ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದಲ್ಲಿ ಮೋಡ ಕವಿದ ವಾತಾವರಣ!

|
Google Oneindia Kannada News

ಲಂಡನ್, ಫೆ. 18 : ಮಂಗಳ ಗ್ರಹದಲ್ಲಿ ಮೋಡ ಕವಿದ ವಾತಾವರಣವಿರುವ ಚಿತ್ರ ವಿಜ್ಞಾನಿಗಳಿಗೆ ಲಭ್ಯವಾಗಿದೆ. ವಿಜ್ಞಾನಿಗಳು ಚಿತ್ರದ ಸತ್ಯಾಸತ್ಯತೆ ಹುಡುಕಾಟದಲ್ಲಿ ನಿರತರಾಗಿದ್ದಾರೆ.

2014 ಮಾರ್ಚ್ ವೇಳೆಯಲ್ಲಿ ಇಂಥ ವೈಚಿತ್ರ ಕಂಡುಬಂದಿದೆ ಎಂದು ಹೇಳಲಾಗಿದೆ. ಈ ಮಂಗಳನ ನೆಲ ಮಟ್ಟದಿಂದ ಸುಮಾರು 250 ಕಿಮೀ ಎತ್ತರದಲ್ಲಿ ಇಂಥದ್ದೊಂದು ಆಕೃತಿ ಪತ್ತೆಯಾಗಿತ್ತು ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.[ಮಂಗಳನ ಅಂಗಳಕ್ಕೆ ಹಾರಲು ಟಿಕೆಟ್ ಪಡೆದ ಭಾರತೀಯರು]

mars

ಹವ್ಯಾಸಿ ಶಾಸ್ತ್ರಜ್ಞರು ಹೇಳುವಂತೆ ಮಂಗಳನಲ್ಲಿ ಇಂಥ ಆಕೃತಿ ಹಿಂದೆಯೂ ಮೂಡಿತ್ತು. ಆದರೆ ಈಗ ಸೆರೆ ಸಿಕ್ಕ ಮೋಡದ ಆಕೃತಿ 5 ಲಕ್ಷ ಕಿಮೀ ವ್ಯಾಪ್ತಿಯಷ್ಟು ಅಗಲವಾಗಿ ಬೆಳೆದಿತ್ತು ಎಂದು ತಿಳಿಸಿದ್ದಾರೆ.

ಆದರೆ ಮಂಗಳನ ಸುತ್ತ ಇರುವ ಯಾವ ಪ್ರಮುಖ ಬಾಹ್ಯಾಕಾಶ ನೌಕೆಯೂ ಸಹ ಇಂಥದ್ದೊಂದು ಆಕೃತಿಯನ್ನು ತನ್ನ ಸೆರೆಹಿಡಿದಿಲ್ಲ. ಆದರೆ ಹಬಲ್ ಬಾಹ್ಯಾಕಾಶ ದೂರದರ್ಶಕವು 1995ರಿಂದ 1999 ಇಸವಿ ನಡುವೆ ಸೆರೆಹಿಡಿದಿದ್ದ ಚಿತ್ರಗಳಲ್ಲಿ ಮತ್ತು ಕೆಲ ಹವ್ಯಾಸಿ ಖಗೋಳ ಶಾಸ್ತ್ರಜ್ಞರು 2011 ರಿಂದ 2014 ರವರೆಗೆ ಸೆರೆಹಿಡಿದ ಚಿತ್ರಗಳಲ್ಲಿ ಮಾತ್ರ ಮೋಡದ ಮಾದರಿಯ ಆಕೃತಿ ಕಂಡುಬಂದಿದೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಒಟ್ಟಿನಲ್ಲಿ ಇದು ಕ್ಯಾಮರಾ ದೋಷದಿಂದ ಬಂದ ಚಿತ್ರವೋ? ಅಥವಾ ನಿಜಕ್ಕೂ ಮಂಗಳನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತೋ? ಎಂಬುದಕ್ಕೆ ವಿಜ್ಞಾನಿಗಳೇ ಉತ್ತರ ಹೇಳಬೇಕಾಗಿದೆ.

English summary
Enormous cloud-like plumes reaching 160 miles above the surface of Mars have left scientists baffled. This is way beyond Mars' normal weather, reaching into the exosphere where the atmosphere merges with interplanetary space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X