ ಮಾರಾಟಕ್ಕೆ ಸಂಬಂಧಿಸಿದ ಜಾಹೀರಾತು ಬುಧವಾರ ಪ್ರಕಟವಾಗಿದೆ. ಬರ ಪರಿಸ್ಥಿತಿ ಹಾಗೂ ಆನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ ಆನೆಗಳ ಮಾರಾಟ ಮಾಡಲಾಗುತ್ತಿದೆ ಎಂದು ಸಚಿವಾಲಯ ಉಲ್ಲೇಖಿಸಿದೆ. ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ.

English summary
Namibia is putting 170 live elephants up for sale to curb rising tusker populations under pressure from drought and territorial conflict with humans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X