ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್ ಸಿಇಒ ಪರಾಗ್ ಅಗರವಾಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಸ್ಕ್‌

|
Google Oneindia Kannada News

ಟೆಸ್ಲಾ ಸಿಇಒ ಎಲಾನ್ ಮಸ್ಕ್ $44 ಶತಕೋಟಿ ಟ್ವಿಟರ್ ಒಪ್ಪಂದದಿಂದ ಹೊರಬಂದಿದ್ದಾರೆ. ಇದು ಟೆಕ್ ಉದ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಸ್ಕ್ ಇತ್ತೀಚೆಗೆ ಟ್ವಿಟ್ಟರ್ ಖರೀದಿ ಒಪ್ಪಂದದಿಂದ ಹೊರಬರುವ ಮೊದಲು ಟ್ವಿಟರ್ ಸಿಇಒ ಪರಾಗ್ ಅಗರವಾಲ್‌ಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೊಸ ವರದಿಯಾಗಿದೆ. Twitter ಒಪ್ಪಂದವನ್ನು ಪೂರ್ಣಗೊಳಿಸಲು ಕಂಪನಿ ತೊಂದರೆ ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಮಸ್ಕ್‌ ತಿಳಿಸಿದ್ದಾರೆ.

ಮಸ್ಕ್ ಟ್ವಿಟರ್ ಒಪ್ಪಂದದಿಂದ ಹಿಂದೆ ಸರಿಯಲು ಒಂದು ಪ್ರಮುಖ ಕಾರಣವೆಂದರೆ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿನ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಬಗ್ಗೆ ಟ್ವಿಟರ್ ತನಗೆ ನಿಖರವಾದ ಮಾಹಿತಿಯನ್ನು ಒದಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಖಾತೆಗಳನ್ನು ಗುರುತಿಸುವ ಮತ್ತು ಅಮಾನತುಗೊಳಿಸುವ ಪ್ರಕ್ರಿಯೆಗಳ ಬಗ್ಗೆ ಟ್ವಿಟರ್ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಜೂನ್ 28 ರಂದು ಮಸ್ಕ್ ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಮೊಕದ್ದಮೆಯಿಂದ ತಿಳಿದು ಬಂದಿದೆ. "ನಿಮ್ಮ ವಕೀಲರು ಈ ಸಂಭಾಷಣೆಗಳನ್ನು ತೊಂದರೆ ಉಂಟುಮಾಡಲು ಬಳಸುತ್ತಿದ್ದಾರೆ. ಅದು ನಿಲ್ಲಬೇಕು" ಎಂದು ಅವರು ಹೇಳಿದ್ದಾರೆ.

Musk sent a warning message to Twitter CEO Parag Agrawal

ಟ್ವಿಟರ್ ಒಪ್ಪಂದದಿಂದ ಹಿಂದೆ ಸರಿಯುವ ಮಸ್ಕ್ ನಿರ್ಧಾರವು ಸಂಚಲನ ಮೂಡಿಸಿದೆ. ಅವರ ಹಲವಾರು ಟ್ವೀಟ್‌ಗಳು ಅವರು ಇನ್ನು ಮುಂದೆ ಒಪ್ಪಂದದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಸುಳಿವು ನೀಡಿವೆ. ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದು ಮಸ್ಕ್ ಮೊದಲು ಟ್ವೀಟ್ ಮಾಡಿದ್ದಾರೆ.

ಸ್ಪ್ಯಾಮ್ ಬಾಟ್‌ಗಳ ಬಗ್ಗೆ ಮಾಹಿತಿ ನೀಡಲು ಟ್ವಿಟರ್ ವಿಫಲವಾಗಿದೆ ಎಂದು ಆರೋಪಿಸಿ ಒಪ್ಪಂದವನ್ನು ಹಿಂಪಡೆಯುವುದಾಗಿ ಮಸ್ಕ್ ತಿಳಿಸಿದ್ದಾರೆ. ಜುಲೈ 9 ರಂದು ಅವರು ಅಂತಿಮವಾಗಿ ಒಪ್ಪಂದವನ್ನು ಕೊನೆಗೊಳಿಸಿದರು

ಆದಾಗ್ಯೂ, ಎಲೋನ್ ಮಸ್ಕ್ ಅವರನ್ನು ಅಷ್ಟು ಸುಲಭವಾಗಿ ಬಿಡಲು ಟ್ವಿಟರ್ ಯಾವುದೇ ಮನಸ್ಥಿತಿಯಲ್ಲಿಲ್ಲ. ಒಪ್ಪಂದವನ್ನು ಅಂತ್ಯಗೊಳಿಸದಂತೆ ತಡೆಯಲು ಟ್ವಿಟರ್ ಕಾನೂನು ಮಾರ್ಗವನ್ನು ತೆಗೆದುಕೊಂಡಿದೆ.

Musk sent a warning message to Twitter CEO Parag Agrawal

ಟ್ವಿಟರ್ ಅಧ್ಯಕ್ಷ ಬ್ರೆಟ್ ಟೇಲರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಮೈಕ್ರೋ-ಬ್ಲಾಗಿಂಗ್ ಸೈಟ್ $44 ಬಿಲಿಯನ್ ಒಪ್ಪಂದದಿಂದ ಹಿಂದೆ ಸರಿದಿದ್ದಕ್ಕಾಗಿ ಮಸ್ಕ್ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

"ಟ್ವಿಟ್ಟರ್ ಮಂಡಳಿಯು ಮಸ್ಕ್ ಅವರೊಂದಿಗೆ ಒಪ್ಪಿದ ಬೆಲೆ ಮತ್ತು ನಿಯಮಗಳ ಮೇಲಿನ ವಹಿವಾಟನ್ನು ಕೊನೆಗೊಳಿಸಲು ಸಿದ್ದವಾಗಿಲ್ಲ ಮತ್ತು ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಿದೆ. ನಾವು ಡೆಲವೇರ್ ಕೋರ್ಟ್ ಆಫ್ ಚಾನ್ಸರಿಯಲ್ಲಿ ಮೇಲುಗೈ ಸಾಧಿಸುತ್ತೇವೆ ಎಂದು ನಮಗೆ ವಿಶ್ವಾಸವಿದೆ" ಎಂದು ಟೇಲರ್ ಬರೆದಿದ್ದಾರೆ.

English summary
Elon Musk sends warning message to Twitter CEO Parag Agrawal. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X