ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲಿಯಲ್ಲಿ 'ನಿಗೂಢ ಘಟನೆ': ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿದ ಆಕಾಶ

|
Google Oneindia Kannada News

ಚಿಲಿಯು ಆಂಡಿಸ್ ಪರ್ವತಗಳು ಮತ್ತು ಪೆಸಿಫಿಕ್ ಮಹಾಸಾಗರದ ನಡುವೆ ಇರುವ ಉದ್ದ ಮತ್ತು ಕಿರಿದಾದ ದೇಶವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಮೀನುಗಾರರ ಕೈಯಲ್ಲಿ 16 ಅಡಿಯ ಮೀನು ಸಿಕ್ಕಿದ್ದು, ಇದನ್ನು ಜನ ಶಾಪಗ್ರಸ್ತ ಎಂದು ಹೇಳುತ್ತಿದ್ದರು. ಇದರಿಂದಾಗಿ ಇಲ್ಲಿಕ ಕೆಲವು ಅಹಿತಕರ ಘಟನೆಗಳು ನಡೆಯುವ ಭಯವಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಅಲ್ಲಿರುವ ನಗರದಲ್ಲಿ ಮೋಡಗಳ ಬಣ್ಣ ಬದಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಚಿಲಿಯ ಪೊಜೊ ಅಲ್ಮೊಂಟೆ ನಗರದಲ್ಲಿ ನಿಗೂಢ ಘಟನೆಯೊಂದು ನಡೆದಿದೆ. ಅಲ್ಲಿ ಮೋಡಗಳು ಇದ್ದಕ್ಕಿದ್ದಂತೆ ನೇರಳೆ ಬಣ್ಣಕ್ಕೆ ತಿರುಗಿವೆ. ನಂತರ ಜನರು ಅವರ ಅನೇಕ ಚಿತ್ರಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಚಿತ್ರಗಳಲ್ಲಿ ಆಕಾಶವು ಗುಲಾಬಿ ಬಣ್ಣದ್ದಾಗಿರುವುದನ್ನು ನೀವು ನೋಡಬಹುದು. ಮೋಡಗಳು ಗುಲಾಬಿ ಬಣ್ಣದಲ್ಲಿ ಕಂಡು ಜನ ಆಶ್ಚರ್ಯಗೊಂಡಿದ್ಧಾರೆ.

ಜುಲೈ ತಿಂಗಳಲ್ಲಿ ಚಿಲಿಯಲ್ಲಿ ಸಿಕ್ಕ ಮೀನನ್ನು ಕೋಲೋಸಸ್ ಸೈಜ್ ಓರ್ಫಿಶ್ ಎಂದು ಕರೆಯಲಾಗುತ್ತದೆ. ಜೀವಶಾಸ್ತ್ರಜ್ಞರ ಪ್ರಕಾರ, ಅದರ ಉದ್ದವು 5 ಮೀಟರ್‌ಗಳಿಗಿಂತ ಹೆಚ್ಚು ಇದ್ದು, ಇದು ಕಾಣಿಸಿಕೊಳ್ಳುವುದು ತುಂಬಾ ಅಪರೂಪ ಎಂದಿದ್ದಾರೆ. ಈ ಮೀನು ಸಮುದ್ರದಲ್ಲಿ 200 ರಿಂದ 1000 ಮೀಟರ್ ಆಳದಲ್ಲಿ ವಾಸಿಸುತ್ತದೆ. ಆದರೆ ಮೀನುಗಾರರು ಅದನ್ನು ಕಡಲತೀರದ ಬಳಿ ಹಿಡಿದಿದ್ದಾರೆ.

ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿದ ಆಕಾಶ

ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿದ ಆಕಾಶ

ಕೆಲವು ದಿನಗಳ ಹಿಂದೆ ಅಲ್ಲಿ ಶಾಪಗ್ರಸ್ತ ಮೀನು ಕಂಡುಬಂದಿತು. ಇದನ್ನು ಹೆರಿಂಗ್ಸ್ ರಾಜ ಎಂದೂ ಕರೆಯುತ್ತಾರೆ. ಈ ಮೀನು ಹೋದಲ್ಲೆಲ್ಲಾ ಅವಾಂತರ ಸೃಷ್ಟಿಸುತ್ತದೆ ಎನ್ನಲಾಗಿದೆ. ಕಳೆದ ಬಾರಿ ಜಪಾನ್‌ನಲ್ಲಿ ಕಾಣಿಸಿಕೊಂಡಾಗ ಭೀಕರ ಸುನಾಮಿ ಸಂಭವಿಸಿದೆ. ಈ ಕಾರಣಕ್ಕಾಗಿ, ಜನರು ಆ ಮೀನಿಂದಾಗಿ ಆಕಾಶ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಹೇಳತೊಡಗಿದ್ದಾರೆ.

