ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲೂಚಿಸ್ತಾನ ಮಾನವ ಹಕ್ಕು ಆಯೋಗ ವೆಬ್‌ ಬ್ಲಾಕ್ ಮಾಡಿದ ಪಾಕ್: ಕಾರಣವೇನು?

|
Google Oneindia Kannada News

ಬಲೂಚಿಸ್ತಾನ, ಮೇ 12: ಪಾಕಿಸ್ತಾನವು ಬಲೂಚಿಸ್ತಾನದ ಮಾನವ ಹಕ್ಕು ಆಯೋಗದ ವೆಬ್‌ಸೈಟ್‌ನ್ನು ಬ್ಲಾಕ್ ಮಾಡಿದೆ.

ಈ ಸಂಘಟನೆ ಸ್ವೀಡನ್, ಬ್ರಿಟನ್, ಫ್ರಾನ್ಸ್ ಮತ್ತು ಇತರೆ ಕಲವು ದೇಶಗಳಲ್ಲೂ ಕಾರ್ಯಚರಿಸುತ್ತಿದೆ. ಬಲೂಚಿಸ್ತಾನದ ಮೂಲೆ ಮೂಲೆಗಳಲ್ಲೂ ನಡೆಯುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಅದರ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಿತ್ತು.

ಪಾಕಿಸ್ತಾನದ ಅಧಿಕಾರಿಗಳು ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಬಲೂಚಿಸ್ತಾನದ ಅಧಿಕೃತ ವೆಬ್‌ಸೈಟ್‌ ಅನ್ನು ಅನಿರ್ಧಿಷ್ಟಾವಧಿಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Muzzling Baloch Voices: Pakistan Bans Website Of Balochistan Rights Group

ಅನೇಕ ಸಂಘಟನೆಗಳು ವಿಷಯವನ್ನು ಹೇಳಿಕೊಳ್ಳುತ್ತಿವೆ. ಬಲೂಚಿಸ್ತಾನದಲ್ಲಿ ಪ್ರಿವೆನ್ಷನ್ ಕ್ರೈಮ್ಸ್ ಆಕ್ಟ್ ಇನ್ ಬಲೂಚಿಸ್ತಾನ್ ಬಹಳಷ್ಟು ದುರ್ಬಳಕೆ ಆಗುತ್ತಿದೆ. ಮಾನವ ಹಕ್ಕು ಕಾರ್ಯಕರ್ತರನ್ನು , ರಾಜಕೀಯ ಬಂಡಾಯಗಾರರನ್ನು ಈ ಕಾಯ್ದೆ ಬಳಸಿ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶ

ಸಂಘಟನೆಯ ವೆಬ್‌ಸೈಟ್ ಬ್ಲಾಕ್ ಆಗಿದೆ. ಅದರಲ್ಲಿ ಪಾಕಿಸ್ತಾನ ಸರ್ಕಾರದ ಸಂದೇಶ ಸಪ್ರರ್ಶಿಸಲಾಗುತ್ತಿದೆ. ಹುಷಾರಾಗಿ ಜಾಲಾಡಿ ನೀವು ಪಾಕಿಸ್ತಾನದಲ್ಲಿ ನಿಷೇಧಿಸಲ್ಪ ವಿಷಯಗಳನ್ನು ಹುಡುಕುತ್ತಿದ್ದೀರಿ ಎಂಬ ಎಚ್ಚರಿಕೆ ಸಂದೇಶ ಕಾಣುತ್ತದೆ.

ಬಲೂಚಿಸ್ತಾನದಲ್ಲಿ ಪದೇ ಪದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಭಯವಿಲ್ಲದೆ ಪತ್ರಿಕೋದ್ಯಮ ನಡೆಸುವುದು ಕೂಡ ಕಷ್ಟವಾಗಿದೆ.

English summary
Pakistani authorities have imposed an indefinite ban on the official website of human Rights Commission of Balochistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X