ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಶಿಕ್ಷಿಸುವ ಹಕ್ಕಿದೆ: ಮಲೇಷ್ಯಾ ಮಾಜಿ ಪ್ರಧಾನಿ ವಿವಾದ

|
Google Oneindia Kannada News

ಕ್ವಾಲಾಲಂಪುರ, ಅಕ್ಟೋಬರ್ 31: 'ಮುಸ್ಲಿಮರಿಗೆ ಫ್ರಾನ್ಸ್‌ಅನ್ನು ಶಿಕ್ಷಿಸುವ ಹಕ್ಕು ಇದೆ' ಎನ್ನುವ ಮೂಲಕ ಫ್ರಾನ್ಸ್‌ನಲ್ಲಿ ನಡೆದ ಉಗ್ರರ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಮಲೇಷ್ಯಾದ ಮಾಜಿ ಪ್ರಧಾನಿ ಮಹತಿರ್ ಮೊಹಮ್ಮದ್ ಅವರ ಟ್ವೀಟ್‌ಗಳನ್ನು ಟ್ವಿಟ್ಟರ್ ಅಳಿಸಿ ಹಾಕಿದೆ.

ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಸಮರ್ಥಿಸಿಕೊಳ್ಳುವಂತೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದ 95 ವರ್ಷದ ಮಹತಿರ್, 'ಕೋಪಗೊಳ್ಳಲು ಮತ್ತು ಈ ಹಿಂದೆ ನಡೆದಿದ್ದ ಹತ್ಯಾಕಾಂಡಕ್ಕಾಗಿ ಲಕ್ಷಾಂತರ ಫ್ರೆಂಚ್ ಜನರನ್ನು ಕೊಲ್ಲಲು ಮುಸ್ಲಿಮರಿಗೆ ಹಕ್ಕು ಇದೆ' ಎಂದು ಹೇಳಿದ್ದರು.

ಟ್ಯುನೀಷಿಯಾದ ನಿರಾಶ್ರಿತನೊಬ್ಬ ಫ್ರಾನ್ಸ್‌ನ ನೈಸ್‌ನಲ್ಲಿರುವ ಚರ್ಚ್ ಒಂದರಲ್ಲಿ ಚಾಕು ಬೀಸಿ ಮೂವರ ಹತ್ಯೆ ಮಾಡಿದ ಘಟನೆ ಬಳಿಕ ಅವರು ಈ ಹೇಳಿಕೆ ನೀಡಿದ್ದರು. ಮಹತಿರ್ ಅವರ ಹೇಳಿಕೆಯನ್ನು ಒಳಗೊಂಡ ಟ್ವೀಟ್‌ ಒಂದನ್ನು ಟ್ವಿಟ್ಟರ್ ಹಿಂಸಾಚಾರವನ್ನು ವೈಭವೀಕರಿಸಿದ್ದಕ್ಕಾಗಿ ಅಳಿಸಿ ಹಾಕಿದೆ. ಮಹತಿರ್ ಅವರನ್ನು ಟ್ವಿಟ್ಟರ್‌ನಿಂದಲೇ ನಿಷೇಧಿಸುವಂತೆ ಫ್ರಾನ್ಸ್ ಡಿಜಿಟಲ್ ಸಚಿವರು ಒತ್ತಾಯಿಸಿದ್ದಾರೆ.

 Muslims Have Right To Punish French: Malaysia Ex PM Mahathir

'ನಾನು ನನ್ನ ಬ್ಲಾಗ್‌ನಲ್ಲಿ ಬರೆದ ಅಂಶಗಳನ್ನು ಬೇರೆ ರೀತಿ ತಪ್ಪಾಗಿ ಅರ್ಥೈಸುವ ಪ್ರಯತ್ನಗಳು ನಡೆಯುತ್ತಿರುವುದು ಬೇಸರ ತಂದಿದೆ' ಎಂದು ಮಹತಿರ್ ಪ್ರತಿಕ್ರಿಯಿಸಿದ್ದಾರೆ. 13 ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಅವರು, 'ಮುಸ್ಲಿಮರು ಕಣ್ಣಿಗೆ ಕಣ್ಣು ಎಂಬ ಕಾನೂನನ್ನು ಅನುಸರಿಸಿಲ್ಲ, ಮುಸ್ಲಿಮರು ಹಾಗೆ ಮಾಡುವುದೂ ಇಲ್ಲ. ಫ್ರಾನ್ಸ್ ಕೂಡ ಮಾಡಬಾರದು' ಎಂದು ಅವರು ಹೇಳಿದ್ದಾರೆ.

English summary
Former PM of Malaysia Mahathir Mohamad's tweet Muslims have a right to kill millions of French people sparks cotroversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X