ಘಟನೆ ಬಗ್ಗೆ ಪರಿಶೀಲನೆ

ಘಟನೆ ಬಗ್ಗೆ ಪರಿಶೀಲನೆ

ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳೀಯ ಅಧಿಕಾರಿಗಳು ಕ್ರಿಯಾಶೀಲರಾಗಿದ್ದರು ಎಂದು ತಾರಪಾಕಾದ (Tarapaca) ಉಪ ಪ್ರಾದೇಶಿಕ ನಿರ್ದೇಶಕ ಕ್ರಿಸ್ಟಿಯನ್ ಇಬಾನೆಜ್ ಹೇಳಿದ್ದಾರೆ. ಅವರು ತಕ್ಷಣ ಈ ಬಗ್ಗೆ ತನಿಖೆ ನಡೆಸಿದ್ದು, ಇದು ನೈಸರ್ಗಿಕ ವಿದ್ಯಮಾನವಲ್ಲ, ಆದರೆ ಮಾನವ ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ. ಬದಲಾಗಿದ್ದ ಆಕಾಸದ ಬಣ್ಣ 48 ಗಂಟೆಗಳ ನಂತರ ಸಾಮಾನ್ಯವಾಗಿದೆ.

ಕೆಲ ಸಮಯಗಳ ನಂತರ ಸಾಮಾನ್ಯ ಬಣ್ಣಕ್ಕೆ ತಿರುಗಿದ ಆಕಾಶ

ಕೆಲ ಸಮಯಗಳ ನಂತರ ಸಾಮಾನ್ಯ ಬಣ್ಣಕ್ಕೆ ತಿರುಗಿದ ಆಕಾಶ

ವಾಸ್ತವವಾಗಿ ಪ್ಲಾಂಟ್‌ನಲ್ಲಿ ಅಳವಡಿಸಲಾದ ಬೂಸ್ಟರ್ ಪಂಪ್‌ನ ಮೋಟಾರ್ ವಿಫಲವಾಗಿತ್ತು. ಇದರಿಂದಾಗಿ ಅಯೋಡಿನ್ ಅನಿಲ ಹೊರಬರಲು ಪ್ರಾರಂಭಿಸಿತು. ಇದಾದ ನಂತರ ಆಕಾಶದ ಮೈಬಣ್ಣ ವಿಚಿತ್ರ ರೀತಿಯಲ್ಲಿ ಗುಲಾಬಿ ಬಣ್ಣಕ್ಕೆ ತಿರುಗಿತು. ಮೋಟರ್ ಗಳು ಸರಿ ಮಾಡಿದ ಬಳಿಕ ಎಲ್ಲವೂ ಮತ್ತೆ ಸಾಮಾನ್ಯವಾಯಿತು. ಮೋಡಗಳ ಬಣ್ಣವು ಸುಮಾರು 48 ಗಂಟೆಗಳ ಕಾಲ ಗುಲಾಬಿ ಬಣ್ಣದಲ್ಲಿ ಉಳಿಯಿತು, ನಂತರ ಅದು ಕಣ್ಮರೆಯಾಯಿತು ಎಂದು ಹೇಳಲಾಗುತ್ತಿದೆ.

ಆಕಾಶದ ಬಣ್ಣದಲ್ಲಿ ಬದಲಾವಣೆ

ಆಕಾಶದ ಬಣ್ಣದಲ್ಲಿ ಬದಲಾವಣೆ

ಕೆಲವು ದಿನಗಳ ಹಿಂದೆ ಅಂಟಾರ್ಕ್ಟಿಕಾದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಅಲ್ಲಿಯೂ ಆಕಾಶದ ಬಣ್ಣ ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿತು. ಜ್ವಾಲಾಮುಖಿ ಸ್ಫೋಟ ಸಂಭವಿಸಿದಾಗ, ಸಲ್ಫೇಟ್ ಕಣಗಳು, ಸಮುದ್ರದ ಉಪ್ಪು ಮತ್ತು ನೀರಿನ ಆವಿಯಿಂದ ಮಾಡಲ್ಪಟ್ಟ ಏರೋಸಾಲ್ಗಳು ಗಾಳಿಯಲ್ಲಿ ಪರಿಚಲನೆಗೊಳ್ಳುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದರು. ಸೂರ್ಯನ ಬೆಳಕು ಅವುಗಳನ್ನು ಹೊಡೆದಾಗ, ಅವು ಆಕಾಶದಲ್ಲಿ ಗುಲಾಬಿ, ನೇರಳೆ ಮತ್ತು ನೀಲಿ ಬೆಳಕನ್ನು ಹೊರಸೂಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದರು.

English summary
A 'mysterious incident' takes place after a cursed fish is found in Chile. Suddenly the sky turned pink.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X