ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿ-ಪತ್ನಿ ಮತ್ತು ಅವನು... 2015ರ ಭೀಕರ ಹತ್ಯೆಯ ರಹಸ್ಯ ಬಯಲು!

|
Google Oneindia Kannada News

ಮೆಲ್ಬರ್ನೋ, ಜೂನ್ 23: ಆಸ್ಟ್ರೇಲಿಯದ ಮೆಲ್ಬರ್ನೋದಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು 2015 ರಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.

ಹತ್ಯೆಯ ಬೆನ್ನು ಹತ್ತಿದ ಪೊಲಿಸರಿಗೆ ಮೊದಮೊದಲು ಯಾವುದೇ ಕುರುಹೂ ಸಿಕ್ಕಿರಲಿಲ್ಲ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದಲ್ಲಿ ಸೈನೈಡ್ ಪತ್ತೆಯಾಗುತ್ತಿದ್ದಂತೆಯೇ ಪೊಲಿಸರ ಅನುಮಾನ ಆತನ ಪತ್ನಿಯತ್ತ ತಿರುಗಿತ್ತು.

ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು?ಗೌರಿ ಹತ್ಯೆಯ ಮಿಸ್ಟರಿ : ಅಸಲಿಗೆ ಟ್ರಿಗರ್ ಎಳೆದದ್ದು ಯಾರು?

ಈ ಕೊಲೆಯ ತನಿಖೆಗೆ ಸಾಕಷ್ಟು ಸಮಯ ತೆಗೆದುಕೊಂಡ ಪೊಲಿಸರು ಕೊನೆಗೂ ಪತ್ನಿ ಮತ್ತು ಆಕೆಯ ಪ್ರಿಯತಮ ಸೇರಿ ಸ್ಯಾಮ್ ಅವರನ್ನು ಕೊಂದಿದ್ದಾರೆಂದು ಪತ್ತೆ ಮಾಡಿದ್ದಾರೆ. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅರುಣ್ ಗೆ 27 ಮತ್ತು ಸೋಫಿಯಾಗೆ 22 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Murder case: Kerala woman and lover jailed for 22 years in Australia

ಸೋಫಿಯಾ ಸ್ಯಾಮ್ ಎಂಬ 34 ವರ್ಷ ವಯಸ್ಸಿನ ಮಹಿಳೆ, 36 ವರ್ಷ ವಯಸ್ಸಿನ ಅರುಣ್ ಕಮಲಸನಾನ್ ಎಂಬ ತನ್ನ ಮಾಜಿ ಪ್ರಿಯತಮನೊಂದಿಗೆ ಸೇರಿ ಕಿತ್ತಳೆ ಜ್ಯೂಸಿನಲ್ಲಿ ಸೈನೈಡ್ ಹಾಕಿ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದರು.

ಈ ಕುರಿತು ಅನುಮಾನ ವ್ಯಕ್ತವಾಗಿತ್ತಾದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ನಂತರ ಸೋಫಿಯಾ ಅವರ ಡೈರಿಯಲ್ಲಿ ಅರುಣ್ ಮತ್ತು ತಾವು ಪ್ರೀತಿಸುತ್ತಿರುವ ಬಗ್ಗೆ ಎಲ್ಲೋ ಒಂದು ಕಡೆ ಬರೆದಿದ್ದನ್ನೇ ಎಳೆಯನ್ನಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ಕೃತ್ಯ ಬಯಲಿಗೆಳೆಯುವಲ್ಲಿ ಸಫಲರಾಗಿದ್ದಾರೆ.

ಈ ಕೃತ್ಯವನ್ನು ಇಲ್ಲಿನ ನ್ಯಾಯಾಲಯ, ಅತ್ಯಂತ ಹೀನ ಕೃತ್ಯ ಎಂದು ವ್ಯಾಖ್ಯಾನಿಸಿದೆ.

English summary
A Kerala woman and her former lover have been jailed for over 20 years by an Australian court in Melbourne for fatally poisoning her husband with cyanide-laced orange juice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X