ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್-ಮಸ್ಕ್ ನಡುವೆ ತಿಕ್ಕಾಟ: ಇದು 44 ಶತಕೋಟಿ ಡಾಲರ್ ಕಾನೂನು ಹೋರಾಟ!

|
Google Oneindia Kannada News

ನವದೆಹಲಿ, ಜುಲೈ 20: ಎಲೋನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ಕಾನೂನು ಹೋರಾಟ ಮಂಗಳವಾರ ಡೆಲವೇರ್ ನ್ಯಾಯಾಲಯದಲ್ಲಿ ಶುರುವಾಯಿತು. ಎರಡು ಕಡೆಯ ವಕೀಲರು ವಿಚಾರಣೆಯನ್ನು ಶೀಘ್ರದಲ್ಲೇ ಆರಂಭಿಸಬೇಕು ಎಂಬ ಬಗ್ಗೆ ವಾದಕ್ಕಿಳಿದರು.

ಸಾಮಾಜಿಕ ಮಾಧ್ಯಮದಲ್ಲಿ ದೈತ್ಯ ಕಂಪನಿ ಆಗಿರುವ ಟ್ವಿಟ್ಟರ್ ಅನ್ನು 44 ಶತಕೋಟಿ ಡಾಲರ್ ಮೊತ್ತಕ್ಕೆ ಖರೀದಿಸುವುದಾಗಿ ಕೋಟ್ಯಧಿಪತಿ ಎಲೋನ್ ಮಸ್ಕ್ ಘೋಷಿಸಿದರು. ಶೀಘ್ರದಲ್ಲಿ ಖರೀದಿ ಪ್ರಕ್ರಿಯೆ ಅನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದಲ್ಲಿ ಈ ವಿವಾದವು ತಮ್ಮ ಕಂಪನಿಯ ವ್ಯವಹಾರಗಳಿಗೆ ಧಕ್ಕೆಯನ್ನು ಉಂಟು ಮಾಡುತ್ತದೆ ಎಂಬುದು ಟ್ವಿಟ್ಟರ್ ವಾದವಾಗಿದೆ.

ಒಂದು ದಿಕ್ಕಿನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಟ್ವಿಟ್ಟರ್ ಪ್ರಯತ್ನಿಸುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಆಗಿರುವ ಎಲೋನ್ ಮಸ್ಕ್ ಉಲ್ಟಾ ಹೊಡೆಯಲು ಯತ್ನಿಸುತ್ತಿದ್ದಾರೆ. ಈ ಮೊದಲು ಟ್ವಿಟ್ಟರ್ ಕಂಪನಿಯ ಒಂದು ಷೇರಿಗೆ 54.20 ಡಾಲರ್ ನೀಡುವುದಾಗಿ ಘೋಷಿಸಿದ್ದು, ಈಗ ತಮ್ಮ ಒಪ್ಪಂದದಿಂದ ಹಿಂದೆ ಸರಿಯುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿಯನ್ನು ವರದಿಯಲ್ಲಿ ತಿಳಿದುಕೊಳ್ಳಿ.

ವರ್ಟಿಕಲ್ ವಾದ ಆಲಿಸಿದ ಚಾನ್ಸಲರ್

ವರ್ಟಿಕಲ್ ವಾದ ಆಲಿಸಿದ ಚಾನ್ಸಲರ್

"ಇದು ವಿಧ್ವಂಸಕ ಪ್ರಯತ್ನವಾಗಿದ್ದು, ಅವರು ಟ್ವಿಟ್ಟರ್ ಅನ್ನು ನಡೆಸುವುದಕ್ಕಾಗಿ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ," ಎಂದು ಟ್ವಿಟ್ಟರ್ ಅನ್ನು ಪ್ರತಿನಿಧಿಸುವ ವಕೀಲ ವಿಲಿಯಂ ಸವಿಟ್ ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯಲ್ಲಿ ನ್ಯಾಯಾಲಯದ ಚಾನ್ಸೆಲರ್ ಕ್ಯಾಥಲೀನ್ ಸೇಂಟ್ ಜೂಡ್ ಮೆಕ್ಕಾರ್ಮಿಕ್ ಎದುರು ವಾದ ಮಂಡಿಸಿದರು. ಚಾನ್ಸಲರ್ ಮೆಕ್ಕಾರ್ಮಿಕ್ ವೈದ್ಯಕೀಯ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆ ಆನ್ ಲೈನ್ ಮೂಲಕ ವಾದ-ಪ್ರತಿವಾದವನ್ನು ಆಲಿಸಲಾಯಿತು.

