ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂಪಾಂಜಿಗಳ ಸಾವಿಗೆ ಕಾರಣವಾದ ನಿಗೂಢ ಕಾಯಿಲೆ: ಮನುಷ್ಯರಿಗೂ ಹರಡುವ ಭೀತಿ

|
Google Oneindia Kannada News

ಫ್ರೀಟೌನ್, ಫೆಬ್ರವರಿ 6: ಪೂರ್ವ ಆಫ್ರಿಕಾದಲ್ಲಿರುವ ಸಿಯೆರಾ ಲಿಯೋನ್ ದೇಶದಲ್ಲಿನ ಟಕುಗಮಾ ವನ್ಯಜೀವಿ ತಾಣದಲ್ಲಿ ಚಿಂಪಾಂಜಿಗಳು ನಿಗೂಢವಾಗಿ ಮೃತಪಟ್ಟಿದ್ದು, ಇದಕ್ಕೆ ಹೊಸ ಬ್ಯಾಕ್ಟೀರಿಯಾ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕುರಿತಾದ ಸಂಶೋಧನೆಯು, ಮಾರಕ ಕಾಯಿಲೆಯು ಚಿಂಪಾಂಜಿಗಳಿಂದ ಮನುಷ್ಯರಿಗೂ ಬರುವ ಸಾಧ್ಯತೆ ಇದೆ ಎಂಬ ಭಯಾನಕ ಸಂಗತಿಯನ್ನು ಹೊರಹಾಕಿದೆ.

ಚಿಂಪಾಂಜಿಗಳಿಂದ ಮನುಷ್ಯರು ಶೇ 98ರಷ್ಟು ವಂಶವಾಹಿ ಮಾದರಿಯನ್ನು ಹೊಂದಿರುವುದರಿಂದ ಈ ಬ್ಯಾಕ್ಟೀರಿಯಾಗಳು ಚಿಂಪಾಂಜಿಗಳ ಜೀವಕ್ಕೆ ಮಾರಕವಾದಂತೆಯೇ ಮನುಷ್ಯರಿಗೂ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯನಿಂದ ಅಂಟಿದ ಕೊರೊನಾವೈರಸ್ ನಿಂದ 10000 ಪ್ರಾಣಿಗಳು ಬಲಿ! ಮನುಷ್ಯನಿಂದ ಅಂಟಿದ ಕೊರೊನಾವೈರಸ್ ನಿಂದ 10000 ಪ್ರಾಣಿಗಳು ಬಲಿ!

ಪ್ರಾಣಿಸಾಂಕ್ರಾಮಿಕ ನರವಿಜ್ಞಾನ ಮತ್ತು ಜಠರ ಸಂಬಂಧಿ ಕಾಯಿಲೆ ಅಥವಾ ಇಎನ್‌ಜಿಎಸ್ ಎಂದು ಗುರುತಿಸಲಾಗಿರುವ ಅಪರಿಚಿತ ಕಾಯಿಲೆಯು ಚಿಂಪಾಂಜಿಗಳಲ್ಲಿ ನರವೈಜ್ಞಾನಿಕ ಸಮಸ್ಯೆಗಳು, ವಾಂತಿ ಮತ್ತು ಬೇಧಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. 2005ರಿಂದಲೂ ಟಕುಗಮ ವನ್ಯಜೀವಿ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಿದ್ದರೂ 56 ಪಾಶ್ಚಿಮಾತ್ಯ ಚಿಂಪಾಂಜಿಗಳು ಇಎನ್‌ಜಿಎಸ್‌ಗೆ ಬಲಿಯಾಗಿವೆ.

 Mystery Illness ENGS Killed More Than 50 Chimpanzees In Sierra Leone

ಇಎನ್‌ಜಿಎಸ್‌ಅನ್ನು ಅಧ್ಯಯನ ಮಾಡಿರುವ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಅದಕ್ಕೆ ಸರ್ಕಿನಾ ಸೋಂಕು ಕಾರಣ ಎಂಬುದನ್ನು ಕಂಡುಕೊಂಡಿದೆ. ಸರ್ಕಿನಾ ಬ್ಯಾಕ್ಟೀರಿಯಾ ಗ್ಯಾಸ್ಟ್ರಿಕ್ ಅಲ್ಸರ್‌ಗಳು, ವಾತಕಾರಕ ಜಠರದ ಉರಿತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳ ಬೆಳವಣಿಗೆಗೆ ಕಾರಣವಾಗುತ್ತವೆ. ವಾತಕಾರಕ ಜಠರದ ಉರಿ ಸಮಸ್ಯೆಗಳಲ್ಲಿ ಹೊಟ್ಟೆಯ ಗೋಡೆಗಳಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಇಲ್ಲಿ ಬ್ಯಾಕ್ಟೀರಿಯಾಗಳು ಮಾರಣಾಂತಿಕ ಸ್ವರೂಪ ಪಡೆದುಕೊಳ್ಳುತ್ತವೆ.

 ಕೊರೊನಾ ಸೋಂಕಿನ ಭೀತಿ: 1,00,000 ಮಿಂಕ್‌ಗಳನ್ನು ಕೊಲ್ಲಲು ಸ್ಪೇನ್ ಆದೇಶ ಕೊರೊನಾ ಸೋಂಕಿನ ಭೀತಿ: 1,00,000 ಮಿಂಕ್‌ಗಳನ್ನು ಕೊಲ್ಲಲು ಸ್ಪೇನ್ ಆದೇಶ

ಇಎನ್‌ಜಿಎಸ್‌ಗಳು ಚಿಂಪಾಂಜಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಸಾವಿಗೆ ಕಾರಣವಾಗುತ್ತಿವೆ. ಶೇ 33.7ರಷ್ಟು ಜಿಂಪಾಂಜಿಗಳು ಇದಕ್ಕೆ ತುತ್ತಾಗಿದ್ದು, ಅವುಗಳಲ್ಲಿ ಶೇ 63.6ರಷ್ಟು ಸಾವು ಸಂಭವಿಸಿವೆ. ಮಾರ್ಚ್ ಬಳಿಕ ಅವಧಿಗೆ ಅನುಗುಣವಾಗಿ ಕಾಯಿಲೆ ಹೆಚ್ಚುತ್ತಿದ್ದು, ಶೇ 100ರಷ್ಟು ಸಾವು ಸಂಭವಿಸಿದೆ ಎಂದು ಫೆ. 3ರಂದು ಪ್ರಕಟವಾದ ವೈದ್ಯಕೀಯ ವರದಿ ತಿಳಿಸಿದೆ.

English summary
A mysterious bacteria Sarcina killed more than 50 Chimpanzees in Sierra Leone by ENGS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X