ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ: ನಿಗೂಢ ವಿಷಾನಿಲಕ್ಕೆ ಕರಾಚಿಯ 11 ಮಂದಿ ಸಾವು

|
Google Oneindia Kannada News

ಕರಾಚಿ, ಫೆಬ್ರವರಿ 18: ವಿಷಾನಿಲ ಸೇವಿಸಿ ಪಾಕಿಸ್ತಾನದ ಕರಾಚಿಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಆದರೆ ವಿಷಾನಿಲ ಬಂದದ್ದು ಎಲ್ಲಿಂಗ, ವಿಷಾನಿಲ ಹೊರಬಿಟ್ಟವರು ಯಾರು, ವಿಷಾನಿಲದಲ್ಲಿ ಏನೇನಿತ್ತು ಎಂಬುದು ನಿಗೂಢವಾಗಿದೆ.

ಭಾನುವಾರ ರಾತ್ರಿ ಕರಾಚಿಯ ಕೆಮಾರಿ ಏರಿಯಾದ ಮಂದಿ ವಿಪರೀತ ಉಸಿರಾಟದ ತೊಂದರೆಯಿಂದ ಬಳಲು ಪ್ರಾರಂಭಿಸಿದರು. ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ಅವರನ್ನು ರವಾನಿಸಲಾಯಿತು. ಆಸ್ಪತ್ರೆಯಲ್ಲಿ 11 ಮಂದಿ ಸಾವನ್ನಪ್ಪಿದರು. 150 ಮಂದಿ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಾನಿಲ ಎಲ್ಲಿಂದ ಬಂದಿತು, ಜೀವ ತೆಗೆಯುವಂತಹಾ ಅಂಶ ಅದರಲ್ಲಿ ಏನಿತ್ತು ಎಂಬುದು ಗೊತ್ತಾಗಿಲ್ಲ. ಅಧಿಕಾರಿಗಳು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Mysterious Toxic gas Killed 11 People In Pakistans Karachi

ಘಟನೆ ನಡೆದಿರುವುದು ಬಂದರಿಗೆ ಸಮೀಪವಾಗಿದ್ದು, ದೊಡ್ಡ ಹಡಗೊಂದು ಅದೇ ವೇಳೆಗೆ ಸೋಯಾಬಿನ್ ಅಥವಾ ಅದೇ ಮಾದರಿಯ ವಸ್ತುವೊಂದನ್ನು ಅನ್‌ಲೋಡ್ ಮಾಡುತ್ತಿತ್ತು, ಅದರಿಂದಾಗಿ ವಿಷಗಾಳಿ ಉತ್ಪತ್ತಿ ಆಗಿರಬಹುದಾದ ಸಂಭವ ಇದೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಹೇಳಿದ್ದಾರೆ.

ವಿಷಗಾಳಿಯಿಂದ ಆಸ್ಪತ್ರೆಗೆ ದಾಖಲಾದವರು ಹೇಳುವ ಪ್ರಕಾರ, 'ಏರಿಯಾದಲ್ಲೆಲ್ಲಾ ಕೆಟ್ಟ ವಾಸನೆ ಹಬ್ಬಿತು, ಕೆಲವೇ ಕ್ಷಣಗಳಲ್ಲಿ ಉಸಿರಾಡಲು ಸಮಸ್ಯೆ ಆಯಿತು, ನಂತರ ಎಲ್ಲರೂ ಆಸ್ಪತ್ರೆಗಳತ್ತ ಓಡಿದರು'.

English summary
Mysterious toxic gas killed 11 people in Pakistan's Karachi on Sunday. Gas's origin was not found till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X