ಟ್ವಿಟ್ಟರ್ ವಿರುದ್ಧ ಎಲೋನ್ ಮಸ್ಕ್ ಆರೋಪ

ಟ್ವಿಟ್ಟರ್ ವಿರುದ್ಧ ಎಲೋನ್ ಮಸ್ಕ್ ಆರೋಪ

ನಕಲಿ ಅಥವಾ "ಸ್ಪ್ಯಾಮ್ ಬಾಟ್", ಟ್ವಿಟರ್ ಖಾತೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸಲು ಕಂಪನಿಯು ವಿಫಲವಾಗಿದೆ. ಇದರ ಮಧ್ಯೆ ಉನ್ನತ ಆಡಳಿತಾಧಿಕಾರಿ ಹಾಗೂ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಮೂಲಕ ಒಪ್ಪಂದದ ನಿಯಮವನ್ನು ಕಂಪನಿಯು ಉಲ್ಲಂಘಿಸಿದೆ ಎಂದು ಎಲೋನ್ ಮಸ್ಕ್ ದೂಷಿಸಿದ್ದಾರೆ.

ಎಲೋನ್ ಮಸ್ಕ್ ಪರ ವಕೀಲರು ಹೇಳುವುದೇನು?

ಎಲೋನ್ ಮಸ್ಕ್ ಪರ ವಕೀಲರು ಹೇಳುವುದೇನು?

ಟೆಸ್ಲಾ ಸಿಇಒ ಆಲೋಚನೆಯು ಟ್ವಿಟ್ಟರ್ ಕಂಪನಿಗೆ ಪಾಲಿಗೆ ಅಪಾಯಕಾರಿ ಪ್ರಯತ್ನವಾಗಿರಲಿದೆ. ಆ ಕಂಪನಿಗೆ ಹಾನಿ ಮಾಡುವುದರಲ್ಲಿ ಮಸ್ಕ್ ಅವರಿಗೆ ಯಾವುದೇ ಆಸಕ್ತಿ ಇಲ್ಲ" ಎಂದು ಮಸ್ಕ್‌ನ ಪರ ವಕೀಲ ಆಂಡ್ರ್ಯೂ ರೋಸ್‌ಮನ್ ಹೇಳಿದ್ದಾರೆ. ಅವರು ಇಡೀ ಮಂಡಳಿಗಿಂತ ಹೆಚ್ಚಿನ ಪಾಲನ್ನು ಹೊಂದಿರುವ ಟ್ವಿಟರ್‌ನ ಎರಡನೇ ಅತಿದೊಡ್ಡ ಷೇರುದಾರರಾಗಿದ್ದಾರ ಎಂಬುದನ್ನು ವಕೀಲರು ಉಲ್ಲೇಖಿಸಿದ್ದಾರೆ.

ಟ್ವಿಟ್ಟರ್ ಪರ ವಕೀಲರು ಹೇಳುವುದೇನು?

ಟ್ವಿಟ್ಟರ್ ಪರ ವಕೀಲರು ಹೇಳುವುದೇನು?

ಟ್ವಿಟ್ಟರ್ ಕಂಪನಿಯು ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ತೆಗೆದುಕೊಳ್ಳುವ ವ್ಯವಹಾರಿಕ ನಿರ್ಧಾರಗಳ ಮೇಲೆ ಪ್ರತಿಯೊಂದು ಅಂಶಗಳು ಪರಿಣಾಮ ಬೀರುತ್ತವೆ. ಈ ಪೈಕಿ ಉದ್ಯೋಗಿಗಳ ನೇಮಕ, ಸರಬರಾಜುದಾರರು ಮತ್ತು ಗ್ರಾಹಕರ ನಡುವಿನ ಸಂಬಂಧ ಎಲ್ಲದರ ಪ್ರಾಮುಖ್ಯತೆಯನ್ನು ಕೋರ್ಟ್ ಎದುರು ಟ್ವಿಟ್ಟರ್ ಪರ ವಕೀಲ ವಿಲಿಯಂ ಸವಿಟ್ ಒತ್ತಿ ಹೇಳಿದರು.

"ಇತಿಹಾಸದಲ್ಲಿ ಅತಿ ದೊಡ್ಡ ಖಾಸಗಿ ವ್ಯವಹಾರಗಳಲ್ಲೇ ಒಂದಾಗಿದದ್ದು, ಈ ಮೊದಲು ಕಂಪನಿಯ ವಹಿವಾಟು ಮತ್ತು ಸಂಬಂಧಿಸಿದ ಎಲ್ಲಾ ಅಂಕಿ-ಅಂಶ ಹಾಗೂ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಹಂತದಲ್ಲಿ ಶತಕೋಟಿಗೂ ಹೆಚ್ಚು ಕ್ರಿಯೆಗಳ ಬಗ್ಗೆ ವಿಶ್ಲೇಷಿಸಬೇಕಾಗುತ್ತದೆ. ಹೀಗಾಗಿ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ," ಎಂದು ಮಸ್ಕ್ ಪರ ವಕೀಲ ರೋಸ್‌ಮನ್ ಹೇಳಿದ್ದಾರೆ.

English summary
Delaware court starts trial on October about Musk-Twitter dispute. Know More about this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X